Russia Ukraine: ರಷ್ಯಾ ಯುದ್ಧ ವಿಮಾನ ಉಡಾಯಿಸಿದ ಉಕ್ರೇನ್!
ಉಕ್ರೇನ್: ರಷ್ಯಾ ವಿರುದ್ಧ ಯುದ್ಧ ಆರಂಭವಾದ ಬಳಿಕ ಉಕ್ರೇನ್ ಪೂರ್ತಿ ನೆಲಕಚ್ಚಿದೆ. ಇಂತಹ ಹೊತ್ತಲ್ಲೇ ನ್ಯಾಟೋ & ಅಮೆರಿಕ ಸಿಕ್ಕಾಪಟ್ಟೆ ಸಹಾಯ ಮಾಡಿ, ಉಕ್ರೇನ್‌ಗೆ ಬೆನ್ನೆಲುಬಾಗಿವೆ. ಹೀಗಾಗಿ ಹೊಸ ಎನರ್ಜಿ ಜೊತೆಗೆ ರಣತಂತ್ರ ರೂಪಿಸಿ ರಷ್ಯಾ ವಿರುದ್ಧ ಭೀಕರ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾ ಸೇನೆಗೆ ಸೇರಿದ 4 ಯುದ್ಧ ವಿಮಾನ ಹೊಡೆದುರುಳಿಸಿದೆ. ಅದು ಹೇಗೆ? ಎಲ್ಲಿ? ನೋಡೋಣ ಬನ್ನಿ.
ಅತ್ತ ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ನಡೆಯುತ್ತೆ, ಇತ್ತ ರಷ್ಯಾ ಗಡಿಯಲ್ಲೂ ದಾಳಿ ಆರಂಭವಾಗಿದೆ. ಈ ಧೈರ್ಯ ಉಕ್ರೇನ್‌ಗೆ ಹೇಗೆ ಬಂತು? ಅಂತಾ ಇಡೀ ಜಗತ್ತಿಗೇ ಪ್ರಶ್ನೆ ಮೂಡಿದ್ದಾಗ. ಅಮೆರಿಕದ ಬಂಡವಾಳವೂ ಬಯಲಾಗಿತ್ತು. ಇದೀಗ ಅಮೆರಿಕ, ಬ್ರಿಟನ್ & ನ್ಯಾಟೋ ಪಡೆಗಳು ಮಾಡುತ್ತಿರುವ ಸಹಾಯದಿಂದ ಉಕ್ರೇನ್‌ನ ಸೇನಾ ಬಲ ಹೆಚ್ಚಾಗಿದ್ದು, ರಷ್ಯಾದ ಯುದ್ಧ ವಿಮಾನಗಳನ್ನ ಹೊಡೆದು ಹೊಡೆದು ನೆಲಕ್ಕೆ ಬೀಳಿಸುತ್ತಿದೆ. ಈ ಪೈಕಿ ರಷ್ಯಾ ಮತ್ತು ಉಕ್ರೇನ್ ಗಡಿ ಭಾಗದಲ್ಲಿ ರಷ್ಯಾಗೆ ಸೇರಿದ 4 ಯುದ್ಧ ವಿಮಾನ ಬೀಳಿಸಿಲಾಗಿದೆ.

ಬಲಿಯಾಗಿದ್ದು ಯಾವೆಲ್ಲಾ ವಿಮಾನ?
ರಷ್ಯಾ ಈಗಾಗಲೇ ನೂರಾರು ಡ್ರೋನ್, ನೂರಾರು ಯುದ್ಧ ವಿಮಾನ ಹಾಗೂ ಲಕ್ಷಾಂತರ ಸೈನಿಕರನ್ನು ಇದೇ ಯುದ್ಧದಲ್ಲಿ ಕಳೆದುಕೊಂಡಿದೆ ಎನ್ನಲಾಗುತ್ತಿದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಭೀಕರ ಪೆಟ್ಟು ತಿನ್ನುತ್ತಿದೆ ರಷ್ಯಾ. ಈಗ ರಷ್ಯಾಗೆ ಸೇರಿದ 2 ಜೆಟ್, 2 ಮಿಲಿಟರಿ ಹೆಲಿಕಾಪ್ಟರ್ ಉಕ್ರೇನ್ ದಾಳಿಗೆ ಧೂಳ್ ಧೂಳ್ ಆಗಿವೆ. ಉಕ್ರೇನ್ ಮತ್ತು ರಷ್ಯಾ ಗಡಿಭಾಗ ಬ್ರಯಾಂಸ್ಕ್ ವಲಯದಲ್ಲಿ ರಷ್ಯಾದ ಯುದ್ಧ ವಿಮಾನಗಳನ್ನ ಉಕ್ರೇನ್ ಸೇನೆ ಹೊಡೆದುರುಳಿಸಿದೆ. ಈ ಮೂಲಕ ರಷ್ಯಾ ಅಧ್ಯಕ್ಷರ ಕೋಪ ಡಬಲ್ ಆಗಿದೆ.
'ನ್ಯಾಯ ಮತ್ತು ಕರ್ಮದ ಫಲ'
ರಷ್ಯಾ SU-34 ಬಾಂಬರ್ ಜೆಟ್ & SU-35 ಯುದ್ಧವಿಮಾನ ಹಾಗೂ 2 MI-8 ಹೆಲಿಕಾಪ್ಟರ್ ಕಳೆದುಕೊಂಡಿದೆ. ಈ ದಾಳಿ ನಡೆದಿದ್ದು ಹೇಗಂದ್ರೆ ಉಕ್ರೇನ್‌ನ ಚೆರ್ನಿಹಿವ್ ವಲಯದಲ್ಲಿ ರಷ್ಯಾ ಕೆಲವು ಪ್ರದೇಶಗಳನ್ನ ಟಾರ್ಗೆಟ್ ಮಾಡಿ ದಾಳಿ ಆರಂಭಿಸಿತ್ತು. ಕ್ಷಿಪಣಿ ಮತ್ತು ಬಾಂಬ್ ದಾಳಿ ನಡೆಸಲು ಸಿದ್ಧವಾಗಿದ್ದ ಸಂದರ್ಭದಲ್ಲಿ ಜೆಟ್ ಜೊತೆ ಬೆಂಗಾವಲು ಹೆಲಿಕಾಪ್ಟರ್‌ಗಳನ್ನೂ ಬೀಳಿಸಲಾಗಿದೆ. ಈ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ (Volodymyr Zelenskyy) ಪ್ರತಿಕ್ರಿಯೆ ನೀಡಿದ್ದು, 'ನ್ಯಾಯ ಮತ್ತು ಕರ್ಮದ ಫಲ' ಎಂದಿದ್ದಾರೆ.

ಮುಂದಿನ ಪರಿಸ್ಥಿತಿ ಏನಾಗಬಹುದು?
ರಷ್ಯಾ ಮಿಲಿಟರಿ ವಿಚಾರದಲ್ಲಿ ಎಷ್ಟು ಗಟ್ಟಿಮುಟ್ಟು ಎಂಬುದು ಎಲ್ಲರಿಗೂ ಗೊತ್ತು. ಮನಸ್ಸು ಮಾಡಿದರೆ ಈ ಕ್ಷಣವೇ ಉಕ್ರೇನ್ ಉಡೀಸ್ ಆಗುತ್ತೆ. ಆದರೂ ಉಕ್ರೇನ್ ಯುದ್ಧದಲ್ಲಿ (Russia Ukraine War) ಹಿನ್ನಡೆ ಆದ ರೀತಿ ನಟಿಸುತ್ತಾ, ಪುಟಿನ್ ದೊಡ್ಡದಾಗಿ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಇದರ ನಡುವೆ ಉಕ್ರೇನ್ ಅಧ್ಯಕ್ಷ ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲ ಪಡೆದು, ರಷ್ಯಾ ಮೇಲೆ ದಾಳಿ ಮಾಡಿ ಗೆಲ್ಲಬಲ್ಲೆ ಎಂಬ ಭ್ರಮೆ ತುಂಬಿಕೊಂಡ ಆರೋಪವಿದೆ. ಇದೇ ಸಂದರ್ಭದಲ್ಲಿ ರಷ್ಯಾ ಯುದ್ಧ ವಿಮಾನ ಟಾರ್ಗೆಟ್ ಮಾಡಿದೆ ಉಕ್ರೇನ್ ಸೇನೆ.
ಅಮೆರಿಕದ ಕುತಂತ್ರ ಇದೆಯಾ?
ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಇರಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ರು ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಮನೆ ಮೇಲೆ ನಡೆದ ದಾಳಿಯಲ್ಲೂ ಅಮೆರಿಕ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿದೆ.

ಉಕ್ರೇನ್ ಅಧ್ಯಕ್ಷನಿಗೆ ಮುಹೂರ್ತ?
ಹೌದು, ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬ ಆರೋಪದ ನಡುವೆ, ರಷ್ಯಾ ಪಡೆಗಳು ಡ್ರೋನ್ ಮತ್ತು ಕ್ಷಿಪಣಿ ದಾಳಿಯ ಮೂಲಕ ಝೆಲೆನ್‌ಸ್ಕಿಯನ್ನ ಟಾರ್ಗೆಟ್ ಮಾಡಲು ಮುಂದಾಗಿವೆ ಎಂದು ಆರೋಪಿಸಲಾಗಿದ್ದು, ಇದು ಸಂಚಲನ ಸೃಷ್ಟಿಸಿದೆ.
ನೇರವಾಗಿ ಉಕ್ರೇನ್ ಬೆನ್ನಿಗೆ ಅಮೆರಿಕ!
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಸೇರಿ ನ್ಯಾಟೋ ಪಡೆಗಳು ನೀಡುತ್ತಿರುವ ಸಹಾಯವೇ ಉಕ್ರೇನ್ ಸೇನೆಯ ಕೃತ್ಯಗಳಿಗೆ ಕಾರಣ ಎಂಬ ಆರೋಪ ಇದೆ. ಇಷ್ಟುದಿನ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದ ಈ ರಾಷ್ಟ್ರಗಳು, ನೇರವಾಗಿ ಉಕ್ರೇನ್ ನೆರವಿಗೆ ನಿಂತಿವೆ. ಅಮೆರಿಕ ಸೇರಿದಂತೆ ನ್ಯಾಟೋ ಪಡೆಗಳು ಸದ್ಯ ಉಕ್ರೇನ್‌ಗೆ ಲಕ್ಷ ಲಕ್ಷ ಕೋಟಿ ನೆರವು ನೀಡುತ್ತಿವೆ. ಈ ಮೂಲಕ ರಷ್ಯಾ ಮುಗಿಸಲು ಪ್ರಯತ್ನಿಸುತ್ತಿವೆ, ಆದರೆ ಅದು ಕನಸಿನ ಮಾತು ಇದರಿಂದ ಅಮೆರಿಕ & ಪಟಾಲಂ ತೊಂದರೆ ಅನುಭವಿಸುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಷ್ಯಾ ಕಮಾಂಡರ್‌ಗಳ ಹತ್ಯೆ?
ಬಖ್‌ಮತ್ ಉಕ್ರೇನ್‌ಗೆ ಸೇರಿದ್ದು, ಆದ್ರ ಯುದ್ಧ ಆರಂಭವಾದ ನಂತರ ರಷ್ಯಾ ಬಖ್‌ಮತ್ ನಗರವನ್ನ ಆಕ್ರಮಿಸಿದೆ. ಹೀಗಾಗಿ ಬಖ್‌ಮತ್ ಸಿಟಿ ಮೇಲೆ ವಿನಾಶಕಾರಿ ರಂಜಕ ಬಾಂಬ್ ಎಸೆದಿದೆ ಉಕ್ರೇನ್ ಎಂಬ ಗಂಭೀರ ಆರೋಪವನ್ನ ರಷ್ಯಾ ಇತ್ತೀಚೆಗೆ ಮಾಡಿತ್ತು. ಈ ಮಧ್ಯೆ ರಷ್ಯಾ ಮಿಲಿಟರಿಯ ಇಬ್ಬರು ಕಮಾಂಡರ್‌ಗಳನ್ನ ಉಕ್ರೇನ್ ಕೊಲೆ ಮಾಡಿದೆ ಎಂದು ರಷ್ಯಾ ಸೇನೆ ಆರೋಪಿಸಿದೆ. ಇದು ರಷ್ಯಾ ಅಧ್ಯಕ್ಷರ ಕೆಂಡದಂಥ ಕೋಪಕ್ಕೆ ಕಾರಣವಾಗಿದ್ದು ಮುಂದೆ ಏನಾಗಲಿದೆಯೋ? ಗೊತ್ತಿಲ್ಲ.
ಒಟ್ನಲ್ಲಿ ರಷ್ಯಾ ಯುದ್ಧ ವಿಮಾನಗಳನ್ನ ಹೊಡೆದು ಉರುಳಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಉಕ್ರೇನ್‌ನ ಗಡಿ ಭಾಗದಲ್ಲಿ ಪರಿಸ್ಥಿತಿ ಸೂಕ್ಷ್ಮವಗಿದೆ. ಹೀಗಾಗಿ ರಷ್ಯಾ ಸೇನೆ ಕಟ್ಟೆಚ್ಚರ ವಹಿಸಿದ್ದು, ಶತ್ರುಗಳ ದಾಳಿಗೆ ತಕ್ಕ ಉತ್ತರ ಕೊಡಲು ಸಜ್ಜಾಗಿದೆ. ಆದರೆ ಉಕ್ರೇನ್ ಈಗ ನ್ಯಾಟೋ ಮತ್ತು ಅಮೆರಿಕ ನೀಡುತ್ತಿರುವ ಸಹಾಯದಿಂದ ದೊಡ್ಡ ಮಟ್ಟದಲ್ಲಿ ದಾಳಿ ಮಾಡುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇಂತಹ ದಾಳಿಗಳನ್ನ ಇನ್ನಷ್ಟು ಉಗ್ರವಾಗಿ ಎದುರಿಸಲು ರಷ್ಯಾ ಸೇನೆ ಕೂಡ ಸನ್ನದ್ಧವಾಗಿದೆ.












Click it and Unblock the Notifications