Israel-Palestine Conflict: ಭಾರತದ ಮಿತ್ರ ಇಸ್ರೇಲ್ ನೆಲದಲ್ಲಿ ಉಗ್ರರಿಂದ ರಕ್ತಪಾತ

ನೆಮ್ಮದಿಯಾಗಿದ್ದ ಇಸ್ರೇಲ್ ನೆಲದಲ್ಲಿ ರಕ್ತದ ನದಿ ಹರಿದಿದ್ದು, ಬೀದಿ ಬೀದಿಗಳಲ್ಲಿ ಹೆಣಗಳ ರಾಶಿ ಕಾಣುತ್ತಿದೆ. ನೋಡ ನೋಡುತ್ತಲೇ ನರಕವಾಗಿ ಬದಲಾಗಿದೆ ಭಾರತದ ಮಿತ್ರ ರಾಷ್ಟ್ರ ಇಸ್ರೇಲ್. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಹಮಾಸ್ ಉಗ್ರರ ಕರಾಳ ಮುಖವೂ ಬಯಲಾಗುತ್ತಿದೆ. ಕೈಯಲ್ಲಿ ರಾಕೆಟ್, ಬಾಂಬ್ & ಗನ್ ಹಿಡಿದು ಇರುವೆಗಳಂತೆ ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗುತ್ತಿದ್ದಾರೆ. ಹಾಗೇ ಕಂಡ ಕಂಡವರ ಜೀವ ತೆಗೆಯುತ್ತಿದ್ದಾರೆ.

ಅಷ್ಟಕ್ಕೂ ಇಂದು ಬೆಳಗ್ಗೆ ಹಮಾಸ್ ಬಂಡುಕೋರರು ಇಸ್ರೇಲ್ ಕಡೆಗೆ ಸುಮಾರು 5000ಕ್ಕೂ ಹೆಚ್ಚು ರಾಕೆಟ್‌ಗಳನ್ನು ಒಂದೇ ಬಾರಿಗೆ ಉಡಾಯಿಸಿದ್ದರು. ಇನ್ನು ದಾಳಿಯಿಂದ ಇಸ್ರೇಲ್ ಚೇತರಿಸಿಕೊಳ್ಳುವ ಹೊತ್ತಿಗೆ ಬಂಡುಕೋರರು ಇಸ್ರೇಲ್ ಒಳಗಡೆ ನುಗ್ಗಿ ನುಗ್ಗಿ ಬಂದಿದ್ದಾರೆ. ಇವರ ಕೈಯಲ್ಲಿ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಬಾಂಬ್‌ ಇರುವುದು ಪತ್ತೆಯಾಗಿದೆ. ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಎಲ್ಲರ ಎದೆ ನಡುಗಿಸುತ್ತಿವೆ. ಹಾಗಾದರೆ ನಿಜಕ್ಕೂ ಹೇಗಿದೆ ಇಸ್ರೇಲ್ ಮೇಲಿನ ದಾಳಿಯ ಭಯಾನಕತೆ?

22 Killed and more than 500 wounded in Israel after Hamas attack

ಗಡಿಯಲ್ಲಿದ್ದ ಗೋಡೆಯೇ ಉಡೀಸ್!

