• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Landmark Deal: ಈ ರಷ್ಯಾ-ಉಕ್ರೇನ್ ಒಪ್ಪಂದಕ್ಕೆ ಆ ವಿಶ್ವಸಂಸ್ಥೆ ಮಧ್ಯಸ್ಥಿಕೆ

|
Google Oneindia Kannada News

ಕೀವ್, ಆಗಸ್ಟ್ 17: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ಭೇಟಿ ಮಾಡಲಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ತಿಳಿಸಿದ್ದಾರೆ.

"ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆಹ್ವಾನದ ನೀಡಿದ ಹಿನ್ನೆಲೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಮತ್ತು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಜೊತೆ ತ್ರಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.

Breaking: ಝಪೊರಿಝಿಯಾ ಅಣು ಸ್ಥಾವರದ ಮೇಲೆ ಶೆಲ್ ದಾಳಿBreaking: ಝಪೊರಿಝಿಯಾ ಅಣು ಸ್ಥಾವರದ ಮೇಲೆ ಶೆಲ್ ದಾಳಿ

ವಿಶ್ವಸಂಸ್ಥೆಯ ಬ್ರೋಕರ್ ಒಪ್ಪಂದದ ಅಡಿಯಲ್ಲಿ ಧಾನ್ಯ ರಫ್ತು ಪುನರಾರಂಭಗೊಂಡಿರುವ ಒಡೆಸಾದ ಕಪ್ಪು ಸಮುದ್ರದ ಬಂದರಿಗೆ ಶುಕ್ರವಾರ ಮೂವರು ಭೇಟಿ ನೀಡಲಿದ್ದಾರೆ ಎಂದು ಡುಜಾರಿಕ್ ಮಾಹಿತಿ ನೀಡಿದ್ದಾರೆ.

ಈ ಕಪ್ಪು ಸಮುದ್ರದ ನೆಲದಲ್ಲಿ ಆಮದು ರಫ್ತು ನಿರ್ಬಂಧವನ್ನು ತೆರವುಗೊಳಿಸುವುದರ ಮೂಲಕ ಆಹಾರ ಧಾನ್ಯದ ಬಿಕ್ಕಟ್ಟು ನಿರ್ವಹಣೆಗೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸುತ್ತಿದೆ. ರಷ್ಯಾ-ಉಕ್ರೇನ್ ಕಾದಾಟದ ಮಧ್ಯೆ ವಿಶ್ವಸಂಸ್ಥೆಯು ವಹಿಸಿರುವ ಮಧ್ಯಸ್ಥಿಕೆ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಲ್ಯಾಂಡ್ ಮಾರ್ಕ್ ಒಪ್ಪಂದದ ಹಿಂದಿನ ಉದ್ದೇಶವೇನು?

ಲ್ಯಾಂಡ್ ಮಾರ್ಕ್ ಒಪ್ಪಂದದ ಹಿಂದಿನ ಉದ್ದೇಶವೇನು?

ರಷ್ಯಾ ಮತ್ತು ಉಕ್ರೇನ್ ಯುದ್ಧದ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಆಹಾರ ಪೂರೈಕೆ ಬಿಕ್ಕಟ್ಟು ಸೃಷ್ಟಿ ಆಯಿತು. ಈ ಆಹಾರ ಬಿಕ್ಕಟ್ಟು ನೀಗಿಸುವ ಉದ್ದೇಶದಿಂದ ಜುಲೈ 22ರಂದು ವಿಶ್ವಸಂಸ್ಥೆ ಮತ್ತು ಟರ್ಕಿಯ ಜೊತೆಗೆ ಉಕ್ರೇನ್ ಮತ್ತು ರಷ್ಯಾ ರಾಷ್ಟ್ರಗಳು ಲ್ಯಾಂಡ್ ಮಾರ್ಕ್ ಡೀಲ್(ಹೆಗ್ಗುರುತು ಒಪ್ಪಂದ)ಕ್ಕೆ ಸಹಿ ಹಾಕಿದವು. ಕಳೆದ ತಿಂಗಳು ವಿಶ್ವಸಂಸ್ಥೆ ಬೆಂಬಲಿತ ಒಪ್ಪಂದದ ಅಡಿಯಲ್ಲಿ ಮೂರು ಕಪ್ಪು ಸಮುದ್ರದ ಬಂದರುಗಳನ್ನು ನಿರ್ಬಂಧದಿಂದ ಮುಕ್ತಗೊಳಿಸಲಾಯಿತು. ಇದರಿಂದ ನೂರಾರು ಸಾವಿರ ಟನ್ ಉಕ್ರೇನಿಯನ್ ಧಾನ್ಯವನ್ನು ಖರೀದಿದಾರ ರಾಷ್ಟ್ರಗಳಿಗೆ ರಫ್ತು ಮಾಡುವುದಕ್ಕೆ ಸಾಧ್ಯವಾಯಿತು.

