ಗಾಜಾದ ಆಸ್ಪತ್ರೆಯಲ್ಲಿ ದೊಡ್ಡ ಸುರಂಗ ಪತ್ತೆ ಹಚ್ಚಿದ ಇಸ್ರೇಲ್

ಜೆರುಸಲೇಂ ನವೆಂಬರ್ 20: ಹಮಾಸ್ ಉಗ್ರರು ಹಾಗೂ ಇಸ್ರೇಲ್ ನಡುವಿನ ಯುದ್ಧ ಏಳನೇ ವಾರಕ್ಕೆ ಕಾಲಿಟ್ಟಿದೆ. ಈ ನಡುವೆ ಗಾಜಾದ ಅತಿದೊಡ್ಡ ಆಸ್ಪತ್ರೆಯ ಅಡಿಯಲ್ಲಿ 55-ಮೀಟರ್ ಕೋಟೆಯ ಸುರಂಗ ಪತ್ತೆಯಾಗಿದೆ. ಇದನ್ನು ಪ್ಯಾಲೇಸ್ಟಿನಿಯನ್ನರು ತೋಡಿದ ಸುರಂಗ ಎಂದು ಇಸ್ರೇಲ್ ವಿಡಿಯೋದೊಂದಿಗೆ ಹೇಳಿಕೊಂಡಿದೆ.

ಪ್ಯಾಲೇಸ್ಟಿನಿಯನ್ ಎನ್‌ಕ್ಲೇವ್‌ನಾದ್ಯಂತ ನೂರಾರು ಕಿಲೋಮೀಟರ್‌ಗಳಷ್ಟು ಉದ್ದದ ರಹಸ್ಯ ಸುರಂಗಗಳು, ಬಂಕರ್‌ಗಳು ಮತ್ತು ಪ್ರವೇಶ ಶಾಫ್ಟ್‌ಗಳ ಜಾಲವನ್ನು ಹೊಂದಿರುವುದಾಗ ಹಮಾಸ್ ಒಪ್ಪಿಕೊಂಡಿದೆ. ಆದರೆ ಆಸ್ಪತ್ರೆಗಳಂತಹ ನಾಗರಿಕ ಮೂಲಸೌಕರ್ಯಗಳಲ್ಲಿ ತಾವು ನೆಲೆಗೊಂಡಿರುವುದನ್ನು ಅವರು ನಿರಾಕರಿಸಿದ್ದಾರೆ.

tunnel-found-under-gazas-largest-hospital

'ಗಾಜಾದ ಮೂರು ದೊಡ್ಡ ಆಸ್ಪತ್ರೆಗಳ ಮೇಲೆ ಹಮಾಸ್ ಶೋಷಣೆಯ ಮತ್ತೊಂದು ಮುಖವನ್ನು ಇಸ್ರೇಲ್ ಬಹಿರಂಗಪಡಿಸುತ್ತಿದೆ. ಇಸ್ರೇಲಿ ಸೈನ್ಯ ಗಾಜಾದ ಅತಿದೊಡ್ಡ ಆಸ್ಪತ್ರೆಯಾದ ಅಲ್ ಶಿಫಾದ ಹೊರಾಂಗಣ ಪ್ರದೇಶದಲ್ಲಿ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿದೆ' ಎಂದು ಐಡಿಎಫ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಜೊತೆಗೆ ವಿಡಿಯೋ ತುಣುಕನ್ನು ಸಹ ಬಿಡುಗಡೆ ಮಾಡಿದೆ.

ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶಾಲ್ದಾಗ್ ಎಫ್‌ಎಫ್ ಘಟಕ, ಏಳನೇ ಬ್ರಿಗೇಡ್ ಮತ್ತು ಹೆಚ್ಚುವರಿ ಎಸ್‌ಎಫ್‌ ಘಟಕಗಳು ಶಿಫಾ ಆಸ್ಪತ್ರೆಯೊಳಗೆ ಸುರಂಗ ಮಾರ್ಗವನ್ನು ಪತ್ತೆ ಹಚ್ಚಿವೆ. ಅಲ್ಲದೇ ಅಲ್‌-ಕುಡ್ಸ್ ಆಸ್ಪತ್ರೆಯೊಳಗೆ ಹಮಾಸ್ ಉಗ್ರರು ಅಕ್ಟೋಬರ್ ಏಳರ ದಾಳಿಗೆ ಸಿದ್ಧಪಡಿಸಿದ್ದ ಬೂಬಿ-ಟ್ರ್ಯಾಪ್ಡ್ ವಾಹನವನ್ನು ಸಹ ಪತ್ತೆ ಮಾಡಲಾಗಿದೆ.

