3ನೇ ಮಹಾಯುದ್ಧ: ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ!
ರಷ್ಯಾ: ಸೇಡಿಗೆ ಸೇಡು ತೀರಿಸಿಕೊಳ್ಳಲು ಅಖಾಡಕ್ಕೆ ಇಳಿದಿದೆ ಉಕ್ರೇನ್. ರಷ್ಯಾ ತನ್ನ ನೆಲದ ಮೇಲೆ ನಡೆಸಿರುವ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಉಕ್ರೇನ್ ಅಖಾಡ ಪ್ರವೇಶಿಸಿದೆ. ಮಿಸೈಲ್ ದಾಳಿ ನಡೆಸಿದ ರಷ್ಯಾ ವಿರುದ್ಧ ಉಕ್ರೇನ್ ಶೆಲ್ ದಾಳಿ ನಡೆಸುತ್ತಿದ್ದು, ರಷ್ಯಾದ 5 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ ಎಂದು ಆರೋಪಿಸಲಾಗಿದೆ. ಈ ನಡುವೆ ರಷ್ಯಾ ಗಡಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಕಳೆದ 1 ವರ್ಷದಿಂದ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಇಂದು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾನೆ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ 1 ವರ್ಷ ಕಳೆದು 2ನೇ ವರ್ಷಕ್ಕೆ ರಷ್ಯಾ & ಉಕ್ರೇನ್ ಯುದ್ಧ ಕಾಲಿಟ್ಟಿದೆ. ಆದರೂ ಈ ಎರಡೂ ರಾಷ್ಟ್ರಗಳು ಸಂಧಾನ ನಡೆಸಿ, ಯುದ್ಧ ನಿಲ್ಲಿಸುತ್ತಿಲ್ಲ. ಇದರ ಪರಿಣಾಮ ಎರಡೂ ಕಡೆ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ 2 ದಿನಗಳ ಹಿಂದೆ ರಷ್ಯಾ ಮಿಸೈಲ್ ದಾಳಿ ನಡೆಸಿ 25 ಉಕ್ರೇನ್ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಆರೋಪಿಸಲಾಗಿತ್ತು. ಇದೀಗ ಉಕ್ರೇನ್ ಕೂಡ ಅದೇ ಹಾದಿ ಹಿಡಿದಿದೆ.

