ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಅನ್ವರ್‌ ಉಲ್‌ ಹಕ್‌ ಕಾಕರ್‌ ನೇಮಕ

ಇಸ್ಲಮಾಬಾದ್‌, ಆಗಸ್ಟ್ 12: ನ್ಯಾಷನಲ್‌ ಅಸೆಂಬ್ಲಿ'ಯನ್ನ ಅಧ್ಯಕ್ಷ ಆರೀಫ್‌ ಅಲವಿ ನಿನ್ನೆ ಅಧಿಕೃತವಾಗಿ ವಿಸರ್ಜಿಸಿದ ಬಳಿಕ ಪಾಕಿಸ್ತಾನದ ಹಂಗಾಮಿ ಅಧ್ಯಕ್ಷರ ನೇಮಕವಾಗಿದೆ.

ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ಬಲೂಚಿಸ್ತಾನ್ ಅವಾಮಿ ಪಕ್ಷದ ಪಾಕಿಸ್ತಾನಿ ಸೆನೆಟರ್ ಅನ್ವರ್ ಉಲ್ ಹಕ್ ಕಾಕರ್​ ಅವರನ್ನು ಆಯ್ಕೆ ಮಾಡಲಾಗಿದೆ. ಇವರ ಆಯ್ಕೆಯನ್ನು ಪ್ರಧಾನಿ ಕಾರ್ಯಾಲಯವೇ ಘೋಷಿಸಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

anwar-ul-haq-kakar-appointed

ಪಾಕ್​ ಸಂಸತ್ ವಿಸರ್ಜನೆ ಬಳಿಕ ಕಕ್ಕರ್ ಅವರ ಹೆಸರನ್ನು ಹಂಗಾಮಿ ಪ್ರಧಾನಿಯಾಗಿ ಶನಿವಾರ ಪ್ರಧಾನಿ ಕಾರ್ಯಾಲಯ ತಿಳಿಸಿದೆ. ನಿರ್ಗಮಿತ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ನಿರ್ಗಮಿತ ವಿರೋಧ ಪಕ್ಷದ ನಾಯಕ ರಾಜಾ ರಿಯಾಜ್ ಇಂದು ನಡೆದ ಸಭೆಯಲ್ಲಿ ಕಾಕರ್ ಹೆಸರಿನ ಬಗ್ಗೆ ಒಮ್ಮತಕ್ಕೆ ಬಂದರು. ಅಧ್ಯಕ್ಷ ಆರಿಫ್ ಅಲ್ವಿ ಕಾಕರ್ ಅವರ ನೇಮಕವನ್ನು ಅನುಮೋದಿಸಿದ್ದಾರೆ.

ಪ್ರಧಾನಿ ಶೆಹಬಾಜ್ ಷರೀಫ್ ಅಧಿಕಾರಾವಧಿ ಆಗಸ್ಟ್ 9ರಂದು ಸಂಸತ್ತಿನ ವಿಸರ್ಜನೆಯೊಂದಿಗೆ ಮುಕ್ತಾಯಗೊಂಡಿತ್ತು. ಹಂಗಾಮಿ ಪ್ರಧಾನಿಯ ಆಯ್ಕೆಗೆ ಇಂದು ಕೊನೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಹಂಗಾಮಿ ಪ್ರಧಾನಿಯಾಗಿ ಅನ್ವರ್ ಉಲ್​ ಹಕ್​ ಕಾಕರ್​ ಆಯ್ಕೆ ಇಂದು ಅಧಿಕೃತವಾಗಿ ಘೋಷಣೆಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+