‘ಕ್ವಾಡ್’ ಮೂಲಕ ಕೌಂಟರ್ ಕೊಡಲು ಸಜ್ಜಾದ ಅಮೆರಿಕ?

ಅಮೆರಿಕ ಇದೀಗ ಚೀನಾಗೆ ಕೌಂಟರ್ ಕೊಡಲು ಮತ್ತೊಂದು ದೊಡ್ಡ ಸಾಹಸಕ್ಕೆ ಕೈಹಾಕಿದ ರೀತಿ ಕಾಣುತ್ತಿದೆ. ಜಾಗತಿಕವಾಗಿ ಚೀನಾ ವಿರುದ್ಧ ಒಕ್ಕೂಟ ರಚಿಸಲು, ಅಮೆರಿಕಗೆ ಅವಕಾಶ ಸಿಕ್ಕಾಗಲೆಲ್ಲಾ ಪ್ರಯತ್ನ ಮಾಡುತ್ತಾ ಬಂದಿದೆ. ಈಗಲೂ ಅದೇ ರೀತಿ ಭಾರತವನ್ನು ಜೊತೆಗೆ ಸೇರಿಸಿಕೊಂಡು, ಇದೀಗ ಚೀನಾ ವಿರುದ್ಧ ರಚನೆ ಆಗಿರುವ ದೇಶಗಳ ಒಕ್ಕೂಟದ ಶೃಂಗಸಭೆ ನಡೆಸಲು ಮುಂದಾಗಿದೆ. ಹಾಗಾದರೆ ಈ ಶೃಂಗಸಭೆ ಮೂಲಕ ಯಾವ ಮೆಸೇಜ್ ಕೊಡಲಿದೆ ಅಮೆರಿಕ? ಭಾರತಕ್ಕೆ ಇದರಿಂದ ಉಪಯೋಗ ಆಗುತ್ತಾ? ಬನ್ನಿ ತಿಳಿಯೋಣ.

ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದ್ದು, ನವೆಂಬರ್ 5ಕ್ಕೆ ಮತದಾನ ಕೂಡ ಮುಗಿಯಲಿದೆ. ಹೀಗಿದ್ದಾಗ, ಚೀನಾಗೆ ಬಿಸಿ ಮುಟ್ಟಿಸಿ, ಭಾರತ ಸೇರಿದಂತೆ ಏಷ್ಯಾ ಸುತ್ತಲೂ ಇರುವ ದೇಶಗಳನ್ನ ಒಗ್ಗೂಡಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮುಂದೆ ಬಂದಿರುವಂತೆ ಕಾಣುತ್ತಿದೆ. ಅದರಲ್ಲೂ ಚೀನಾ ಜೊತೆಗೆ ಗಡಿ ಹಂಚಿಕೊಂಡಿರುವ ಭಾರತದ ಜೊತೆ ಇದರ ಬಗ್ಗೆ ಗಾಢವಾದ ಚರ್ಚೆ ನಡೆಸಬೇಕಿದೆ ಅಮೆರಿಕ. ಹೀಗಾಗಿಯೇ ಇದೀಗ ಮಹತ್ವದ ಶೃಂಗಸಭೆ ನಡೆಸಲು ಮುಂದಾಗಿದೆ ಅಮೆರಿಕ. ಹಾಗಾದ್ರೆ ಇದರಿಂದ ಚೀನಾಗೆ ಹೇಗೆ ಶಾಕ್ ಸಿಗಲಿದೆ? ಈ ಶೃಂಗಸಭೆ ಮೂಲಕ ಭಾರತಕ್ಕೆ ಏನು ಲಾಭ? ಮುಂದೆ ಓದಿ.

America Is Announced This About The Quad Summit

ಮಹತ್ವದ 'ಕ್ವಾಡ್‌' ಸಭೆಗೆ ಸ್ವಾಗತ!

'ಕ್ವಾಡ್‌' ಒಕ್ಕೂಟದ ಶೃಂಗಸಭೆಯ ನಡೆಸಲು ಅಮೆರಿಕ ಇದೀಗ ತಯಾರಿ ಆರಂಭ ಮಾಡಿದೆ. ಹೀಗಾಗಿ ಮಹತ್ವದ ಘೋಷಣೆ ಕೂಡ ಹೊರಡಿಸಿದೆ. ಮುಂದಿನ ವಾರ ಅಂದ್ರೆ, ಸೆಪ್ಟೆಂಬರ್ 21 ರಂದು 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆ ನಡೆಯಲಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಈ ಶೃಂಗಸಭೆಯನ್ನ ನಡೆಸಿಕೊಡಲಿದ್ದಾರೆ. ಜೋ ಬೈಡನ್ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಕೊನೆಯ, 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆ ಇದಾಗಲಿದೆ. ಯಾಕಂದ್ರೆ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಯಿಂದಲೇ ಹಿಂದೆ ಸರಿದಿರುವ ಜೋ ಬೈಡನ್, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ತಮ್ಮ ಸ್ಥಾನ ಬಿಟ್ಟು ಹೋಗಲಿದ್ದಾರೆ. ಆ ನಂತರ ಹೊಸ ಅಧ್ಯಕ್ಷರು ಅಮೆರಿಕದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಭಾರತದ ಪರ ಪ್ರಧಾನಿ ಮೋದಿ ಭೇಟಿ

ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಗೆ ಭಾರತ ಸೇರಿದಂತೆ, ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸುವರು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಲಿದ್ದಾರೆ. ಹಾಗೇ ಭಾರತದ ಪರ ಖುದ್ದಾಗಿ, ಪ‍್ರಧಾನಿ ನರೇಂದ್ರ ಮೋದಿ ಅವರೇ ಮುಂದಿನ ವಾರ ಅಮೆರಿಕಗೆ ತೆರಳಿ ಶೃಂಗಸಭೆಯಲ್ಲಿ ಭಾಗವಹಿಸುವರು ಎಂದು ತಿಳಿಸಲಾಗಿದೆ.

'ಕ್ವಾಡ್‌'ನ ಶೃಂಗಸಭೆ ಜಾಗತಿಕ ಮಟ್ಟದಲ್ಲಿ ಭಾರಿ ಗಮನ ಸೆಳೆದಿದೆ. ಹಾಗೇ 'ಕ್ವಾಡ್‌' ಒಂದು ರಾಜತಾಂತ್ರಿಕ ಸಹಭಾಗಿತ್ವದ ಒಕ್ಕೂಟ ಆಗಿದೆ. ಭಾರತದ ಜೊತೆಗೆ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಜಪಾನ್‌ 'ಕ್ವಾಡ್‌' ಒಕ್ಕೂಟದ ಸದಸ್ಯ ರಾಷ್ಟ್ರಗಳಾಗಿವೆ. ಈ ರಾಷ್ಟ್ರಗಳು ಇದೀಗ ಮಹತ್ವದ ಸಭೆ ನಡೆಸಲು ಸಿದ್ಧತೆಯನ್ನ ಕೈಗೊಂಡಿದ್ದು, ದೂರದ ಅಮೆರಿಕದಲ್ಲಿ ಸಭೆಗಾಗಿ ತಯಾರಿ ಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+