ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

20 ಸೆಕೆಂಡುಗಳಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚಿದ ಆಲಿಬಾಬಾ

|
Google Oneindia Kannada News

ಬೀಜಿಂಗ್, ಮಾರ್ಚ್ 03: ಚೀನಾದಲ್ಲಿ ಕೊರೊನಾದಿಂದ (covid19) ಮೃತಪಟ್ಟವರ ಸಂಖ್ಯೆ 3000 ಗಡಿ ದಾಟಿದೆ. ಕೊರಾನಾ ದೆಸೆಯಿಂದ ಚೀನಾದ ಫಾರ್ಮಾ ಕಂಪನಿಗಳು ಉತ್ಪಾದನೆ ಸ್ಥಗಿತಗೊಳಿಸಿವೆ. ಈ ನಡುವೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರ ಪರೀಕ್ಷೆ ನಡೆಸಿ, ಸೋಂಕು ದೃಢಪಡಿಸುವ ಅವಧಿ ಹೆಚ್ಚಾಗುತ್ತಿದೆ.

ಈ ಸಮಸ್ಯೆಗೆ ಆಲಿಬಾಬಾ ಪರಿಹಾರ ಕಂಡುಕೊಂಡಿದೆ. ಕೃತಿಕ ಬುದ್ಧಿಮತ್ತೆ(AI) ಉಪಯೋಗಿಸಿ ಕೆಲವೇ ಸೆಕೆಂಡುಗಳಲ್ಲಿ ಯಾವುದೇ ವ್ಯಕ್ತಿಗೆ ಸೋಂಕು ತಗುಲಿದೆಯೇ? ಇಲ್ಲವೇ? ಎಂಬುದನ್ನು ಶೇ 96% ನಿಖರವಾಗಿ ತಿಳಿಸಬಹುದಾದ ವಿಧಾನವೊಂದನ್ನು ಕಂಡು ಹಿಡಿದಿದೆ.

ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ ಕೊರಾನಾವೈರಸ್ ಭೀತಿಯಲ್ಲಿದ್ದರೆ ಈ ಸಹಾಯವಾಣಿಗೆ ಕರೆ ಮಾಡಿ

ಅಮೆಜಾನ್, ಮೈಕ್ರೋಸಾಫ್ಟ್ ಸಾಲಿನ ಆಲಿಬಾಬಾ, ಚೀನಾದಲ್ಲಿ ಹೆಲ್ತ್ ಕೇರ್ ಜಾಲವನ್ನು ಹೊಂದಿದೆ. ನಿಕ್ಕಿ ಏಷ್ಯನ್ ರಿವ್ಯೂ ವರದಿಯಂತೆ ಆಲಿಬಾಬಾ ಹೊರ ತಂದಿರುವ ವ್ಯವಸ್ಥೆಯಲ್ಲಿ ಕೊರಾನಾ ವೈರಸ್ ಶಂಕಿತ ರೋಗಿಗಳ ಎದೆಭಾಗದ ಸಿಟಿ ಸ್ಕ್ಯಾನ್ ಶೇ 96ರಷ್ಟು ನಿಖರ ಫಲಿತಾಂಶವನ್ನು ಹೊರಹಾಕಿದೆ. ಸಾಮಾನ್ಯವಾಗಿ 300ಕ್ಕೂ ಅಧಿಕ ಚಿತ್ರಗಳ ಪರಿಶೀಲನೆ, ಸ್ಕ್ಯಾನ್ ವರದಿಗೆ 15 ನಿಮಿಷಗಳಾದರೂ ಬೇಕಾಗುತ್ತದೆ.

 ಚೀನಾದಲ್ಲಿ ಸಿಲುಕಿದ ಆಂಧ್ರದ ಟೆಕ್ಕಿ, ಈ ತಿಂಗಳು ಮದ್ವೆ ಇದೆ ಪ್ಲೀಸ್! ಚೀನಾದಲ್ಲಿ ಸಿಲುಕಿದ ಆಂಧ್ರದ ಟೆಕ್ಕಿ, ಈ ತಿಂಗಳು ಮದ್ವೆ ಇದೆ ಪ್ಲೀಸ್!

