ನೀರಿನ ಮೂಲಕ ದೇಹ ಸೇರುತ್ತಿದೆ ಮೆದುಳು ತಿನ್ನುವ ‘ಹುಳು’!
ನ್ಯೂಯಾರ್ಕ್: ಅಮೆರಿಕ ಅನ್ನೋ ಹೈಬ್ರೀಡ್ ನಾಡಲ್ಲಿ ಮನುಷ್ಯನ ಜೀವಕ್ಕೆ ಗ್ಯಾರಂಟಿಯೇ ಇಲ್ಲದಂತಾಗಿದೆ ಅನ್ನೋ ಆರೋಪವಿದೆ. ಅದ್ರಲ್ಲೂ ಕೊರೊನಾ ಸಮಯದಲ್ಲಿ ಹತ್ತಾರು ಲಕ್ಷ ಜನ ಬಲಿಯಾಗಿದ್ದರು, ಇದೀಗ ಮತ್ತೊಂದು ವಿನಾಶಕಾರಿ ವೈರಸ್ ಅಮೆರಿಕನ್ನರ ಜೀವ ತೆಗೆಯುತ್ತಿದೆ. ನೀರಿನ ಮೂಲಕ ದೇಹ ಸೇರುತ್ತಿರುವ ಮೆದುಳು ತಿನ್ನುವ 'ಹುಳು' ಮನುಷ್ಯರ ಪ್ರಾಣ ತೆಗೆಯುತ್ತಿದೆ!
ಅಮೆರಿಕದ ಜನರು ಒಂದಿಲ್ಲೊಂದು ವೈರಸ್‌ಗೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ಅಪ್ಪಳಿಸಿದ ಬಳಿಕ ಅಮೆರಿಕ ಅಕ್ಷರಶಃ ನಲುಗಿ ಹೋಗಿದೆ. ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದ್ದ ಅಮೆರಿಕದ ಬುಡ ಅಲುಗಾಡಿದೆ. ಈ ಹೊತ್ತಲ್ಲೇ ಅಮೆರಿಕದಲ್ಲಿ ಹೊಸ ಹೊಸ ರೋಗ ಕಾಣಿಸುತ್ತಿದೆ. ಅಮೆರಿಕನ್ನರ ಆಹಾರ ಪದ್ಧತಿ ಇನ್ನಿತರ ಸಮಸ್ಯೆ ವೈರಸ್‌ಗಳಿಗೆ ವೇದಿಕೆ ಒದಗಿಸಿದೆ ಎಂಬ ಆರೋಪ ಕೂಡ ಇದೆ. ಈ ಮಧ್ಯೆ ಅಮೆರಿಕದಲ್ಲಿ ದಕ್ಷಿಣದ ರಾಜ್ಯಗಳ ಜನರನ್ನ ನಲುಗಿಸಿದ್ದ ಮೆದುಳು ತಿನ್ನುವ 'ಹುಳು' ಈಗ ಉತ್ತರದ ರಾಜ್ಯಗಳಿಗೂ ವ್ಯಾಪಿಸಿದೆಯಂತೆ.

ಮೆದುಳು ತಿನ್ನುವ ವೈರಸ್ ಇದು!
ಅಂದಹಾಗೆ ಮೆದುಳು ತಿನ್ನುವ ಅಮೀಬಾ ಅಮೆರಿಕನ್ನರಿಗೆ ಬರಸಿಡಿಲಿನಂತೆ ಅಪ್ಪಳಿಸಿದೆ. 'ನಾಗ್ಲೆರಿಯಾ ಫೌಲೆರಿ' ಅಥವಾ ಮೆದುಳು ತಿನ್ನುವ ಅಮೀಬಾ ಕಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಆರ್ಭಟದ ಬಳಿಕ ಇದೀಗ ಮೆದುಳು ತಿನ್ನುವ 'ಹುಳು'ಗಳ (Brain Eating Amoeba) ಆರ್ಭಟವು ಶುರುವಾಗಿದೆ. ಹವಾಮಾನ ವೈಪರಿತ್ಯದ ಪರಿಣಾಮ ದಕ್ಷಿಣ ಅಮೆರಿಕದ ಮೆದುಳು ತಿನ್ನುವ ವೈರಸ್, ಉತ್ತರ ಅಮೆರಿಕದಲ್ಲೂ ಆವರಿಸುತ್ತಿದೆ. ಹೀಗಾಗಿ ಕೋಟ್ಯಂತರ ಜನ ಮತ್ತೊಮ್ಮೆ ಸಾವಿನ ಸುಳಿಗೆ ಸಿಲುಕಿದ್ದಾರಂತೆ.
