ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರವಿಂದ್ ಕೇಜ್ರಿವಾಲ್ ಮುಖಕ್ಕೆ ಯುವತಿ ಮಸಿ ಎರಚಿದ್ದೇಕೆ?

|
Google Oneindia Kannada News

ನವದೆಹಲಿ, ಜನವರಿ, 18: ಸಮ- ಬೆಸ ಸಂಖ್ಯೆ ಆಧರಿತ ವಾಹನ ಓಡಾಟ ವ್ಯವಸ್ಥೆ ಜಾರಿ ಮಾಡಿ ಹಿಗ್ಗಿನಿಂದ ಕುಳಿತುಕೊಂಡಿದ್ದ ಅರವಿಂದ್ ಕೇಜ್ರಿವಾಲ್ ಗೆ ಯುವತಿಯೊಬ್ಬರು ಮಸಿ ಎರಚಿದ್ದಾರೆ. ಸಮ- ಬೆಸ ಸಂಖ್ಯೆ ಆಧರಿತ ವಾಹನ ಓಡಾಟ ವ್ಯವಸ್ಥೆ ಯಶಸ್ಸಿನ ಕಾರಣಕ್ಕೆ ಹೆಹಲಿ ಜನರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದ ಕೇಜ್ರಿವಾಲ್ ಮುಖಕ್ಕೆ ಮಸಿ ಎರಚಲಾಗಿದೆ.

ಕೇಜ್ರಿವಾಲ್‌ಗೆ ಮಸಿ ಎರಚಿದ್ದು ಬಿಜೆಪಿ ಸಂಚಿನ ಒಂದು ಭಾಗ, ಇದರಲ್ಲಿ ದಿಲ್ಲಿ ಪೊಲೀಸರೂ ಶಾಮೀಲಾಗಿದ್ದಾರೆ ಎಂದು ಆಮ್‌ ಆದ್ಮಿ ಪಕ್ಷ ಹರಿಹಾಯ್ದಿದೆ. ಇದಕ್ಕೆ ಭದ್ರತಾ ವೈಫ‌ಲ್ಯವೇ ಕಾರಣ. ಒಂದು ವೇಳೆ ಇದು ಬಾಂಬ್‌ ಅಥವಾ ಆಸಿಡ್‌ ದಾಳಿಯಾಗಿದ್ದರೆ ಪರಿಣಾಮ ಘೋರವಾಗಿರುತ್ತಿತ್ತು. ಬಿಜೆಪಿ ಶಾಮೀಲಾಗಿದೆ ಎಂದು ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ದೂರಿದ್ದಾರೆ.[ಸುಧೀಂದ್ರ ಕುಲಕರ್ಣಿ ಮುಖಕ್ಕೆ ಮಸಿ]

arvind kejriwa

ಕೇಜ್ರಿವಾಲ್‌ ನೀತಿಯನ್ನು ನಾವು ವಿರೋಧ ಮಾಡುತ್ತೇವೆ. ಆದರೆ, ಮಸಿ ಎರಚುವುದು, ಚಪ್ಪಲಿ ಎಸೆಯುವುದು, ಕಪಾಳಮೋಕ್ಷ ಮಾಡುವಂಥ ಕೆಲಸ ಬಿಜೆಪಿ ಮಾಡುವುದಿಲ್ಲ ಎಂದು ಬಿಜೆಪಿ ವಕ್ತಾರ ನಳಿನ್‌ ಕೊಹ್ಲಿ ಹೇಳಿದ್ದಾರೆ.

ಮಸಿ ಎರಚಿದ ಮಹಿಳೆಯನ್ನು ಆಮ್ ಆದ್ಮಿ ಪಕ್ಷದಿಂದ ಹೊರಕ್ಕೆ ಬಂದವರು ರಚಿಸಿಕೊಂಡ ಆಮ್‌ ಆದ್ಮಿ ಸೇನಾದ ಕಾರ್ಯಕರ್ತೆ ಭಾವನಾ ಅರೋರಾ ಎಂದು ಗುರುತಿಸ ಲಾಗಿದೆ. ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.[ಫೈರಿಂಗ್ ಸ್ಟಾರ್ ಗೆ ಮಸಿ ಬಳಿದ ದಲಿತ ಸಂಘಟನೆಗಳು]

arvind kejriwa

ನಡೆದಿದ್ದು ಇಷ್ಟು?
ಸಮ-ಬೆಸ ವಾಹನ ಓಡಾಟ ವ್ಯವಸ್ಥೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಜನರಿಗೆ ಧನ್ಯವಾದ ಸಲ್ಲಿಸಲು ದಿಲ್ಲಿ ಸರ್ಕಾರ ಛತ್ರಸಾಲ್‌ ಕ್ರೀಡಾಂಗಣದಲ್ಲಿ ರವಿವಾರ ಸಂಜೆ ಕಾರ್ಯಕ್ರಮ ಆಯೋಜಿಸಿತ್ತು. ಕೇಜ್ರಿವಾಲ್‌ ಭಾಷಣ ಆರಂಭಿಸಿ ಐದು ನಿಮಿಷಗಳಾಗಿದ್ದವು. ಅಷ್ಟರಲ್ಲಿ ಭಾವನಾ ಅರೋರಾ ವೇದಿಕೆಯತ್ತ ಬಂದು, ಯಾವುದೋ ದಾಖಲೆಗಳನ್ನು ಪ್ರದರ್ಶಿಸಿದಳು. ನಂತರ ಭಾಷಣ ಮಾಡುತ್ತಿದ್ದ ಕೇಜ್ರಿವಾಲ್‌ ಅವರತ್ತ ಮಸಿ ಎರಚಿದರು. ಕೇಜ್ರಿವಾಲ್‌ ಹಾಗೂ ಅವರ ಪಕ್ಕದಲ್ಲಿ ನಿಂತಿದ್ದವರಿಗೆ ಮಸಿ ತಾಗಿತು. ಇದಾದ ನಂತರ ಪೊಲೀಸರು ಭಾವನಾ ಅವರನ್ನು ವಶಕ್ಕೆ ಪಡೆದುಕೊಂಡರು.

ಸದ್ಯ ಭಾವನಾ ಅವರಿಗೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವಿನ ಸಂಬಂಧಗಳು ಹಳಸಿರುವ ದಿನದಲ್ಲೇ ಇಂಥದ್ದೊಂದು ಪ್ರಕರಣ ನಡೆದಿರುವುದು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾದರೆ ಆಶ್ಚರ್ಯವಿಲ್ಲ.

English summary
Aam Admi Chief and Delhi Chief Minister Arvind Kejriwal once again became the victim of another ink attack while he was addressing a speech at Chhatrasal stadium on Sunday, Jan 17. Kejriwal was addressing his speech in the rally on his success of Odd-Even scheme. At this juncture, a women who thronged near the stage smeared ink on the Kejriwal. Immediately she drew attention of the security personal present there and later she was detained by the Delhi Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X