ಗಂಗಾ ನದಿ ಮೇಲೆ ಹಾರಾಡಲಿದೆ ಸೌರ ವಿಮಾನ
ಅಹಮದಾಬಾದ್, ಮಾ. 10: ಭಾರತೀಯರಿಗೆ ಮಂಗಳವಾರ ಸಂಪೂರ್ಣ ಸೌರ ಚಾಲಿತ ವಿಮಾನದ ದರ್ಶನವಾಗಲಿದೆ. ಸ್ವಿಜರ್ಲೆಂಡ್‌ನ "ಸೋಲಾರ್ ಇಂಪಲ್ಸ್' ವಿಮಾನವು ಮಂಗಳವಾರ ಗುಜರಾತ್ ಅಹಮದಾಬಾದ್‌ಗೆ ಬಂದಿಳಿಯಲಿದೆ.
ಪರಿಸರ ಸ್ನೇಹಿ ಇಂಧನ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲು ಮಾನವು ವಿಶ್ವಪರ್ಯಟನೆ ಕೈಗೊಂಡಿದ್ದು ಭಾರತಕ್ಕೂ ಆಗಮಿಸುತ್ತಿದೆ. ವಿಮಾನ ಸೋಮವಾರವೇ ಗುಜರಾತ್‌ಗೆ ಆಗಮಿಸಬೇಕಾಗಿತ್ತಾದರೂ, ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ನಲ್ಲಿ ಹವಾಮಾನ ವೈಪರೀತ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಳಂಬವಾಗಿದೆ.[ರೈಲುಗಳ ಮೇಲೆ ಸೋಲಾರ್ ಫಲಕ ಅಳವಡಿಕೆ]

ವಿಮಾನದ ನಿರ್ಮಾಣರ ಮತ್ತು ಪೈಲಟ್ ಆಗಿರುವ ಬೆರ್‌ಟ್ರಾಂಡ್ ಪಿಕ್ಕಾರ್ಡ್ ಹಾಗೂ ಆಂಡ್ರೆ ಬೋರ್ಶ್‌ಬಗ್ ಎರಡು ದಿನಗಳ ಕಾಲ ಅಹಮದಾಬಾದ್‌ನಲ್ಲೇ ತಂಗಲಿದ್ದು, ಸರ್ಕಾರದ ಪ್ರತಿನಿಧಿಗಳು, ಎನ್‌ಜಿಒಗಳನ್ನು ಭೇಟಿ ಮಾಡಿ ಪರಿಸರ ಸ್ನೇಹಿ ಇಂಧನ ಬಳಕೆಗೆ ಒತ್ತು ನೀಡಲು ಮನವಿ ಮಾಡಿಕೊಳ್ಳಲಿದ್ದಾರೆ. ಬಳಿಕ ವಿಮಾನ ವಾರಾಣಸಿಗೆ ತೆರಳಲಿದ್ದು, ಈ ವೇಳೆ ಗಂಗಾ ನದಿಯ ಮೇಲೂ ಹಾರಾಟ ನಡೆಸಲಿದೆ.
ವಿಮಾನ 72 ಮೀಟರ್‌ಗಳಷ್ಟು ಉದ್ದದ ರೆಕ್ಕೆಯನ್ನು ಹೊಂದಿದ್ದು, ಅದರಲ್ಲಿ ಅಳವಡಿಸಲಾಗಿರುವ 17248 ಸೋಲಾರ್ ಸೆಲ್‌ಗಳು ವಿಮಾನಕ್ಕೆ ಅಗತ್ಯ ಶಕ್ತಿಯನ್ನು ಪೂರೈಸಲಿವೆ. ಶಿಂಡ್ಲರ್ ಗ್ರೂಪ್, ಸೋಲಾರ್ ಇಂಪಲ್ಸ್ ತಂಡದ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಸೌರಚಾಲಿತ ವಿಮಾನವು ವಿವಿಧ ದೇಶಗಳ ಪರ್ಯಟನೆ ನಡೆಸುತ್ತಿದೆ.[ಜೆಟ್ ವಿಮಾನ ವೇಗಕ್ಕೆ ಹಾರಿದ ಸ್ವಿಸ್ ವೀರ]
ಅಹಮದಾಬಾದ್‌ನಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಲಿದೆ. ಗಂಗಾ ನದಿಯ ಮೇಲೂ ವಿಮಾನ ಹಾರಾಟ ನಡೆಸಲಿದೆ. ನಂತರ ಮ್ಯಾನ್ಮಾರ್, ಚೀನಾ, ಅಮೆರಿಕ, ಯೂರೋಪ್ ಮತ್ತಿತರ ದೇಶಗಳ ಪ್ರಮುಖ ನಗರಗಳನ್ನು ಸುತ್ತಲಿದೆ. ಪ್ರಪಂಚವನ್ನು ಸುತ್ತುವ ವಿಮಾನ ಜುಲೈ ಕೊನೆ ಅಥವಾ ಆಗಸ್ಟ್ ಮೊದಲ ವಾರದಲ್ಲಿ ವಾಪಸ್ ಅಭುದಾಬಿಯನ್ನು ತಲುಪಲಿದೆ.
ವಿಮಾನ ಹಾರಾಟದ ವಿಡಿಯೋ ನೋಡಿ












Click it and Unblock the Notifications