ಮೊದಲು ಮೂಗು.. ನಂತರ ಮೆದುಳು!
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ವೈರಸ್ ಒಂದು ಏಕಕೋಶ ಜೀವಿ, ಅಂದ್ರೆ ಇದು ಅಮೀಬಾ. ಮೊದಲು ಮನುಷ್ಯನ ಮೂಗಿನ ಒಳಗೆ ಪ್ರವೇಶ ಮಾಡುವ ವೈರಸ್, ಅಲ್ಲಿಂದ ನೇರ ಮೆದುಳು ಸೇರಿ ನಂತರ ಬೆನ್ನುಹುರಿಗೂ ನುಸುಳುತ್ತದೆ. ಹೀಗೆ ಮೆದುಳು ಸೇರಿದ ವೈರಸ್ ಮನುಷ್ಯನ ಮೆದುಳನ್ನ ತಿನ್ನಲು ಪ್ರಾರಂಭಿಸಿ, ಕೊನೆಗೆ ಜೀವ ತೆಗೆಯುತ್ತದೆ. ಹೀಗಾಗಿ 'ನಾಗ್ಲೆರಿಯಾ ಫೌಲೆರಿ' ಡೆಡ್ಲಿ ವೈರಸ್ ಆಗಿದ್ದು ಎಚ್ಚರಿಕೆ ವಹಿಸುವಂತೆ ಅಮೆರಿಕದ ಸ್ಥಳೀಯ ಸರ್ಕಾರಗಳು ಗಂಭೀರ ಸಂದೇಶ ರವಾನಿಸಿವೆ.
ಮನೆ ಟ್ಯಾಂಕರ್‌ನಲ್ಲೂ ಮೆದುಳು ತಿನ್ನುವ ವೈರಸ್!
ಉತ್ತರ ಅಮೆರಿಕದ ಹಲವು ಕಡೆ ವ್ಯಾಪಕವಾಗಿ ಮೆದುಳು ತಿನ್ನುವ ವೈರಸ್ ಹರಡುತ್ತಿದೆ. ಈ ವೈರಸ್ ಬದುಕಿ ಉಳಿಯಲು ಬೆಚ್ಚಗಿನ ನೀರು ಅಗತ್ಯ. ಈಗ ಉತ್ತರ ಅಮೆರಿಕದಲ್ಲಿ ಹವಾಮಾನ ವೈಪರಿತ್ಯದ ಪರಿಣಾಮವಾಗಿ ಚಳಿಯ ವಾತಾವರಣ ಮಾಯವಾಗುತ್ತಿದ್ದು, ಬಿಸಿ ಹೆಚ್ಚಾಗುತ್ತಿದೆ. ಹೀಗಾಗಿ ಉತ್ತರ ಅಮೆರಿಕ ರಾಜ್ಯಗಳಲ್ಲಿರುವ ಮಣ್ಣು & ಬೆಚ್ಚಗಿನ ಶುದ್ಧ ನೀರಲ್ಲಿ ಮೆದುಳು ತಿನ್ನುವ ವೈರಸ್ ಹೆಚ್ಚಾಗಿ ಕಂಡುಬರುತ್ತಿದೆ. ಇದರ ಜೊತೆ ಮನೆ ನೀರಿನ ಟ್ಯಾಂಕರ್ ಮತ್ತು ಹೀಟರ್ ಅಥವಾ ಪೈಪ್‌ಗಳಲ್ಲೂ ಮೆದುಳು ತಿನ್ನುವ ವೈರಸ್ ಕಂಡುಬರುತ್ತಿದೆ.
1 ವಾರದಲ್ಲಿ ಜೀವ ಹೋಗುತ್ತೆ ಹುಷಾರ್!