ರಷ್ಯಾ ಗಡಿಯಲ್ಲಿ ಭೀಕರ ದಾಳಿ
ಉಕ್ರೇನ್ ತನ್ನ ಬಳಿ ಉಳಿದುಕೊಂಡಿರುವ ಅಲ್ಪಸ್ವಲ್ಪ ಶಸ್ತ್ರಾಸ್ತ್ರ ಬಳಸಿ ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿದೆ. ರಷ್ಯಾ ವಿರುದ್ಧ ಶೆಲ್ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾದ ಗಡಿ ಭಾಗದಲ್ಲಿರುವ ಹಳ್ಳಿಗಳ ಮೇಲೆ ಭೀಕರ ದಾಳಿ ನಡೆಸಿದೆ. ಉಕ್ರೇನ್ ದಾಳಿ ಅದೆಷ್ಟು ಪ್ರಬಲವಾಗಿ ಇದೆ ಎಂದರೆ, ರಷ್ಯಾ ಗಡಿಯಲ್ಲಿರುವ ಹಲವು ಹಳ್ಳಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. 5ಕ್ಕೂ ಹೆಚ್ಚು ಹಳ್ಳಿಗಳಲ್ಲಿ ವಿದ್ಯುತ್ ಕಡಿತವಾಗಿದೆ. ಹೀಗೆ ಮತ್ತಷ್ಟು ದಿನ ಅಟ್ಯಾಕ್ ನಡೆಸಲು ಉಕ್ರೇನ್ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.
ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ
ಕಳೆದ 1 ವರ್ಷದಿಂದ ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಮರುಕ್ಷಣವೇ ಇಲ್ಲಿನ ಜನರ ನೆಮ್ಮದಿ ಹಾರಿಹೋಗಿದೆ. ಪರಿಣಾಮ ಅಲ್ಲಿನ ಜನರು ಕಣ್ಣುಮುಚ್ಚಲು ಹಿಂದೆ-ಮುಂದೆ ಯೋಚಿಸುವ ಪರಿಸ್ಥಿತಿ ಇದೆ. ಯಾವ ಕ್ಷಣದಲ್ಲಿ ಏನಾಗುತ್ತೋ, ಯಾವ ಮಿಸೈಲ್ ಬಂದು ಬಡಿಯುತ್ತೋ ಎಂಬ ಭಯ ಕಾಡುತ್ತಿದೆ. ಈ ಹೊತ್ತಲ್ಲೇ ರಷ್ಯಾ ನೆಲದ ಮೇಲೆ ಭೀಕರ ದಾಳಿ ನಡೆದಿದೆ. ರಷ್ಯಾಗೆ ಸೇರಿದ ತೈಲ ಘಟಕ ಧಗಧಗನೆ ಹೊತ್ತಿ ಉರಿಯುತ್ತಿದ್ದು, ಬೆಂಕಿ ನಂದಿಸಲು ಹಲವು ಗಂಟೆಗಳ ಕಾಲ ಪರದಾಡಬೇಕಾಯಿತು.
ಲಕ್ಷಾಂತರ ಜನರು ಬಲಿ?
ನ್ಯಾಟೋ ಪಡೆಗಳ ಜೊತೆ ಸೇರಿ ರಷ್ಯಾಗೆ ಅಪಾಯ ಮಾಡುತ್ತಿದ್ದಾರೆ ಎಂಬ ಆರೋಪದಡಿ ರಷ್ಯಾ 1 ವರ್ಷದ ಹಿಂದೆ ಉಕ್ರೇನ್ ವಿರುದ್ಧ ಯುದ್ಧ ಆರಂಭಿಸಿತ್ತು. ಆದರೆ ಅದೇ ಯುದ್ಧ ಈಗ ಭೀಕರ ಪರಿಣಾಮ ಬೀರುತ್ತಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 3 ಲಕ್ಷ 54 ಸಾವಿರಕ್ಕೂ ಹೆಚ್ಚು ಸೈನಿಕರು ಹಾಗೂ ಜನರು ಯುದ್ಧದಲ್ಲಿ ಗಾಯಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಹಾಗಾದರೆ ಈ ಅಂಕಿ ಅಂಶಗಳನ್ನೇ ಲೆಕ್ಕಹಾಕಿ ಹೇಳುವುದಾದರೆ ಉಕ್ರೇನ್-ರಷ್ಯಾ ಯುದ್ಧದ ಭೀಕರತೆ ತಿಳಿಯುತ್ತದೆ.

ಕ್ಷಿಪಣಿಗಳ ಮಳೆ ಸುರಿಸಿದ ರಷ್ಯಾ
ಮೊನ್ನೆ ಮತ್ತೊಂದು ರೌಂಡ್ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ರಷ್ಯಾ ಮುಂದಾಗಿತ್ತು. ಅದರಲ್ಲೂ ರಷ್ಯಾ ಟಾರ್ಗೆಟ್ ಉಕ್ರೇನ್ ರಾಜಧಾನಿ. ಹೀಗೆ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳ ಪೈಕಿ ಎರಡು ಕ್ಷಿಪಣಿಗಳು ಕೀವ್‌ನ ದಕ್ಷಿಣ ಉಮಾನ್ ನಗರದ ಮೇಲೆ ಬಿದ್ದಿದೆ. ಅಲ್ಲಿರುವ 9 ಮಹಡಿ ಅಪಾರ್ಟ್‌ಮೆಂಟ್‌ಗೆ ತಗುಲಿ ಸುಮಾರು 25ಕ್ಕೂ ಹೆಚ್ಚು ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಹೀಗೆ ರಷ್ಯಾ ದಾಳಿ ನಡೆದ ಮರುದಿನವೇ ಉಕ್ರೇನ್ ಪ್ರತಿದಾಳಿ ಆರಂಭಿಸಿದೆ. ಈ ಮೂಲಕ ರಷ್ಯಾಗೆ ಹೊಸ ಮೆಸೇಜ್ ಕಳಿಸಿದೆ ಉಕ್ರೇನ್.












Click it and Unblock the Notifications