ಸಮುದ್ರದಾಳದಲ್ಲಿ ಪತ್ತೆಯಾದ 400 ವರ್ಷದ ಹಡಗಲ್ಲಿ ಭಾರತದ ಸಾಂಬಾರ ಪದಾರ್ಥ!

ಸುಮಾರು 400 ವರ್ಷಗಳಷ್ಟು ಹಳೆಯದಿದ್ದಿರಬಹುದು ಎಂದು ಅಂದಾಜಿಸಲಾದ ಪೋರ್ಚುಗಲ್ ಗೆ ಸೇರಿದ ಹಡಗಿನ ಅವಶೇಷವೊಂದು ಸಮುದ್ರದ ಆಳದಲ್ಲಿ ಪತ್ತೆಯಾಗಿದ್ದು, ಅದರಲ್ಲಿ ಸಾಂಬಾರ ಪದಾರ್ಥಗಳು ಪತ್ತೆಯಾಗಿ ಅಚ್ಚರಿ ಮೂಡಿಸಿವೆ.

ಪೋರ್ಚುಗಲ್ ನ ಲಿಸ್ಬಾನ್ ನ ಹೊರವಲಯದ ಕಡಲಿನ ಆಳದಲ್ಲಿ, ಸುಮಾರು 20 ಮೀ ಆಳದಲ್ಲಿ ಇದು ಪತ್ತೆಯಾಗಿದೆ.

ವಸಾಹತು ಕಾಲದಲ್ಲಿ ಭಾರತದಿಂದ ಪೋರ್ಚುಗಲ್ ಗೆ ಸಾಂಬಾರ ಪದಾರ್ಥಗಳನ್ನು ಕೊಂಡೊಯ್ಯುತ್ತಿದ್ದ ಹಡಗು ಇದಾಗಿತ್ತು ಎನ್ನಲಾಗಿದೆ. ಸುಮಾರು 1575 ರಿಂದ 1625 ದ ನಡುವೆ ಪ್ರಯಾಣ ಬೆಳೆಸಿದ ಹಡಗು ಇದಾಗಿದ್ದಿರಬಹುದು ಎನ್ನಲಾಗಿದೆ. ಹಡಗು ಅಪಘಾತಕ್ಕೊಳಗಾಗಿ ಮುಳುಗಿದ್ದು, ಅದರ ಅವಶೇಷ ಮಾತ್ರವೇ ಪತ್ತೆಯಾಗಿದ್ದು ಪೂರ್ತಿ ಹಡಗಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

400 old shipwreck found in Portugal, Indian spices found

ಈ ಹಡಗಿನಲ್ಲಿ ಸಾಂಬಾರ ಪದಾರ್ಥಗಳು ಪತ್ತೆಯಾಗಿದ್ದು, 400 ವರ್ಷಗಳು ಕಳೆದರೂ ಇವು ಆ ಹಡಗಿನ ಅವಶೇಷದಲ್ಲೇ ಉಳಿದುಕೊಂಡಿದ್ದು ಅಚ್ಚರಿ ಮೂಡಿಸಿದೆ. ಈ ಕುರಿತು ಇನ್ನೂ ಹೆಚ್ಚಿನ ತನಿಖೆ ನಡೆಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+