ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಕೊಲೆ ಯತ್ನ

Posted By:
Subscribe to Oneindia Kannada

ಬರ್ಲಿನ್, ಆಗಸ್ಟ್ 26: ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ರನ್ನು ಕೊಲೆ ನಡೆಸಲು ಪ್ರೇಗ್ ನಲ್ಲಿ ವಿಫಲ ಯತ್ನ ನಡೆಸಲಾಗಿದೆ, ಪ್ರೇಗ್ ಪೊಲೀಸರು ಶಸ್ತ್ರಸಜ್ಜಿತ ಶಂಕಿತ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.

ಪ್ರೇಗ್ ನಲ್ಲಿರುವ ಜರ್ಮನಿ ಚಾನ್ಸಲರ್ ಏಂಜೆಲಾ ಅವರು ವಿಮಾನ ನಿಲ್ದಾಣದಿಂದ ತೆರಳುವಾಗ ಕಪ್ಪು ಬಣ್ಣದ ಮರ್ಸಿಡಿಸ್ ವಾಹನವೊಂದು ಅವರ ಬೆಂಗಾವಲಿನ ಪಡೆ ಸೇರಿಕೊಂಡಿದೆ. ಈ ಬಗ್ಗೆ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯ ಪೊಲೀಸರು, ಅತಿಕ್ರಮ ಪ್ರವೇಶಿಸಿದ ದುಷ್ಕರ್ಮಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.[ಮ್ಯೂನಿಕ್ ಶಾಪಿಂಗ್ ಮಾಲ್ ನಲ್ಲಿ ಗುಂಡಿನ ದಾಳಿ]

'Assassination attempt' on German Chancellor Angela Merkel

ಜೆಕ್ ಪ್ರಧಾನಮಂತ್ರಿ ಬೊಹುಸ್ಲಾವ್ ಸೊಬೊಕಾರನ್ನು ಭೇಟಿಯಾಗಲು ಪ್ರೇಗ್ ಗೆ ಏಂಜೆಲಾ ಮರ್ಕೆಲ್ ಬಂದಿದ್ದಾರೆ. ಈ ಸಂದರ್ಭದಲ್ಲಿ ಮರ್ಕೆಲ್ ಅವರ ಬೆಂಗಾವಲಿನ ವಾಹನಗಳ ಸಾಲಿಗೆ ಶಂಕಿತ ಕಪ್ಪು ಬಣ್ಣದ ಮರ್ಸಿಡೆಸ್ ಕಾರು ಸೇರಿಕೊಂಡಿದೆ. ದುಷ್ಕರ್ಮಿಯು ಚಾನ್ಸಲರ್ ಅವರಿದ್ದ ಕಾರಿನತ್ತ ತಾನಿದ್ದ ಕಾರನ್ನು ನುಗ್ಗಿಸಲು ಯತ್ನಿಸಿದ್ದಾನೆ.[ಜರ್ಮನಿಯ ಗುರುದ್ವಾರದಲ್ಲಿ ಸ್ಫೋಟ]

ತಕ್ಷಣವೇ ಎಚ್ಚೆತ್ತುಕೊಂಡ ಪೊಲೀಸರು ಶಂಕಿತ ವ್ಯಕ್ತಿಯಿದ್ದ ಕಾರನ್ನು ತಡೆ ಹಿಡಿದರು. ಪೊಲೀಸರು ಶೂಟೌಟ್ ಮಾಡುವ ಬೆದರಿಕೆ ಹಾಕಿದ ಬಳಿಕ ವಾಹನ ನಿಲ್ಲಿಸಿದ ಆ ವ್ಯಕ್ತಿ ಪೊಲೀಸರಿಗೆ ಶರಣಾಗಿದ್ದಾನೆ.[ಜರ್ಮನಿ ಕಂಪನಿಗಳಿಗೆ ಬೆಂಗಳೂರು ಅಚ್ಚುಮೆಚ್ಚು ಏಕೆ]

ಯುರೋಪ್‌ನಲ್ಲಿ ಕಳೆದ ಒಂದು ವರ್ಷದಿಂದ ಸರಣಿ ಭಯೋತ್ಪಾದಕ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ಅದರಲ್ಲೂ ಫ್ರಾನ್ಸ್, ಜರ್ಮನಿ ಹಾಗೂ ಬೆಲ್ಜಿಯಂನಲ್ಲಿ ಹೆಚ್ಚಿನ ಭದ್ರತೆ ವಹಿಸಲಾಗಿದೆ.

ಇರಾಕಿ ಉಗ್ರ ಸಂಘಟನೆಗಳು ಡ್ರೋನ್ ಆಧಾರಿತ ಎಚ್ ಡಿ ಕೆಮರಾವುಳ್ಳ ಸಾಧನಗಳನ್ನು ಬಳಸಿ ಆತ್ಮಹತ್ಯಾ ದಾಳಿ ನಡೆಸಲು ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.(ಏಜೆನ್ಸೀಸ್)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Police have arrested a man after a suspected assassination attempt on German Chancellor Angela Merkel was foiled. An armed man in a black Mercedes 4×4 was detained after he allegedly tried to join Merkel's motorcade in Prague, Metro reported.
Please Wait while comments are loading...