ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ ವೇಶ್ಯೆ ಕೇಳಿಕೊಂಡಿದ್ದೇನು?
ನವದೆಹಲಿ, ಮೇ 3: ಪುಣೆಯ ವೇಶ್ಯಾವಾಟಿಕೆಯ ಮಾಜಿ ವೇಶ್ಯೆಯೊಬ್ಬಳು ಪ್ರಧಾನಿ ಮೋದಿಗೆ ಟ್ವೀಟ್ ಮಾಡಿದ್ದಾಳೆ.
ತನ್ನ ಕೈ ಬರಹದಲ್ಲಿ ಪತ್ರವೊಂದನ್ನು ಬರೆದಿರುವ ಅವರು, ತನ್ನಲ್ಲಿ 10 ಸಾವಿರ ರು.ಗಳ ಹಳೆಯ ನೋಟುಗಳಿದ್ದು, ಅವನ್ನು ಹೊಸ ನೋಟುಗಳನ್ನಾಗಿ ಪರಿವರ್ತಿಸಿಕೊಳ್ಳಲು ಸಹಾಯ ಮಾಡಬೇಕೆಂದು ಕೋರಿದ್ದಾಳೆ.
ಅಲ್ಲದೆ, ಹೊಸ ನೋಟುಗಳು ಆಕೆಗೆ ಸಿಕ್ಕರೆ ಆಕೆ ಬಾಂಗ್ಲಾದೇಶದಲ್ಲಿರುವ ತನ್ನ ತವರೂರಿಗೆ ಹೋಗಲು ಅನುಕೂಲವಾಗುವುದಾಗಿ ವಿವರಿಸಿದ್ದಾಳೆ. ಬಿಳಿ ಹಾಳೆಯಲ್ಲಿ ತನ್ನೆಲ್ಲಾ ವೃತ್ತಾಂತವನ್ನು ಬರೆದು ಅದನ್ನು ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೂ ಟ್ವೀಟ್ ಮಾಡಿದ್ದಾಳೆ.[ಸೈನಿಕರ ಶಿರಚ್ಛೇದ: ಮೋದಿ 56 ಇಂಚು ಎದೆ ಪ್ರದರ್ಶಿಸುವುದು ಯಾವಾಗ?]

ಕೆಲ ವರ್ಷಗಳ ಹಿಂದೆ ಈಕೆಯನ್ನು ಕೆಲಸ ಕೊಡಿಸುವುದಾಗಿ ಬಾಂಗ್ಲಾದಿಂದ ಭಾರತಕ್ಕೆ ಕರೆತಂದಿದ್ದ ದುರುಳರು, ಆಕೆಯನ್ನು ವೇಶ್ಯಾವಾಟಿಕೆಗೆ ಮಾರಿದ್ದರು.
2015ರ ಡಿಸೆಂಬರ್ ನಲ್ಲಿ ಪುಣೆಯ ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದ ಪೊಲೀಸರು ಈಕೆಯನ್ನು ರಕ್ಷಣೆ ಮಾಡಿದ್ದರು.
ಅಂದಿನಿಂದ ಅಲ್ಲಿ ಇಲ್ಲಿ ಅಲೆದಾಡುತ್ತಿದ್ದಆಕೆಗೆ ತನ್ನ ತವರೂರಾದ ಬಾಂಗ್ಲಾದೇಶಕ್ಕೆ ಹೋಗಲು ಸಾಧ್ಯವಾಗಲೇ ಇಲ್ಲ.[ರಾಷ್ಟ್ರಪತಿ ಹುದ್ದೆಗೆ ಹೊಸ ಹೆಸರು; ಮೋದಿ ಹೊಸ ತಂತ್ರಗಾರಿಕೆ?]
ಹಾಗಾಗಿ, ಈಗ ಬಾಂಗ್ಲಾದೇಶಕ್ಕೆ ತಾನು ಹಿಂದಿರುಗಲು ಅವಕಾಶ ನೀಡಬೇಕೆಂದು ಅಲ್ಲಿನ ಸರ್ಕಾರವನ್ನು ಕೇಳಿಕೊಂಡಿದ್ದಾಳೆ. ಅಲ್ಲಿನ ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ, ಆಕೆ ತವರು ದೇಶಕ್ಕೆ ತೆರಳಲು ನಿರ್ಧರಿಸಿದ್ದು, ತಾನು ವೇಶ್ಯಾ ವಾಟಿಕೆಯಲ್ಲಿದ್ದಾಗ ಗ್ರಾಹಕರಿಂದ ಟಿಪ್ಸ್ ರೂಪದಲ್ಲಿ ಪಡೆದ ಹಣವನ್ನು ಈಗ ಪರಿವರ್ತಿಸಿ ಹೊಸ ನೋಟುಗಳನ್ನು ಕೊಡಿಸಬೇಕೆಂದು ಕೋರಿದ್ದಾಳೆ.
ತನ್ನಲ್ಲಿರುವ ಹಳೆಯ ನೋಟುಗಳನ್ನು ಬದಲಿಸುವಂತೆ ಕೇಳಿಕೊಂಡಿದ್ದಾಳೆ.











Click it and Unblock the Notifications