ಪಾಕ್ ಸಂಸತ್ ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದೇನು?

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗುರುವಾರದಂದು ಅಲ್ಲಿನ ಸಂಸತ್ ನ ಜಂಟಿ ಅಧಿವೇಶನದಲ್ಲಿ ಮಾತನಾಡಿದ್ದೇನು ಎಂಬುದರ ಪ್ರಮುಖ ಅಂಶಗಳು ಇಲ್ಲಿವೆ.

* ನಾನು ನಿನ್ನೆ ಮೋದಿ ಅವರಿಗೆ ಕರೆ ಮಾಡಲು ಯತ್ನಿಸಿದೆ- ಸಂದೇಶ ಕಳುಹಿಸಲು ಪ್ರಯತ್ನಿಸಿದೆ- ಈ ನಡೆ ಇನ್ನಷ್ಟು ಮುಂದುವರಿದರೆ ಭಾರತ ಅಥವಾ ಪಾಕಿಸ್ತಾನ ಇಬ್ಬರಿಗೂ ಅನುಕೂಲ ಇಲ್ಲ.

* ಕ್ರೀಡಾಳುವಾಗಿ ನನ್ನ ಪ್ರವಾಸಗಳ ಮೂಲಕ ಭಾರತದ ಬಗ್ಗೆ ಗೊತ್ತಿದೆ ಮತ್ತು ಅಲ್ಲಿ ನನಗೆ ಸ್ನೇಹಿತರಿದ್ದಾರೆ- ಮತ್ತು ಅಲ್ಲಿರುವ ಬಹಳ ಮಂದಿ ಸದ್ಯಕ್ಕೆ ಭಾರತ ಸರಕಾರ ಅನುಸರಿಸುತ್ತಿರುವ ತಂತ್ರವನ್ನು ಒಪ್ಪವುದಿಲ್ಲ ಮತ್ತು ಇದರಲ್ಲಿ ಲೋಪಗಳಿವೆ ಎಂದು ಮುಂದೆ ತಿಳಿದುಕೊಳ್ಳುತ್ತಾರೆ.

* ಆತ್ಮಹತ್ಯಾ ದಾಳಿಗಳು ಧರ್ಮದ ಕಾರಣಕ್ಕೆ ಆಗುವುದಲ್ಲ. 9/11ರ ದಾಳಿಗೂ ಮುಂಚೆ ಅತಿ ಹೆಚ್ಚಿನ ಆತ್ಮಹತ್ಯಾ ದಾಳಿಗಳು ನಡೆಸಿರುವುದು ತಮಿಳು ಟೈಗರ್ಸ್ ಮತ್ತು ಅವರು ಹಿಂದೂಗಳು. ಆದರೆ ಅದು ಕೂಡ ಧರ್ಮದ ಕಾರಣಕ್ಕಲ್ಲ. ಹತಾಶೆಯ ಕಾರಣಕ್ಕೆ ಹಾಗೆ ಮಾಡಿದರು.

Imran Khan

* ನಾನು ನಿನ್ನೆ ಭಾರತೀಯ ಪ್ರಧಾನಿ ಮೋದಿ ಜತೆ ಮಾತನಾಡಲು ಯತ್ನಿಸಿದೆ- ಸಂಜೆ ನಾನು ಟರ್ಕಿ ಅಧ್ಯಕ್ಷರಾ ಜತೆಗೆ ಈ ಬಗ್ಗೆ ಮಾತನಾಡಲಿದ್ದೇನೆ. ಆದರೆ ದಯವಿಟ್ಟು ಇದನ್ನ ನಮ್ಮ ಕಡೆಯ ದೌರ್ಬಲ್ಯ ಎಂದುಕೊಳ್ಳಬೇಡಿ.

* ಇದಕ್ಕಿಂತ ಮುಂದೆ ತೆಗೆದುಕೊಂಡು ಹೋಗಬೇಡಿ ಎಂದು ಹಿಂದೂಸ್ತಾನಕ್ಕೆ ಹೇಳಕ್ಕೆ ಬಯಸ್ತೀನಿ- ಒಂದು ವೇಳೆ ಹಾಗಾದರೆ ಪಾಕಿಸ್ತಾನದ ಬಳಿ ತಿರುಗೇಟು ನೀಡದೆ ಬೇರೆ ಆಯ್ಕೆಗಳಿರುವುದಿಲ್ಲ.

* ಶಾಂತಿಯ ದ್ಯೋತಕವಾಗಿ ಪಾಕಿಸ್ತಾನವು ನಾಳೆ (ಶುಕ್ರವಾರ) ಭಾರತದ ಪೈಲಟ್ ಅನ್ನು ಬಿಡುಗಡೆ ಮಾಡಲಿದೆ.

ಹೀಗೆ ಘೋಷಣೆ ಮಾಡುತ್ತಿದ್ದಂತೆ ಸಂಸತ್ ನ ಸದಸ್ಯರು ಮೇಜು ಕುಟ್ಟಿ ಸ್ವಾಗತ ಕೋರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+