ಮಯನ್ಮಾರ್‌ನಲ್ಲಿ ಪ್ರಬಲ ಭೂಕಂಪ, ನಡುಗಿದ ಕೋಲ್ಕತಾ, ಪಾಟ್ನಾ
ಕೋಲ್ಕತಾ, ಏಪ್ರಿಲ್, 13: ಮಯನ್ಮಾರ್ ನಲ್ಲಿ ಬುಧವಾರ ರಾತ್ರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 7.0 ತೀವ್ರತೆ ದಾಖಲಾಗಿದ್ದು ಸದ್ಯಕ್ಕೆ ಯಾವುದೆ ಸಾವು ನೋವಿನ ಮಾಹಿತಿ ತಿಳಿದು ಬಂದಿಲ್ಲ.
ವಾಯುವ್ಯ ಮಯಾನ್ಮಾರ್ ಭಾಗದಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ಪರಿಣಾಮ ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕೆಲ ಭಾಗಗಳು ನಡುಗಿವೆ. ಕೋಲ್ಕತಾ ಮತ್ತು ಬಿಹಾರದ ಪಾಟ್ನಾ ಸಹ ನಡುಗಿದೆ.[ಪಾಕಿಸ್ತಾನ, ನೇಪಾಳ, ಉತ್ತರ ಭಾರತದಲ್ಲಿ ಕಂಪಿಸಿದ್ದ ಭೂಮಿ]

ಮಯನ್ಮಾರ್ ನಲ್ಲಿ ರಾತ್ರಿ 7.25ರ ವೇಳೆಗೆ ಭೂಮಿ ಕಂಪಿಸಿದೆ. ಭೂಮಿಯ ಮೇಲ್ಮೈನಿಂದ 134 ಅಡಿ ಆಳದಲ್ಲಿ ಕಂಪನದ ಕೇಂದ್ರ ಕಂಡುಬಂದಿದೆ. ಸುಮಾರು ಒಂದು ನಿಮಿಷ ಕಾಲ ಭೂಮಿ ಕಂಪಿಸಿದೆ.[ಬೆಂಗಳೂರು ಭೂಕಂಪ ಮುಕ್ತ ಅಲ್ಲ]
ಭುಕಂಪನದೊಂದಿಗೆ ಸುನಾಮಿ ಆತಂಕವೂ ಹುಟ್ಟಿಕೊಂಡಿದೆ. ಎರಡು ದಿನಗಳ ಹಿಂದಷ್ಟೆ ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ಭೂಕಂಪ ಸಂಭವಿಸಿತ್ತು. ಪರಿಣಾಮ ಉತ್ತರಭಾರತದ ನವದೆಹಲಿ, ಹರ್ಯಾಣ ಮತ್ತು ಪಂಜಾಬ್ ನ ಪ್ರದೇಶಗಳು ನಡುಗಿದ್ದವು.












Click it and Unblock the Notifications