5,000ಕ್ಕೂ ಅಧಿಕ ಕೊರೊನಾ ವೈರಸ್ ಕೇಸ್

5,000ಕ್ಕೂ ಅಧಿಕ ಕೊರೊನಾ ವೈರಸ್ ಕೇಸ್

ಸುಮಾರು 5,000ಕ್ಕೂ ಅಧಿಕ ಕೊರೊನಾ ವೈರಸ್ ಕೇಸ್ ಗಳನ್ನು ಆಧಾರವಾಗಿಟ್ಟುಕೊಂಡು ಇಮೇಜ್ ಡೇಟಾಬೇಸ್ ತಯಾರಿಸಲಾಗಿದೆ. ಈಗಾಗಲೇ 100ಕ್ಕೂ ಅಧಿಕ ಹೆಲ್ತ್ ಕೇರ್ ಕೇಂದ್ರಗಳು ಆಲಿಬಾಬಾ ಎಐ ಬಳಸತೊಡಗಿವೆ. ಆಲಿಬಾಬಾ ಸಂಸ್ಥೆ ಪ್ರಗತಿ ನೋಡಿದ ಪ್ರತಿಸ್ಪರ್ಧಿ ಹೆಲ್ತ್ ಕೇರ್ ಸಂಸ್ಥೆ ಪಿಂಗ್ ಆನ್ ಕೂಡಾ ಇದೇ ಮಾದರಿ ವ್ಯವಸ್ಥೆಗೆ ಮೊರೆ ಹೋಗಿದೆ.

ಪ್ರತಿಸ್ಪರ್ಧಿ ಹೆಲ್ತ್ ಕೇರ್ ಸಂಸ್ಥೆ ಪಿಂಗ್ ಆನ್

ಪ್ರತಿಸ್ಪರ್ಧಿ ಹೆಲ್ತ್ ಕೇರ್ ಸಂಸ್ಥೆ ಪಿಂಗ್ ಆನ್

ವಿಶ್ವದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಆಮದು ರಫ್ತು ವಹಿವಾಟು ವ್ಯತ್ಯಯವಾಗಿದೆ. ಚೀನಾದ ಜೊತೆ ಅನೇಕ ದೇಶಗಳ ವ್ಯವಹಾರ ನಿಂತಿದೆ. ಐಟಿ-ಬಿಟಿಯಲ್ಲದೆ, ಸಾರಿಗೆ, ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳ ವ್ಯಾಪಾರ ಕುಂಠಿತವಾಗಿದೆ. ಬಿಲ್ ಗೇಟ್ಸ್ ಸೇರಿದಂತೆ ಅನೇಕ ಶ್ರೀಮಂತ ಉದ್ಯಮಿಗಳು, ಕೊರೊನಾ ವೈರಸ್ ನಿಂದ ಹರಡುವ ರೋಗಕ್ಕೆ ಔಷಧಿ, ಚುಚ್ಚುಮದ್ದು, Antidote ತಯಾರಿಸುವ ಸಂಸ್ಥೆ, ಸಂಶೋಧಕರಿಗೆ ಯಥೇಚ್ಛವಾಗಿ ಹಣಕಾಸಿನ ನೆರವು ಒದಗಿಸುತ್ತಿದ್ದಾರೆ.

ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?ಕೊರೊನಾ ವೈರಸ್ ಎಂದರೇನು?: ಹೇಗೆ ಹರಡುತ್ತೆ, ಚಿಕಿತ್ಸೆ ಏನು?

ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಪ್ರಾಣಹಾನಿ ಉಂಟು ಮಾಡುವಂತಹ ವೈರಸ್

ಕೊರಾನಾ ಅಥವಾ ಕರೋನಾ ವೈರಸ್ ಒಂದು ಬಗೆಯ ಪ್ರಾಣಹಾನಿ ಉಂಟು ಮಾಡುವಂತಹ ವೈರಸ್ ಆಗಿದ್ದು, ಇದು ಮನುಷ್ಯನ ಸಹಿತ ಸಸ್ತನಿಗಳ ಉಸಿರಾಟದ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದು ಎಂದು ಹೇಳಲಾಗುತ್ತಿದೆ. ಕೊರೊನಾ ವೈರಸ್ ಎನ್ನುವುದು ಪ್ರಾಣಿಗಳಲ್ಲಿ ಕಾಣಿಸಿಕೊಳ್ಳುವ ಸೋಂಕಾಗಿದೆ. ಈಗ ಪ್ರಾಣಿಗಳಿಂದ ಮನುಷ್ಯನಿಗೂ ಈ ಸೋಂಕು ತಗುಲುತ್ತಿದೆ.