ನಾಗ್ಲೆರಿಯಾ ಫೌಲೆರಿ ಅಥವಾ ಮೆದುಳು ತಿನ್ನುವ ಅಮೀಬಾ ಅದೆಷ್ಟು ಡೇಂಜರಸ್ ಅಂದ್ರೆ, ಸೋಂಕಿಗೆ ಸರಿಯಾದ ಔಷಧ ಲಭ್ಯವಿಲ್ಲ. ಅಕಸ್ಮಾತ್ ನಾಗ್ಲೆರಿಯಾ ಫೌಲೆರಿ ಮನುಷ್ಯನ ಮೆದುಳು ಸೇರಿದರೆ ಆ ಕ್ಷಣದಿಂದಲೇ ಮೆದುಳಿನ ಮೇಲೆ ದಾಳಿ ಮಾಡಿ ತಿನ್ನಲು ಆರಂಭಿಸುತ್ತದೆ. 1 ವಾರದಲ್ಲಿ ಆತನ ಜೀವವನ್ನೇ ತೆಗೆದುಬಿಡುತ್ತದೆ. ಇದ್ಯಾವುದೂ ಸೋಂಕಿತನ ಗಮನಕ್ಕೆ ಬರುವುದೇ ಇಲ್ಲ. ಅಷ್ಟರಮಟ್ಟಿಗೆ ಖತರ್ನಾಕ್ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ.
ಜ್ವರ, ವಾಂತಿ, ತಲೆನೋವು ಲಕ್ಷಣ
ಮೆದುಳು ತಿನ್ನುವ ಅಮೀಬಾ ದೇಹ ಪ್ರವೇಶಿಸಿದರೆ ಮೆಲ್ಲಗೆ ತನ್ನ ಕೆಲಸ ಆರಂಭಿಸುತ್ತದೆ. ಸೂಕ್ಷ್ಮಾಣು ಜೀವಿ ಕೆಲಸ ಆರಂಭಿಸಿದ ಒಂದೆರಡು ದಿನದಲ್ಲಿ ಜ್ವರ & ತಲೆನೋವು ಶುರು ಆಗುತ್ತದೆ. ಹೀಗೆ ಆರಂಭವಾಗುವ ಸೋಂಕಿನ ಲಕ್ಷಣ ಭಾರಿ ವಾಂತಿಯಾಗುವಂತೆ ಮಾಡುತ್ತೆ. ಮನುಷ್ಯನ ರೋಗನಿರೋಧಕ ಶಕ್ತಿ ದಿನದಿಂದ ದಿನಕ್ಕೆ ಕುಸಿಯುತ್ತಾ ಸಾಗಿ, 1 ವಾರದ ಒಳಗಾಗಿ ಸೋಂಕಿತ ವ್ಯಕ್ತಿ ಮೃತಪಡುತ್ತಾನೆ. ಅಷ್ಟರೊಳಗೆ ಅಮಿಬಾ ವಂಶಕ್ಕೆ ಸೇರಿದ ಈ ನಾಗ್ಲೆರಿಯಾ ಫೌಲೆರಿ ಸೂಕ್ಷ್ಮಾಣು ಜೀವಿ ಮೆದುಳನ್ನು ತಿಂದು ಮುಗಿಸಿರುತ್ತದೆ.
ಮೂಗಿನ ಒಳಗೆ ನೀರು ಹಾಕಬೇಡಿ!
ಮೆದುಳು ತಿನ್ನುವ ಸೂಕ್ಷ್ಮಾಣು ಜೀವಿ ಅಮೆರಿಕದ ಹಲವು ಕೆರೆಗಳಲ್ಲಿ ಕಂಡುಬಂದಿದೆ. ಹೀಗಾಗಿಯೇ ಅಧಿಕಾರಿಗಳು ಜನರಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಹಲವು ನಗರಗಳ ನೇರವಾಗಿ ಕೆರೆ ಅಥವಾ ನಲ್ಲಿ ನೀರನ್ನು ಮೂಗಿನ ಒಳಗೆ ಸೇರಿಸಬೇಡಿ ಎಂದಿದ್ದಾರೆ. ಏಕೆಂದರೆ ಮೂಗಿಗೆ ನೀರು ಹೋದರೆ, ಇಂತಹ ವೈರಸ್ ಮೆದುಳು ಸೇರುವುದು ಸುಲಭ. ಮೆದುಳು ಸೇರುವ ಸೂಕ್ಷ್ಮಾಣು ಜೀವಿ ನಾಗ್ಲೆರಿಯಾ ಫೌಲೆರಿ ತಕ್ಷಣ ಮೆದುಳನ್ನ ತಿನ್ನಲು ಶುರುಮಾಡುತ್ತದೆ. ಕಡೆಗೆ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಸಿಗದೆ ಆತ ನರಳಿ ಪ್ರಾಣಬಿಡುತ್ತಾನೆ. ಹೀಗಾಗಿ ಮೂಗಿನ ಒಳಗೆ ನೀರು ಸೇರಿಸಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications