Israel: ಇಸ್ರೇಲ್ ಸೈನಿಕರಿಗೆ ಆಘಾತ, ಹಿಜ್ಬುಲ್ಲಾ ದಾಳಿಯಲ್ಲಿ 4 ಯೋಧರು ಬಲಿ?

ಇಸ್ರೇಲ್ ಸೈನಿಕರು ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ತೀವ್ರ ಹೋರಾಟ ನಡೆಸುತ್ತಿದ್ದು, ಈ ಹೋರಾಟದಲ್ಲಿ ಒಂದು ಕಡೆ ಗೆಲುವು ಸಿಗುತ್ತಿದ್ದರೆ ಮತ್ತೊಂದು ಕಡೆ ಆಘಾತ ಎದುರಾಗಿದೆ. ಅದರಲ್ಲೂ ಶತ್ರುಗಳ ಎದುರು ಇದೀಗ ಇಸ್ರೇಲ್ ಮಿಲಿಟರಿ ತಲೆಬಾಗುವ ಪರಿಸ್ಥಿತಿ ಎದುರಾಗಿದೆ. ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಈಗ ಇಸ್ರೇಲ್ ದೇಶದಲ್ಲಿ ಅಲ್ಲೋಲ ಕಲ್ಲೋಲವೇ ಸೃಷ್ಟಿ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಹಿಜ್ಬುಲ್ಲಾ ದಾಳಿಯಲ್ಲಿ 4 ಯೋಧರು ಬಲಿಯಾದ್ರಾ?

ಯೆಸ್, ಲೆಬನಾನ್‌ನ ನೆಲದಲ್ಲಿ ನಿಂತು ಹಿಜ್ಬುಲ್ಲಾ ಬಂಡುಕೋರರು ತಮ್ಮ ವಿರುದ್ಧ ದಾಳಿ ಮಾಡುತ್ತಿದ್ದಾರೆ. ಹೀಗಾಗಿ ಅದನ್ನ ತಪ್ಪಿಸಬೇಕು ಅಂತಾ ಇಸ್ರೇಲ್ ಹಲವು ಕ್ರಮ ಕೈಗೊಂಡು ಕಾರ್ಯಾಚರಣೆ ನಡೆಸುತ್ತಿದೆ ಎಂಬ ವಿವರಣೆಯನ್ನ, ಇಸ್ರೇಲ್ ನೀಡುತ್ತಿದೆ. ಮತ್ತೊಂದು ಕಡೆ ಇಸ್ರೇಲ್ ನಡೆಸುತ್ತಿರುವ ಈ ದಾಳಿಯನ್ನ ದೌರ್ಜನ್ಯ ಅಂತಾ ಇರಾನ್, ಲೆಬನಾನ್ ಸೇರಿದಂತೆ ಇಸ್ರೇಲ್ ವಿರೋಧಿ ದೇಶಗಳು ಕರೆಯುತ್ತಿವೆ. ಪರಿಸ್ಥಿತಿ ಈ ರೀತಿ ಕುತೂಹಲದ ಘಟ್ಟ ತಲುಪಿದ ಸಮಯದಲ್ಲೇ, ಘೋರ ಘಟನೆ ಒಂದು ನಡೆದು ಹೋಗಿದೆ. ಅಂದಹಾಗೆ ಇಸ್ರೇಲ್ ವಿರುದ್ಧ ಇದೀಗ ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಏನಾಗಿದೆ ಗೊತ್ತಾ?

Allegedly 4 Israeli Soldiers Died In Hezbollah Attack

ಇಸ್ರೇಲ್ ಸೈನಿಕರು ಜೀವ ಬಿಟ್ಟರಾ?

