Get Updates
Get notified of breaking news, exclusive insights, and must-see stories!

ನ್ಯೂ ಜೆರ್ಸಿಯಲ್ಲಿ ಭಾರತೀಯ ಟೆಕ್ಕಿಯ ಕೊಲೆ

ಶುಕ್ರವಾರ ಮನೆಯಿಂದಲೇ ಕಂಪನಿಯ ಸೇವೆಯಲ್ಲಿ ತೊಡಗಿದ್ದಾಗ ಶಶಿಕಲಾ ಕೊಲೆಯಾಗಿದ್ದಾರೆಂದು ನ್ಯೂ ಜೆರ್ಸಿ ಪೊಲೀಸರು ತಿಳಿಸಿದ್ದಾರೆ.

ನ್ಯೂಜೆರ್ಸಿ, ಮಾರ್ಚ್ 25: ಆಂಧ್ರಪ್ರದೇಶ ಮೂಲದವರಾದ ಮಹಿಳಾ ಟೆಕ್ಕಿ ಹಾಗೂ ಅವರ 7 ವರ್ಷದ ಪುತ್ರನನ್ನು ದುಷ್ಕರ್ಮಿಗಳು ಅವರ ಮನೆಯಲ್ಲೇ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎನ್. ಶಶಿಕಲಾ (38) ತಮ್ಮ ಪತಿ ಎನ್. ಹನುಮಂತ ರಾವ್ ಜತೆ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದರು. ಗುರುವಾರ (ಮಾರ್ಚ್ 23) ರಾತ್ರಿ ಸುಮಾರು 9 ಗಂಟೆ ಹೊತ್ತಿಗೆ ಕಂಪನಿಯಿಂದ ಮನೆಗೆ ಹನುಮಂತ ರಾವ್ ಅವರು ಮನೆಗೆ ಹಿಂದಿರುಗಿದಾಗ ಘಟನೆ ಬೆಳಕಿಗೆ ಬಂದಿದೆ.

andhra-pradesh-woman-techie-young-son-found-dead-in-new-jersey-home

ಅಂದು ಶಶಿಕಲಾ ಕಂಪನಿಗೆ ಹೋಗಿರಲಿಲ್ಲ. ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯದಲ್ಲಿ (ವರ್ಕ್ ಫ್ರಂ ಹೋಮ್) ಕೆಲಸ ಮಾಡಿದ್ದರು. ಆ ವೇಳೆ, ಅವರ ಹಾಗೂ ಅವರ ಮಗನ ಕೊಲೆಯಾಗಿದೆ ಎಂದು ಹೇಳಲಾಗಿದೆ.

ಈ ಕೊಲೆಗಳನ್ನು ಭಾರತೀಯರ ವಿರೋಧಿ ಕುಕೃತ್ಯ ಎಂದು ಪರಿಗಣಿಸಲಾಗದು ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಬೇರೆಯದ್ದೇ ಕಾರಣಕ್ಕಾಗಿ ನಡೆದಿರುವ ಕೊಲೆಗಳು ಎಂಬುದು ಸ್ಪಷ್ಟವಾಗಿದೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಭಾರತದಲ್ಲಿರುವ ಶಶಿಕಲಾ ಅವರ ತಂದೆ- ತಾಯಿ, ಹನುಮಂತ ರಾವ್ ಮೇಲೆಯೇ ಅನುಮಾನ ಪಟ್ಟಿದ್ದಾರೆ. ಹನುಮಂತ ರಾವ್ ಗೆ ನ್ಯೂಜೆರ್ಸಿಯ ಸ್ಥಳೀಯ ಮಹಿಳೆಯೊಬ್ಬರ ಜತೆ ಅನೈತಿಕ ಸಂಬಂಧವಿದ್ದು, ತಮ್ಮ ಮಗಳ ಹಾಗೂ ಮೊಮ್ಮಗನ ಹತ್ಯೆಗೆ ಅವರ ಆ ಸಂಬಂಧವೇ ಮೂಲ ಕಾರಣವಾಗಿದೆ ಎಂದು ದೂರಿದ್ದಾರೆ.

ದಂಪತಿಗಳು, ಕಳೆದ 12 ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದರು ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+