ಇದರಲ್ಲಿ ಬೃಹತ್ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡುಗಳಿವೆ ಎಂದು ಇಸ್ರೇಲ್ ಏರ್ ಫೋರ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಠಾತ್ ದಾಳಿ ನಡೆಸಿದ್ದ ಸಾವಿರಾರು ಹಮಾಸ್ ಉಗ್ರರು, ನೆಲ, ಜಲ, ವಾಯು ಮಾರ್ಗವಾಗಿ ಏಕಕಾಲಕ್ಕೆ ಇಸ್ರೇಲ್ ಮೇಲೆ ದಾಳಿ ನಡೆಸಿದ್ದರು. ಕೇವಲ 5 ನಿಮಿಷಗಳಲ್ಲೇ 5 ಸಾವಿರಕ್ಕೂ ಹೆಚ್ಚು ರಾಕೆಟ್‌ಗಳು ಇಸ್ರೇಲ್ ಮೇಲೆ ದಾಳಿ ನಡೆಸಿದ್ದವು. ಹೀಗಾಗಿ, ಇಸ್ರೇಲ್‌ನ ಪ್ರಖ್ಯಾತ ಐರನ್ ಡೋಮ್ ಕೂಡಾ ಸೋತು ಹೋಗಿತ್ತು.

ಇಸ್ರೇಲ್ ನೆಲಕ್ಕೆ ಮೇಲೆ ಕಾಲಿಟ್ಟ ಬಳಿಕ ಹಮಾಸ್ ಉಗ್ರರು 1,400ಕ್ಕೂ ಹೆಚ್ಚು ಮಂದಿಯನ್ನು ಕೊಂದು ಹಾಕಿದರಷ್ಟೇ ಅಲ್ಲ, ಸುಮಾರು 250 ಮಂದಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡು ಗಾಜಾ ಪಟ್ಟಿಗೆ ಕೊಂಡೊಯ್ದಿದ್ದರು. ಇದೀಗ ಬಹುತೇಕ ಒತ್ತೆಯಾಳುಗಳನ್ನು ಗಾಜಾ ಪಟ್ಟಿಯಲ್ಲಿ ಇರುವ ಅತಿ ದೊಡ್ಡ ಆಸ್ಪತ್ರೆಯಾದ ಅಲ್ - ಶಿಫಾ ಆಸ್ಪತ್ರೆ ಒಳಗೆ ಹಮಾಸ್ ಉಗ್ರರು ಅಡಗಿಸಿ ಇಡಲಿದ್ದಾರೆ ಎನ್ನಲಾಗಿದೆ. ಈ ಆಸ್ಪತ್ರೆ ಸುತ್ತಲೂ ಈಗಾಗಲೇ ಇಸ್ರೇಲ್ ಸೇನೆ ಸುತ್ತುವರೆದಿದೆ.

ಮೂಲಗಳ ಪ್ರಕಾರ ಹಮಾಸ್ ಉಗ್ರರ ಬಳಿ 240ಕ್ಕೂ ಹೆಚ್ಚು ಒತ್ತೆಯಾಳುಗಳು ಇದ್ದಾರೆ ಎನ್ನಲಾಗಿದೆ. ಈ ಪೈಕಿ 20ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳೇ ಇದ್ದಾರೆ ಎಂಬ ಮಾಹಿತಿ ಇದೆ. ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ದಾಳಿ ನಡೆಸಿದ ಹಮಾಸ್ ಉಗ್ರರು 1,400 ಮಂದಿಯನ್ನು ಕೊಂದು 200ಕ್ಕೂ ಹೆಚ್ಚು ಮಂದಿಯನ್ನು ಒತ್ತೆ ಇರಿಸಿಕೊಂಡಿದ್ದರು. ಇದಾದ ಬಳಿಕ ಇಸ್ರೇಲ್ ವಾಯು ಪಡೆ ನಿರಂತರ ಬಾಂಬ್ ದಾಳಿ ನಡೆಸಿತು. ಬಳಿಕ ಇಸ್ರೇಲ್ ಭೂ ಸೇನೆ ಕೂಡಾ ಗಾಜಾ ಪಟ್ಟಿಗೆ ನುಗ್ಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+