ಯೋಗಿಯನ್ನು 'ಯೋಗಿ' ಎಂದು ಕರೆಯುವಂತಿಲ್ಲ: ವೀರಪ್ಪ ಮೊಯಿಲಿ
ರಾಯ್ಪುರ, ನವೆಂಬರ್ 16: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಮೊದಲು ಸನ್ಯಾಸಿಯಂತೆ ಆಗಲಿ ಎಂದು ಕಾಂಗ್ರೆಸ್ ನಾಯಕ ವೀರಪ್ಪ ಮೊಯಿಲಿ ಸಲಹೆ ನೀಡಿದ್ದಾರೆ.
ಛತ್ತೀಡ್ ಗಢದ ರಾಯ್ಪುರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವ ಮೊಯಿಲಿ, ಯೋಗಿ ಆದಿತ್ಯನಾಥ ವಿರುದ್ಧ ಹರಿಹಾಯ್ದರು.
ಯೋಗಿ ಅವರು ಮೊದಲು ತಪಸ್ವಿಯಂತೆ ಇರಲಿ. ಅವರಿಗೆ ಸನ್ಯಾಸಿ ಆಗಲು ಸಾಧ್ಯವಾಗದೆ ಇದ್ದರೆ ಅವರನ್ನು 'ಯೋಗಿ' ಎಂದು ಕರೆಯ ಬಾರದು ಎಂದು ಹೇಳಿದರು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕೆ ವ್ಯಕ್ತಪಡಿಸಿದ್ದಾರೆ.

ಯೋಗಿಯು ಸನ್ಯಾಸಿಯಾಗಿಯೇ ಬದುಕಬೇಕು ಎಂದು ಯಾವ ಶಾಸ್ತ್ರ ಹೇಳಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ವಿದೂಷಕ ಯುವರಾಜನ ಬಗ್ಗೆ ಬೇಸರಗೊಂಡಿರುವ ಮೊಯಲಿ ತಮ್ಮ ಸಿಟ್ಟನ್ನು ಹೇಳಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಅವರು ಛತ್ತೀಸ್ ಗಢಕ್ಕೆ ಬಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ವಿರುದ್ಧ ಕಾರಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಯೋಗಿ ಈಗಾಗಲೇ ಸನ್ಯಾಸಿ ಆಗಿದ್ದಾರೆ. ಆದರೆ ನಿಮ್ಮ ಬಗ್ಗೆ ಏನು? ನಿಮ್ಮ ಎಲ್ಲವನ್ನೂ ತ್ಯಾಗ ಮಾಡಿ ನಿಮ್ಮ 50 ವರ್ಷ ಹಳೆಯ ಪಕ್ಷದ ಅಧ್ಯಕ್ಷರ ಜೊತೆ ಏಕೆ ತೀರ್ಥಯಾತ್ರೆ ಹೋಗಬಾರದು ಎಂದು ಲೇವಡಿ ಮಾಡಿದ್ದಾರೆ.











Click it and Unblock the Notifications