ಶೀತ ಎಂದು ಸುಮ್ಮನಾಗಬೇಡಿ

ಶೀತ ಎಂದು ಸುಮ್ಮನಾಗಬೇಡಿ

ಇದು ಸಾಮಾನ್ಯ ಶೀತದಂತಹ ಲಘು ಪ್ರಮಾಣದಿಂದ ಮಧ್ಯಮ ಪ್ರಮಾಣದ ಮೇಲ್ಭಾಗದ ಶ್ವಾಸಕೋಶದ ಸೋಂಕನ್ನು ಉಂಟು ಮಾಡುವುದು. ಆದರೆ ಇದು ಕೆಲವೊಂದು ಸಲ ತೀವ್ರ ರೀತಿಯ ನ್ಯುಮೋನಿಯಾ ಮತ್ತು ಬ್ರಾಂಕೈಟಿಸ್ ಉಂಟು ಮಾಡುವುದು. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

ರೋಗವಿರುವವರು ಕೆಮ್ಮಿದರೆ, ಕೈಕುಲುಕುವಿಕೆ, ಯಾವುದೋ ವಸ್ತುವನ್ನು ಮುಟ್ಟಿ ಅಥವಾ ಪ್ರಾಣಿಗಳನ್ನು ಮುಟ್ಟಿ ಕೈತೊಳೆದುಕೊಳ್ಳದೆ ನಿಮ್ಮ ಮುಖ್ಯ, ಬಾಯಿಗಳನ್ನು ಮುಟ್ಟಿದಾಗಲೂ ಈ ರೋಗ ಹರಡುವ ಸಾಧ್ಯತೆ ಇರುತ್ತದೆ.

ಭಾರತದಲ್ಲಿ ಸಹಾಯವಾಣಿ, ಅಗತ್ಯ ಜಾಗ್ರತೆ

ಭಾರತದಲ್ಲಿ ಸಹಾಯವಾಣಿ, ಅಗತ್ಯ ಜಾಗ್ರತೆ

ಸಹಾಯವಾಣಿ ಸಂಖ್ಯೆ + 91-11-23978046ಗೆ ಕರೆ ಮಾಡಿ ನೊವೆಲ್ ಕೊರೊನಾ ವೈರಾಣು ಕುರಿತ ಮಾಹಿತಿ, ಸಹಾಯವನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ಇಲಾಖೆಯು ಹೊರಡಿಸಿರುವ ಪ್ರತ್ಯೇಕ ಇಮೇಲ್ ಐಡಿ [email protected]ಗೂ ಮೇಲ್ ಮಾಡಬಹುದು.

ಭಾರತದ ಬಹುತೇಕ ಎಲ್ಲಾ ಏರ್‌ಪೋರ್ಟ್‌ಗಳಲ್ಲಿ ಕೂಡ ತೀವ್ರ ನಿಗಾ ವಹಿಸಲಾಗುತ್ತಿದೆ. 6 ಸೋಂಕು ತಗುಲಿರುವ ಪ್ರಕರಣಗಳು ಕಂಡು ಬಂದರೂ ಭಾರತದಲ್ಲಿ ಇನ್ನೂ ಯಾರಿಗೂ ಪಾಸಿಟಿವ್ ಎಂದು ದೃಢಪಟ್ಟಿಲ್ಲ. ಕೊರೊನಾ ವೈರಾಣು ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿರುವ ಪ್ರಶ್ನೋತ್ತರ ಇಲ್ಲಿದೆ ಓದಿ (https://www.who.int/news-room/q-a-detail/q-a-coronaviruses)

ಕೊರಾನಾವೈರಾಣು ಪರಿಣಾಮ: ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆ ಏರಿಕೆ ಏಕೆ?ಕೊರಾನಾವೈರಾಣು ಪರಿಣಾಮ: ಭಾರತದಲ್ಲಿ ಪ್ಯಾರಾಸಿಟಮೋಲ್ ಬೆಲೆ ಏರಿಕೆ ಏಕೆ?

English summary
Chinese technology giant Alibaba recently developed an AI system for diagnosing the COVID-19 (coronavirus).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X