ಇನ್ನು ಒಂದು ವಿಡಿಯೋದಲ್ಲಿ ಹಮಾಸ್ ಉಗ್ರರ ಪರ ಇರುವ ಬಂಡುಕೋರರು ಇಸ್ರೇಲ್‌ನ ಗಡಿ ಭಾಗದಲ್ಲಿ ಕಟ್ಟಿದ್ದ ಗೋಡೆಯನ್ನೇ ಪೀಸ್ ಪೀಸ್ ಮಾಡಿದ್ದಾರೆ. ಜೆಸಿಬಿ ವಾಹನ ಬಳಸಿ ಗೋಡೆಯನ್ನೇ ಉಡೀಸ್ ಮಾಡಿದ್ದಾರೆ ಬಂಡುಕೋರರು. ಇವರಿಗೆ ಬೆಂಬಲವಾಗಿ ನಿಂತಿರುವ ಪ್ರತಿಭಟನಾಕಾರರು, ಇಸ್ರೇಲ್ ಗಡಿಯಲ್ಲಿ ಗಾಜಾಪಟ್ಟಿ ಪ್ರತ್ಯೇಕಿಸುವ ಗೋಡೆ ಬೀಳುತ್ತಿದ್ದಂತೆ ಖುಷಿಯಲ್ಲಿ ಕುಣಿದಾಡಿದ್ದಾರೆ. ಹಾಗೇ ಹಿಂಸಾಚಾರ ನಡೆಸಲು ಇಸ್ರೇಲ್ ಒಳಗೆ ನುಗ್ಗಿದ್ದಾರೆ.

ಕೈಯಲ್ಲಿ ರಾಕೆಟ್, ಗನ್ ಹಿಡಿದು ಓಟ!

ಹಾಗೇ ಇನ್ನೊಂದು ವಿಡಿಯೋ ಕೂಡ ಭಯ ಮೂಡಿಸುವಂತೆ ಇದೆ. ಇಸ್ರೇಲ್‌ನ ಗಡಿಯಲ್ಲಿ ವಾಹನಗಳ ಮೂಲಕ ಬರುತ್ತಿರುವ ಉಗ್ರರು, ಕೈಯಲ್ಲಿ ರಾಕೆಟ್ ಸೇರಿದಂತೆ ಅತ್ಯಾಧುನಿಕ ಗನ್‌ಗಳನ್ನ ಹಿಡಿದುಕೊಂಡಿದ್ದಾರೆ. ಹೀಗೆ ನುಗ್ಗುತ್ತಿರುವ ಇವರೆಲ್ಲಾ, ನೇರ ಇಸ್ರೇಲ್‌ನ ಒಳಗೆ ಓಡುತ್ತಿದ್ದಾರೆ. ಇಸ್ರೇಲ್ ಒಳಗೆ ಹೋಗುತ್ತಿದ್ದಂತೆಯೇ ಕಂಡ ಕಂಡವರ ಮೇಲೆ ದಾಳಿ ನಡೆಸಿ ಸಾಯಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ.

ಇಸ್ರೇಲ್ ಯೋಧರು ಕೂಡ ಟಾರ್ಗೆಟ್

ಹೀಗೆ ಉಗ್ರರು ಇಸ್ರೇಲ್‌ನ ಒಳಗೆ ನುಗ್ಗುವ ಸಮಯದಲ್ಲಿ ಇಸ್ರೇಲ್ ಯೋಧರ ಮೇಲೆ ಕೂಡ ದೌರ್ಜನ್ಯ ಎಸಗಿದ್ದಾರಂತೆ. ಅಲ್ಲದೆ ಹಲವು ಇಸ್ರೇಲ್ ಸೈನಿಕರನ್ನ ಬಂಧಿಸಿ ಎಳೆದು ತಂದು ಹಿಂಸೆ ನೀಡುತ್ತಿರುವ ಆರೋಪ ಕೇಳಿಬಂದಿದೆ. ಅದರಲ್ಲೂ ಇಸ್ರೇಲ್‌ನ ಮಹಿಳಾ ಸೈನಿಕರಿಗೆ ಕೂಡ ಹಿಂಸೆ ನೀಡುತ್ತಿರುವ ಆರೋಪ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಸ್ರೇಲ್‌ನ ಮಹಿಳಾ ಯೋಧರೊಬ್ಬರನ್ನ ಬಂಡುಕೋರರು ವಾಹನದಲ್ಲಿ ತುಂಬಿಕೊಂಡು ಬರುತ್ತಿರುವ ವಿಡಿಯೋ ವೈರಲ್ ಆಗಿದೆ.

ಹೀಗೆ ಹಮಾಸ್ ಉಗ್ರರು ಇಸ್ರೇಲ್ ಒಳಗೆ ನುಗ್ಗಿದ ಹಿನ್ನೆಲೆ, 22 ಇಸ್ರೇಲ್ ನಾಗಿರಕರು ಜೀವ ಕಳೆದುಕೊಂಡಿದ್ದಾರೆ. ಹಾಗೇ 545 ಇಸ್ರೇಲ್ ಪ್ರಜೆಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ನೆಲದ ಮೇಲೆ ಉಗ್ರರು ದಾಳಿ ಮಾಡಿದ ಕಾರಣಕ್ಕೆ ರೊಚ್ಚಿಗೆದ್ದಿರುವ ಇಸ್ರೇಲ್ ಇದೀಗ ಯುದ್ಧ ಸಾರಿಬಿಟ್ಟಿದೆ. ಆದ್ರೆ ಹೀಗೆ ಇಸ್ರೇಲ್ ಯುದ್ಧ ಸಾರುತ್ತಿದ್ದಂತೆ ಇಡೀ ಜಗತ್ತು ನಡುಗಿ ಹೋಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ?? ಎಂಬ ಭಯ ಆವರಿಸಿದೆ. ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧದ ಮಧ್ಯೆ ಮತ್ತೊಂದು ಅವಾಂತರ ನಡೆಯದಿರಲಿ ಅಂತ ಇಡೀ ಜಗತ್ತು ಬೇಡಿಕೊಳ್ಳುತ್ತಿದೆ.

ಗಡಿಯಲ್ಲಿ ಮತ್ತಷ್ಟು ಯೋಧರ ನಿಯೋಜನೆ

ಹಮಾಸ್ ಉಗ್ರರು ಇಸ್ರೇಲ್ ಗಡಿಯಲ್ಲಿ ಹಿಂಸಾಚಾರ ನಡೆಸಿ, ಇಸ್ರೇಲ್‌ ಒಳಗೆ ನುಗ್ಗುತ್ತಿರುವ ಕಾರಣ ಭಾರಿ ಪ್ರಮಾಣದಲ್ಲಿ ಸೇನೆ ನಿಯೋಜನೆಗೆ ಇಸ್ರೇಲ್ ಸರ್ಕಾರ ಇದೀಗ ಮುಂದಾಗಿದೆ. ಅದರೂ ಪರಿಸ್ಥಿತಿ ಕೈಮೀರಿ ಹೋಗಿದೆ. ಹೀಗಾಗಿ ಇಸ್ರೇಲ್ ಇನ್ಯಾವ ಭಯಾನಕ ಅಸ್ತ್ರವನ್ನು ಪ್ರಯೋಗ ಮಾಡುತ್ತೋ? ಎಂಬ ಆತಂಕ ಆವರಿಸಿದೆ. ಮತ್ತೊಂದು ಕಡೆ ಇಸ್ರೇಲ್ ಅಟ್ಯಾಕ್ ನೋಡಿ ಬೆಚ್ಚಿಬಿದ್ದಿರುವ ಪ್ಯಾಲೇಸ್ತೀನ್ ಮತ್ತು ಗಾಜಾ ಪಟ್ಟಿಯ ಅಮಾಯಕರು ಮನೆಯನ್ನ ಬಿಟ್ಟು ಹೋಗುತ್ತಿದ್ದಾರೆ. ಮಕ್ಕಳ ಜೊತೆ ಸುರಕ್ಷಿತ ಸ್ಥಳಗಳಿಗೆ ಓಡಿ ಹೋಗುತ್ತಿದ್ದಾರೆ. ಪುಟ್ಟ ಪುಟ್ಟ ಮಕ್ಕಳು ಅಮ್ಮಂದಿರ ಕೈಹಿಡಿದು ಹೋಗುತ್ತಿರುವ ದೃಶ್ಯ ಕರಳು ಕಿವುಚುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+