ಕೋಸ್ಟಾ ರಿಕಾದಲ್ಲಿ ಖಾಸಗಿ ವಿಮಾನ ಪತನ: 12 ಜನ ದಾರುಣ ಸಾವು
ಸ್ಯಾನ್ ಜೋಸ್(ಕೋಸ್ಟಾ ರಿಕಾ), ಜನವರಿ 1: ಕೋಸ್ಟಾ ರಿಕಾ ಗಣರಾಜ್ಯದ ಸ್ಯಾನ್ ಜೋಸ್ ಎಂಬಲ್ಲಿನ ಗುಡ್ಡಗಾಡು ಪ್ರದೇಶವೊಂದರಲ್ಲಿ ಖಾಸಗಿ ವಿಮಾನವೊಂದು ಪತನಹೊಂದಿದ ಕಾರಣ 12 ಜನ ಮೃತಪಟ್ಟ ದಾರುಣ ಘಟನೆ ನಡೆದಿದೆ.

ಮೃತರಲ್ಲಿ 10 ಜನ ಅಮೆರಿಕ ನಾಗರಿಕರೆಂದೂ, ಇನ್ನುಳಿದ ಇಬ್ಬರು ಕೋಸ್ಟಾ ರಿಕಾದವರೆಂದು ಗುರುತಿಸಲಾಗಿದೆ. ವಿಮಾನವು ಕೋಸ್ಟಾ ರಿಕಾ ಗಣರಾಜ್ಯದ ರಾಜಧಾನಿ ಸ್ಯಾನ್ ಜೋಸ್ ನಿಂದ ಪುಂಟಾ ಇಸ್ಲಿತಾ ಎಂಬಲ್ಲಿಗೆ ತೆರಳುತ್ತಿತ್ತು. ಜನಪ್ರಿಯ ಪ್ರವಾಸಿ ತಾಣವಾಗಿದ್ದರಿಂದ ಇಲ್ಲಿಗೆ ಪ್ರವಾಸಕ್ಕೆದು ಬಂದಿದ್ದ 12 ಜನರೂ ಹೊಸ ವರ್ಷದಂದೇ ದುರಂತ ಅಂತ್ಯ ಕಂಡಿದ್ದಾರೆ.
ಈ ವಿಮಾನ ಕೋಸ್ಟಾ ರಿಕಾದ ಸ್ಥಳೀಯ ವಿಮಾನಯಾನ ಸಂಸ್ಥೆಗೆ ಸೇರಿದ್ದಾಗಿತ್ತು ಎಂದು ಕೋಸ್ಟಾ ರಿಕಾದ ಸಾರ್ವಜನಿಕ ಭದ್ರತಾ ಸಚಿವಾಲಯ ತಿಳಿಸಿದೆ.












Click it and Unblock the Notifications