ತರಬೇತಿ ಪಡೆಯಲು ಬಂದವಳನ್ನೇ ರೇಪ್ ಮಾಡಿದ ಯೋಗ ಗುರು

Posted By:
Subscribe to Oneindia Kannada

ಪಣಜಿ, ಫೆಬ್ರವರಿ 8: ಮಸಾಜ್ ಮಾಡುವುದರ ಬಗ್ಗೆ ತರಬೇತಿ ನೀಡುವುದಾಗಿ ಹೇಳಿ, ಅದರ ತರಬೇತಿಗಾಗಿ ಬಂದ ಅಮೆರಿಕದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಗೋವಾ ಪೊಲೀಸರು ಯೋಗ ಗುರುವೊಬ್ಬನನ್ನು ಬಂಧಿಸಿದ್ದಾರೆ. ಈ ಪ್ರಕರಣವು, ಉತ್ತರ ಗೋವಾದ ಪೆರ್ನೆಮ್ ಕರಾವಳಿ ಪ್ರದೇಶದ ಕೋರ್ಗಾವೊ ಗ್ರಾಮದಲ್ಲಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.[ವಿಡಿಯೋ ವಿಡಂಬನೆ : ಅತ್ಯಾಚಾರಕ್ಕೆ ಕಾರಣ ಯಾರು?]

ಆರೋಪಿಯನ್ನು ಪ್ರತೀಕ್ ಕುಮಾರ್ ಅಗರ್ ವಾಲ್ (38) ಎಂದು ಗುರುತಿಸಲಾಗಿದ್ದು, ಅಮೆರಿಕ ಮೂಲದ ಮಹಿಳೆ ಮಂಗಳವಾರ ಪೆರ್ನೆಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.[ನಿಯಮಿತ ಯೋಗ ಮಹಿಳೆಯ ಸೌಂದರ್ಯಕ್ಕೆ ರಾಮಬಾಣ]

Yoga guru arrested in Goa on rape allegations

ಆರೋಪಿಯು ಯೋಗ ಶಿಕ್ಷಕ ತರಬೇತಿ ನೀಡುವುದಾಗಿ ಜಾಹೀರಾತು ನೀಡಿದ್ದ. ಹಾಗಾಗಿ, ಅಮೆರಿಕದ ಈ ಪ್ರಜೆ, ಆನ್ ಲೈನ್ ಮೂಲಕವೇ ತರಬೇತಿಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು. ಇವರಷ್ಟೇ ಅಲ್ಲದೆ, ನಾನಾ ದೇಶಗಳಿಂದ ಸುಮಾರು ಏಳು ಮಹಿಳೆಯರು ತರಬೇತಿಗಾಗಿ ಆಗಮಿಸಿದ್ದರು.['ರೇಪ್ ಮಾಡುವ ಮುನ್ನ ಈಕೆಯ ವಿಡಿಯೋ ನೋಡಿ']

ಇವರಲ್ಲೊಬ್ಬರಾಗಿದ್ದ ಅಮೆರಿಕದ ಪ್ರಜೆ ಬಳಿ ತಾಂತ್ರಿಕ ಮಸಾಜ್ ತರಬೇತಿ ನೀಡುವುದಾಗಿ ಆಕೆಯೊಬ್ಬರನ್ನು ಕರೆಸಿಕೊಂಡಿದ್ದ ಪ್ರತೀಕ್ ಕುಮಾರ್ ಅತ್ಯಾಚಾರವೆಸಗಿದ್ದಾನೆಂದು ಹೇಳಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A Yoga Guru of nothern Goa arrested on the charges of raping an American citizen during yoga classes.
Please Wait while comments are loading...