ಡೊನಾಲ್ಡ್ ಟ್ರಂಪ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

Subscribe to Oneindia Kannada

ಮನೀಲಾ, ನವೆಂಬರ್ 13: 15ನೇ ಆಸೀಯಾನ್-ಭಾರತ ಶೃಂಗಸಭೆಯಲ್ಲಿ ಪಾಲ್ಗೊಂಡ ನಂತರ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಫಿಲಿಪ್ಪೀನ್ಸ್ ಅಧ್ಯಕ್ಷ ರೊಡ್ರಿಗೋ ದುತಾರ್ತೆ ಜತೆ ಪ್ರಧಾನಿ ನರೇಂದ್ರ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಭಾರತ ಮತ್ತು ಅಮೆರಿಕಾ ನಡುವಿನ ಸಂಬಂಧ ವೃದ್ಧಿಸುತ್ತಿದೆ. ನಾವು ಏಷ್ಯಾ ಮತ್ತು ಮಾನವೀಯತೆಯ ಭವಿಷ್ಯದ ಒಳಿತಿಗಾಗಿ ಕೆಲಸ ಮಾಡುತ್ತಿದ್ದೇವೆ. ಭಾರತ ಮತ್ತು ಅಮೆರಿಕಾ ನಡುವಿನ ಬಂಧವೇ ಅಂಥಹದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ASEAN summit: Modi holds bilateral talks with Donald Trump

ಇದಕ್ಕೂ ಮೊದಲು ಲಾಸ್ ಬನೊಸ್ ನಲ್ಲಿರುವ ಅಂತಾರಾಷ್ಟ್ರೀಯ ಭತ್ತದ ಕೃಷಿ ಸಂಶೋಧನಾ ಕೇಂದ್ರ(IRRI)ಕ್ಕೆ ಮೋದಿ ಭೇಟಿ ನೀಡಿದರು. ಈ ಸಂಶೋಧನಾ ಕೇಂದ್ರದಲ್ಲಿ ಹೊಸದಾಗಿ ಸಂಶೋಧಿಸಿರುವ ಭತ್ತದ ತಳಿಯೊಂದಕ್ಕೆ ಭಾರತದ ಪ್ರಧಾನಿ ಮೋದಿ ಅವರ ಹೆಸರಿಡಲು ಸಂಶೋಧನಾ ಕೇಂದ್ರ ಮುಂದಾಗಿದೆ.
ಮೂರು ದಿನಗಳ ಭೇಟಿಗಾಗಿ ಭಾನುವಾರ ಫಿಲಿಪ್ಪೀನ್ಸ್ ರಾಜಧಾನಿಗೆ ಭೇಟಿ ನೀಡಿದ ಮೋದಿ ಆಸಿಯಾನ್ - ಭಾರತ ಶೃಂಗಸಭೆ ಹಾಗೂ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದರ ಜತೆ ಜಪಾನ್ ಮತ್ತು ಆಸ್ಟ್ರೇಲಿಯಾ ನಾಯಕರೊಂದಿಗೆಯೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Prime Minister Narendra Modi will have a packed schedule in Manila on Monday as he attends the opening ceremony of the 15th ASEAN - India summit and holds bilateral meetings with US President Donald Trump and Philippines President Rodrigo Duterte.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