ಉಕ್ರೇನ್-ರಷ್ಯಾ ಒಪ್ಪಂದಕ್ಕೆ ಯುಎನ್ ಮಧ್ಯಸ್ಥಿಕೆ

ಉಕ್ರೇನ್-ರಷ್ಯಾ ಒಪ್ಪಂದಕ್ಕೆ ಯುಎನ್ ಮಧ್ಯಸ್ಥಿಕೆ

ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ಮತ್ತು ಉಕ್ರೇನಿಯನ್ ಮೂಲಸೌಕರ್ಯ ಸಚಿವ ಒಲೆಕ್ಸಾಂಡರ್ ಕುಬ್ರಕೋವ್ ಅವರು ಬ್ಲಾಕ್ ಸಮುದ್ರ ವಿತರಣಾ ಮಾರ್ಗಗಳನ್ನು ಪುನಃ ತೆರೆಯುವ ಕುರಿತು ವಿಶ್ವಸಂಸ್ಥೆ ಮತ್ತು ಟರ್ಕಿಯ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಆದರೆ ಎರಡೂ ರಾಷ್ಟ್ರಗಳ ನಾಯಕರು ಒಂದೇ ರೀತಿಯ ಒಪ್ಪಂದಕ್ಕೆ ಅಂಕಿತ ಹಾಕಿದರು.

ಎಲ್ವಿವ್‌ನಲ್ಲಿ ಗುಟೆರಸ್-ಝೆಲೆನ್ಸ್ಕಿ ಭೇಟಿ

ಎಲ್ವಿವ್‌ನಲ್ಲಿ ಗುಟೆರಸ್-ಝೆಲೆನ್ಸ್ಕಿ ಭೇಟಿ

ಪಶ್ಚಿಮ ಉಕ್ರೇನ್‌ನ ಎಲ್ವಿವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗುಟೆರಸ್ ಭೇಟಿ ಮಾಡಲಿದ್ದಾರೆ. ಈ ವೇಳೆ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪರಿಸ್ಥಿತಿ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ. ಇದರ ಜೊತೆಗೆ ಈ ಘರ್ಷಣೆಗೆ ರಾಜಕೀಯವಾಗಿ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗುತ್ತದೆ ಎಂದು ವಕ್ತಾರ ಡುಜಾರಿಕ್ ಹೇಳಿದ್ದಾರೆ.

ಉಕ್ರೇನ್-ರಷ್ಯಾ ನಡುವೆ ಆರೋಪ-ಪ್ರತ್ಯಾರೋಪ

ಉಕ್ರೇನ್-ರಷ್ಯಾ ನಡುವೆ ಆರೋಪ-ಪ್ರತ್ಯಾರೋಪ

ಕಳೆದ ಫೆಬ್ರವರಿ 24ರಂದು ರಷ್ಯಾ ಸೇನೆಯು ಅಧಿಕೃತವಾಗಿ ಉಕ್ರೇನ್ ನೆಲದಲ್ಲಿ ಯುದ್ಧವನ್ನು ಪ್ರಾರಂಭಿಸಿತು. ಅಲ್ಲಿಂದ ನಡೆದ ನಿರಂತರ ದಾಳಿಯ ನಂತರ ಸ್ವಲ್ಪ ಅವಧಿವರೆಗೂ ರಷ್ಯಾ ಸೈಲೆಂಟ್ ಆಗಿತ್ತು. ಆದರೆ ಇತ್ತೀಚಿಗೆ ರಷ್ಯಾದ ಪಡೆಗಳು ಸ್ವಾಧೀನಪಡಿಸಿಕೊಂಡ ಪೂರ್ವ ಉಕ್ರೇನ್ ಪರಮಾಣು ಸ್ಥಾವರದ ಬಳಿ ಶೆಲ್ ದಾಳಿ ನಡೆಸಲಾಗಿತ್ತು. ಈ ದಾಳಿಗೆ ಸಂಬಂಧಿಸಿದಂತೆ ಉಕ್ರೇನ್ ಮತ್ತು ರಷ್ಯಾ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದವು. ಇದರ ಮಧ್ಯೆ ಈ ಸ್ಥಾವರವನ್ನು ಇಂದಿಗೂ ಉಕ್ರೇನಿಯನ್ ತಂತ್ರಜ್ಞರು ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಯುರೋಪಿನ ಅತಿ ದೊಡ್ಡದಾದ ಉಕ್ರೇನ್‌ನ ಝಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದಲ್ಲಿ ದುರಂತದ ಅಪಾಯವು "ಪ್ರತಿದಿನವೂ ಹೆಚ್ಚುತ್ತಿದೆ" ಎಂದು ನಗರದ ಮೇಯರ್ ಹೇಳಿದ್ದಾರೆ.

English summary
UN Secretary-General Antonio Guterres and Turkish President Recep Tayyip Erdogan will meet Ukrainian President Volodymyr Zelenskyy in Ukraine on August 18 says United Nations spokesman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X