ಕಳೆಗಟ್ಟಿದ 90 ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ
ಲಾಸ್ ಏಂಜಲೀಸ್, ಮಾರ್ಚ್ 05: 2018 ನೇ ಸಾಲಿನ ಆಸ್ಕರ್ ಪ್ರಶಸ್ತಿ ಅಥವಾ ಅಕಾಡೆಮಿ ಪ್ರಶಸ್ತಿ ಇಂದು ಘೋಷಣೆಯಾಗಿದ್ದು, ಹಾಲಿವುಡ್ ನ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಅಮೆರಿಕ ಪೆಸಿಫಿಕ್ ಕಾಲಮಾನದ ಪ್ರಕಾರ ಮಾ.4 ರ ಸಂಜೆ ಕಾರ್ಯಕ್ರಮ ಆರಂಭವಾಗಿದ್ದು, ಇದು 90 ನೇ ಆಸ್ಕರ್ ಸಮಾರಂಭವಾಗಿದೆ. ಈ ವರ್ಷ ಆಸ್ಕರ್ ಪ್ರಶಸ್ತಿಗೆ ಒಟ್ಟು 13 ಸಿನಿಮಾಗಳು ಆಯ್ಕೆಯಾಗಿದ್ದವು.
ಅಮೆರಿಕದ ಲಾಸ್ ಏಂಜಲೀಸ್ ನ ಡೊಲ್ಬಿ ಥಿಯೇಟರ್ ನಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ಹಾಸ್ಯನಟ ಜಿಮ್ಮಿ ಕಿಮ್ಮೆಲ್ ನಿರೂಪಣೆ ಮಾಡುತ್ತಿದ್ದಾರೆ. 'ತ್ರಿಬಲ್ ಬೋರ್ಡ್' ಸಿನೆಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಸ್ಯಾಮ್ ರಾಕ್ವೆಲ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದರೆ, 'ಐ ಟೋನ್ಯಾ' ಚಿತ್ರದ ನಟನೆಗಾಗಿ ಆಲಿಸನ್ ಜನ್ನಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಪಡೆದಿದ್ದಾರೆ.

ತಮ್ಮ 'ಎ ಫ್ಯಾಂಟಾಸ್ಟಿಕ್ ವುಮನ್' ಚಿತ್ರದ ನಟನೆಗಾಗಿ ಆಸ್ಕರ್ ಪ್ರಶಸ್ತಿ ಪಡೆಯುವ ಮೂಲಕ ಈ ಸಾಧನೆ ಮಾಡಿದ ಮೊದಲ ಲಿಂಗ ಅಲ್ಪಸಂಖ್ಯಾತರು ಎಂಬ ಕೀರ್ತಿಗೆ ಡೇನಿಯಾಲಾ ವಾಗಾ ಪಾತ್ರರಾಗಿದ್ದು ಈ ಬಾರಿಯ ಆಸ್ಕರ್ ವಿಶೇಷ.












Click it and Unblock the Notifications