ಅಷ್ಟಕ್ಕೂ ಹಿಜ್ಬುಲ್ಲಾ ನಡೆಸಿದ ದಾಳಿಯಲ್ಲಿ ಇಸ್ರೇಲ್ ಮಿಲಿಟರಿಯ ನಾಲ್ವರು ಯೋಧರು ಈಗ ಬಲಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಇಸ್ರೇಲ್ ಆರೋಪ ಮಾಡಿದ್ದು ಸಂಚಲನ ಸೃಷ್ಟಿ ಮಾಡಿದೆ. ಬಿನ್ಯಾಮಿನಾ ನಗರದ ಸೇನಾ ನೆಲೆ ಮೇಲೆ ಈ ರೀತಿಯ ಅಟ್ಯಾಕ್ ನಡೆಸಲಾಗಿದೆ ಎಂದು ಆರೋಪ ಮಾಡಲಾಗಿದೆ. ಒಟ್ಟಾರೆ 4 ಯೋಧರು ಈ ಘಟನೆಗೆ ಜೀವ ಬಿಟ್ಟಿದ್ದರೆ, 7 ಯೋಧರು ಗಂಭೀರವಾಗಿ ಗಾಯಗೊಂಡ ಕಾರಣ ಆಸ್ಪತ್ರೆಯಲ್ಲಿ ನರಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಲೆಬನಾನ್ ನೆಲದಲ್ಲೂ ಶವಗಳ ರಾಶಿ

ಕೆಲ ದಿನಗಳ ಹಿಂದಷ್ಟೇ ಇಸ್ರೇಲ್ ಸೇನೆ ಹಿಜ್ಬುಲ್ಲಾ ವಿರುದ್ಧ ಭೂ ಕಾರ್ಯಾಚರಣೆ ನಡೆಸಲು ಮುಂದೆ ನುಗ್ಗಿತ್ತು. ಹೀಗೆ ಇಸ್ರೇಲ್ ಸೇನೆ ಲೆಬನಾನ್ ಒಳಗೆ ನುಗ್ಗಿದ ನಂತರ ಪರಿಸ್ಥಿತಿ ಕೂಡ ಕೈಮೀರಿ ಹೋಗಿದ್ದು, ಇಸ್ರೇಲ್ ದಾಳಿಯಲ್ಲಿ ನೂರಾರು ಜನ ಬಲಿಯಾಗಿದ್ದಾರೆ ಎಂದು ಈ ಸಮಯದಲ್ಲಿ ಲೆಬನಾನ್ ಆರೋಪ ಮಾಡುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಕಡೆ ಹಿಜ್ಬುಲ್ಲಾ ಬಂಡುಕೋರರು ಕೂಡ ಇಸ್ರೇಲ್ ವಿರುದ್ಧ ದಾಳಿ ಆರಂಭ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಗಾಜಾ ಭಾಗದಲ್ಲಿ ಆತಂಕ ತೀವ್ರ

ಅಂದಹಾಗೆ ಇದೀಗ ಗಾಜಾ ಪಟ್ಟಿ ಉತ್ತರ ಭಾಗವನ್ನು ಸಂಪೂರ್ಣವಾಗಿ ತೆರವು ಮಾಡುವಂತೆ ಇಸ್ರೇಲ್ ಸೇನೆ ಹೊಸ ಆದೇಶ ಹೊರಡಿಸಿದೆ ಎಂದು ಆರೋಪಿಸಲಾಗಿದೆ. ಈ ಪ್ರದೇಶದಲ್ಲಿನ ಆಸ್ಪತ್ರೆಗಳ ರೋಗಿಗಳಿಗೆ ಕೂಡ ಬೇರೆ ಕಡೆ ಶಿಫ್ಟ್ ಆಗಲು ಇದೀಗ ಇಸ್ರೇಲ್ ಆದೇಶ ನೀಡಿದೆ ಎನ್ನಲಾಗಿದ್ದು, ಹೊಸ ಸಂಚಲನ ಸೃಷ್ಟಿಯಾಗಿದೆ. ಆದರೆ ಇನ್ನೊಂದು ಕಡೆ ಹೀಗೆ ಜನರ ಸ್ಥಳಾಂತರ ಮಾಡಿ ಹಮಾಸ್ ನಾಯಕರನ್ನು ಹುಡುಕುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ ಇದೇ ಸಮಯದಲ್ಲಿ ಗಾಜಾ ನಿವಾಸಿಗಳಿಗೆ ಬೇರೆಯದ್ದೇ ಭಯ ಶುರುವಾಗಿದ್ದು, ಒಕ್ಕಲೆಬ್ಬಿಸುವ ತಂತ್ರ ನಡೆಯುತ್ತಿದೆಯಾ? ಎಂಬ ಅನುಮಾನ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+