ರಷ್ಯಾ VS ಅಮೆರಿಕ: ಉಕ್ರೇನ್‌ಗೆ ₹3 ಲಕ್ಷ ಕೋಟಿ ದಾನ!

ವಾಷಿಂಗ್ಟನ್: ಶತ್ರು ನಾಶಕ್ಕೆ ಪಣತೊಟ್ಟಿರುವ ಅಮೆರಿಕ ರಷ್ಯಾ ವಿರುದ್ಧ ಹೊಸ ಆಟ ಶುರುಮಾಡಿದೆ. ಉಕ್ರೇನ್ & ರಷ್ಯಾ ಯುದ್ಧದಲ್ಲಿ ಪರೋಕ್ಷವಾಗಿ ಕೈಹಾಕುತ್ತಿರುವ ದೊಡ್ಡಣ್ಣ, ಯುದ್ಧ ಆರಂಭವಾದ ಕ್ಷಣದಿಂದ ಈವರೆಗೆ ಸುಮಾರು 3 ಲಕ್ಷ ಕೋಟಿ ರೂಪಾಯಿ ಅಂದರೆ 36 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣವನ್ನ ಉಕ್ರೇನ್‌ಗೆ ದಾನ ಮಾಡಿದೆಯಂತೆ! ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಕೆರಳಿಸಿದೆ.

ಯೆಸ್, ರಷ್ಯಾ ಒಂದನ್ನ ಮುಗಿಸಿದರೆ ಅಮೆರಿಕ ವಿರುದ್ಧ ಮಾತನಾಡುವ ಯಾವುದೇ ದೇಶ ಉಳಿಯಲಾರದು. ಚೀನಾಗೆ ಆಘಾತ ನೀಡಿ ತಾನೇ ಪವರ್‌ಫುಲ್ ಆಗೋಕೆ ಅಮೆರಿಕ ಇನ್ನಿಲ್ಲದ ತಂತ್ರ ನಡೆಸುತ್ತಿದೆ ಎಂಬ ಗಂಭೀರ ಆರೋಪವಿದೆ. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ತನಗೇನೂ ಆಗದಿದ್ದರೂ ಮೂಗು ತೂರಿಸಿ, ಉಕ್ರೇನ್‌ಗೆ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ದಾನ ನೀಡಿದೆ. ಇದು ಅಮೆರಿಕ & ರಷ್ಯಾ ಘರ್ಷಣೆಗೆ ದಾರಿ ಮಾಡಿಕೊಟ್ಟಿದೆ.

America once again announced big budget military aid to Ukraine

ಉಕ್ರೇನ್‌ಗೆ ವಿನಾಶಕಾರಿ ವೆಪನ್ಸ್ ದಾನ!

ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದೆ ಅಮೆರಿಕ. ಹೀಗೆ ದಾನ ಕೊಡುತ್ತಿರುವ ಶಸ್ತ್ರಾಸ್ತ್ರಗಳಲ್ಲಿ, ಆಕಾಶದಿಂದಲೇ ದಾಳಿ ಮಾಡುವ ಸಾಮರ್ಥ್ಯ ಹೊಂದಿರುವ ಹೈಡ್ರಾ-70 ರಾಕೆಟ್‌ಗಳು ಕೂಡ ಸೇರಿವೆ. ಜೊತೆಗೆ ಮಿಸೈಲ್, ಬಾಂಬ್, ಮದ್ದುಗುಂಡು ಹೀಗೆ ಲೆಕ್ಕವಿಲ್ಲದಷ್ಟು ಶಸ್ತ್ರಾಸ್ತ್ರ ಅಮೆರಿಕದಿಂದ ಉಕ್ರೇನ್ ಉಗ್ರಾಣ ಸೇರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾ ಕೂಡ ರೊಚ್ಚಿಗೇಳುತ್ತಿದೆ, ಹಾಗೇ ಸೈಲೆಂಟ್ ಆಗಿ ಇರಿ ಅಂತಾ ಅಮೆರಿಕಗೆ ಎಚ್ಚರಿಸುತ್ತಿದೆ.

ವ್ಲಾದಿಮಿರ್ ಪುಟಿನ್ VS ಜೋ ಬೈಡನ್

ರಷ್ಯಾ ಸೇನೆ ಉಕ್ರೇನ್ ರಾಜಧಾನಿಯಲ್ಲಿ ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಆದ್ರೆ ಅಮೆರಿಕ ಮತ್ತದರ ಪಟಾಲಂ ಸೇರಿ ತುಂಬಾ ತೊಂದರೆ ಕೊಡುತ್ತಿವೆ. ಉಕ್ರೇನ್ ಸೇನೆಗೆ ಅಗತ್ಯವಿರುವ ವೆಪನ್ಸ್ ಒದಗಿಸುವ ಕೆಲಸದ ಜೊತೆಯಲ್ಲಿ, ನ್ಯಾಟೋ ಪಡೆಯ ಸದಸ್ಯರು ನೇರವಾಗಿ ಉಕ್ರೇನ್ ಪರ ನಿಂತಿದ್ದಾರೆ ಎಂಬ ಆರೋಪವಿದೆ. ಇದನ್ನ ನೋಡಿ, ನೋಡಿ ಉಗ್ರರೂಪ ತೋರಿಸಿರುವ ಪುಟಿನ್ 'ತಂಟೆಗೆ ಬಂದ್ರೆ ತಟ್ಟಿಬಿಡ್ತೀವಿ' ಎಂದು ಅಮೆರಿಕದ ನಾಯಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಈ ಮೂಲಕ ವ್ಲಾದಿಮಿರ್ ಪುಟಿನ್ VS ಜೋ ಬೈಡನ್ ಕಿತ್ತಾಟ ಶುರುವಾಗಿದೆ.

America once again announced big budget military aid to Ukraine

ಚಳಿಗಾಲದ ಯುದ್ಧಕ್ಕೆ ಈಗಲೇ ತಯಾರಿ?

ಅಮೆರಿಕ ಇದೀಗ ನೀಡುತ್ತಿರುವ ಶಸ್ತ್ರಾಸ್ತ್ರಗಳು ರಷ್ಯಾ ವಿರುದ್ಧ ಉಕ್ರೇನ್ ಘರ್ಷಣೆ ನಡೆಸಲು ಚಳಿಗಾಲಕ್ಕೆ ನೀಡುತ್ತಿರುವ ಉಡುಗೊರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಏಕೆಂದರೆ ಚಳಿಗಾಲದ ಹೊತ್ತಿಗೆ ರಷ್ಯಾ ಮತ್ತು ಉಕ್ರೇನ್ ಸಂಪೂರ್ಣ ಮರಗಟ್ಟಿರುತ್ತವೆ. ಎಲ್ಲೆಲ್ಲೂ ಹಿಮ ಆವರಿಸಿ, ತಾಪಮಾನ ಮೈನಸ್ ಡಿಗ್ರಿಗೆ ತಲುಪಿಬಿಡುತ್ತೆ. ಇಂತಹ ಹೊತ್ತಲ್ಲಿ ತನ್ನ ಸ್ನೇಹಿತನಿಗೆ ಸಹಾಯ ಮಾಡಲು ಮುಂದಾಗಿದೆ ಅಮೆರಿಕ. ಜೊತೆಗೆ ನ್ಯಾಟೋ ಪಡೆಗಳು ಕೂಡ ಉಕ್ರೇನ್ ಬೆಂಬಲಕ್ಕೆ ನಿಂತು ಪರೋಕ್ಷವಾಗಿ ರಷ್ಯಾ ವಿರುದ್ಧ ಹೋರಾಡುತ್ತಿವೆ.

ಉಕ್ರೇನ್ ಅಧ್ಯಕ್ಷ ರಷ್ಯಾ ಟಾರ್ಗೆಟ್?

ರಷ್ಯಾ ಅಧ್ಯಕ್ಷರ ಸರ್ಕಾರಿ ನಿವಾಸದ ಮೇಲೆ ದಾಳಿ ನಡೆದಿರುವುದು ರಷ್ಯಾ ಸೇನೆಯನ್ನ ರೊಚ್ಚಿಗೆಬ್ಬಿಸಿದೆ. ಈ ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಇದೇ ಕಾರಣ ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಭೀಕರ ದಾಳಿಗೆ ಸಿದ್ಧತೆ ಆರಂಭಿಸಿದೆ. ಅದರಲ್ಲೂ ರಷ್ಯಾದ ಮೊದಲ ಟಾರ್ಗೆಟ್ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಎಂಬುದನ್ನ ಈಗ ಪರೋಕ್ಷವಾಗಿ ತಿಳಿಸಿದೆ ರಷ್ಯಾ ಸೇನೆ. ಈ ಬೆಳವಣಿಗೆ ನಡುವೆ ಉಕ್ರೇನ್ ಸೇನೆಗೆ ಅಮೆರಿಕ 300 ಮಿಲಿಯನ್ ಡಾಲರ್ ನೆರವು ಘೋಷಿಸಿದೆ. ಈ ಮೂಲಕ ಕಳೆದ 1 ವರ್ಷದಲ್ಲಿ ಅಮೆರಿಕ 36 ಬಿಲಿಯನ್ ಡಾಲರ್ ನೆರವು ನೀಡಿದಂತಾಗಿದೆ.

ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ತಿಕ್ಕಾಟದಲ್ಲಿ ಇಡೀ ಜಗತ್ತು ಭಯಗೊಂಡಿದೆ. ಯುದ್ಧದಲ್ಲಿ ಅಮೆರಿಕ ಪರೋಕ್ಷವಾಗಿ ಎಂಟ್ರಿ ಆಗುತ್ತಿರುವುದು, ರಷ್ಯಾ ಮತ್ತು ಅಮೆರಿಕ ನಡುವೆ ಬೆಂಕಿ ಹೊತ್ತಿಕೊಳ್ಳುವಂತೆ ಮಾಡುತ್ತಿದೆ. ಇದೆಲ್ಲಾ ಯಾವಾಗ ಮುಗಿಯುತ್ತೆ ಅಂತಾ ಜಗತ್ತು ಕಾಯುತ್ತಿದ್ದರೂ ಪ್ರಯೋಜನ ಆಗುತ್ತಿಲ್ಲ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧವನ್ನ 3ನೇ ಮಹಾಯುದ್ಧದ ತಯಾರಿ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+