ಗುಜರಾತ್ ನಲ್ಲಿ ಬಿಜೆಪಿ ವಿರುದ್ಧ ಯಶವಂತ್ ಸಿನ್ಹಾ ಪ್ರಚಾರ?

Subscribe to Oneindia Kannada

ಅಹಮದಾಬಾದ್, ನವೆಂಬರ್ 3: ಕಾಂಗ್ರೆಸ್ ಬೆಂಬಲಿತ ಸರಕಾರೇತರ ಸಂಸ್ಥೆ (ಎನ್ ಜಿಒ) ಒಂದರ ಆಹ್ವಾನದ ಮೇರೆಗೆ ಬಿಜೆಪಿಯ ಹಿರಿಯ ನಾಯಕ ಯಶವಂತ್ ಸಿನ್ಹಾ ಮೂರು ದಿನಗಳ ಗುಜರಾತ್ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ.

ಗುಜರಾತ್ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟ

ನವೆಂಬರ್ 14ರಿಂದ ಅವರ ಮೂರು ದಿನಗಳ ಗುಜರಾತ್ ಪ್ರವಾಸ ಆರಂಭವಾಗಲಿದೆ. ಪ್ರವಾಸದ ಸಂದರ್ಭ ಯಶವಂತ್ ಸಿನ್ಹಾ ಅಲ್ಲಿನ ಉದ್ಯಮಿಗಳ ಜತೆ ಸಂವಾದ ನಡೆಸಲಿದ್ದಾರೆ. ಜತೆಗೆ ರಾಜ್ ಕೋಟ್, ಸೂರತ್ ಮತ್ತು ಅಹಮದಾಬಾದ್ ನಲ್ಲಿ ಸಿನ್ಹಾ ಉಪನ್ಯಾಸವನ್ನೂ ನೀಡಲಿದ್ದಾರೆ.

Yashwant Sinha to speak in poll bound Gujarat on Congress' invitation

ಲೋಕಸಹಿ ಬಚಾವೋ ಆಂದೋಲನ್ (ಪ್ರಜಾಪ್ರಭುತ್ವ ಉಳಿಸಿ ಅಭಿಯಾನ) ಎಂಬ ಸರಕಾರೇತರ ಸಂಸ್ಥೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ಕಾಂಗ್ರೆಸ್ ಬೆಂಬಲಿತ ಸರಕಾರೇತರ ಸಂಸ್ಥೆಯಾಗಿದೆ.

ಗುಜರಾತ್ ವಿಧಾನಸಭಾ ಚುನಾವಣೆ: ತಿಳಿದುಕೊಳ್ಳಬೇಕಾದ ಕೆಲವು ಸಂಗತಿ

ಇತ್ತೀಚೆಗೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲೇಖನ ಬರೆದಿದ್ದ ಯಶವಂತ್ ಸಿನ್ಹಾ ಕೇಂದ್ರ ಸರಕಾರದ ಆರ್ಥಿಕ ನೀತಿಗಳೂ ಸೇರಿದಂತೆ ಹಲವು ತೀರ್ಮಾನಗಳನ್ನು ಕಟುವಾಗಿ ಟೀಕಿಸಿದ್ದರು. ನಂತರ ಬಹಿರಂಗವಾಗಿಯೇ ಬಿಜೆಪಿ ನಾಯಕರ ವಿರುದ್ಧ ಕೆಂಡಕಾರಿದ್ದರು.

ಇದೀಗ ಗುಜರಾತ್ ವಿಧಾನಸಭೆಗೂ ಮುನ್ನ ಹಮ್ಮಿಕೊಂಡಿರುವ ಈ ಕಾರ್ಯಕ್ರಮಗಳಲ್ಲಿ ಅವರು ಮತ್ತೆ ಕೇಂದ್ರ ಸರಕಾರದ ಜಿಎಸ್ಟಿ, ಅಪನಗದೀಕರಣ ತೀರ್ಮಾನಗಳನ್ನು ದೂರುವ ಸಾಧ್ಯತೆ ಇದೆ. ಈ ಮೂಲಕ ಬಿಜೆಪಿ ವಿರುದ್ಧ ಪ್ರಚಾರ ನಡೆಸಲಿದ್ದಾರೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 9 ಮತ್ತು 14ರಂದು ಮತದಾನ ಹಾಗೂ ಡಿಸೆಂಬರ್ 18ರಂದು ಮತಎಣಿಕೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BJP leader Yashwant Sinha will be on a three-day tour of poll- bound Gujarat starting November 14, on an invitation from an NGO supported by the Congress party.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