ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಬಲಿ: ಗಂಗಾ ನದಿಯಲ್ಲಿ ಕೊಚ್ಚಿ ಹೋದ ಮಹಿಳೆ- ಮಗಳ ಆಕ್ರಂದನ

ಇತ್ತೀಚೆಗೆ ರೀಲ್ಸ್ ಮಾಡುವಾಗ ಪ್ರಾಣಕ್ಕೆ ಕುತ್ತುತರುವಂತಹ ಸಾಹಸಗಳನ್ನು ಮಾಡುವುದು ಹೆಚ್ಚಾಗಿದೆ. ಇಂತಹ ಹುಚ್ಚಾಟದಿಂದಾಗಿ ಅದೆಷ್ಟೋ ಜನ ಪ್ರಾಣವನ್ನು ಕಳೆದುಕೊಂಡಿರುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಆದರೂ ಕೂಡ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗೆ ರೀಲ್ಸ್ ಮಾಡಲು ಹೋಗಿ ಮತ್ತೊಂದು ಜೀವ ಬಲಿಯಾಗಿದೆ.

ಹೌದು ಉತ್ತರಾಖಂಡದ ಉತ್ತರಕಾಶಿಯ ಮಣಿಕರ್ಣಿಕಾ ಘಾಟ್‌ನ ಗಂಗಾ ನದಿಯಲ್ಲಿ ರೀಲ್ ಚಿತ್ರೀಕರಣ ಮಾಡುವಾಗ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಗಂಗಾ ನದಿ ನೀರು ವೇಗವಾಗಿ ಹರಿಯುವಾಗ ನೀರಿಗೆ ಇಳಿದ ಮಹಿಳೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ. ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಮತ್ತೊಂದು ದುರಾದೃಷ್ಟ ಅಂದರೆ ಆಕೆಯ ದೇಹ ಇನ್ನೂ ಕೂಡ ಪತ್ತೆ ಆಗಿಲ್ಲ. ಪೊಲೀಸರು ಆಕೆಯ ಮೃತ ದೇಹಕ್ಕಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.

Woman died while doing reel in ganges river at manikarnika ghat in uttarkashi- video goes viral

ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್ ಅನ್ನು ಹೆಚ್ಚಿಸಿಕೊಳ್ಳುವ ಆಸೆಗೆ ರೀಲ್ಸ್ ಮಾಡಲು ಹೋಗಿ ವೇಗವಾಗಿ ಹರಿಯುವ ಗಂಗಾ ನದಿಗೆ ಮಹಿಳೆ ಇಳಿದಿದ್ದಾಳೆ. ದಡದಲ್ಲಿ ಮೊಣಕಾಲು ಮುಳುಗುವಷ್ಟು ನೀರು ಇರಲಿಲ್ಲ. ಹೀಗಾಗಿ ಮಹಿಳೆ ಧೈರ್ಯವಾಗಿ ನೀರಿಗೆ ಇಳಿದಿದ್ದಾಳೆ. ನೀರಿನಲ್ಲಿ ನಿಂತುಕೊಂಡು ಹಿಂದಕ್ಕೆ ಸಾಗಿದ್ದಾಳೆ. ಆದರೆ ಹಿಂದಕ್ಕೆ ಆಳ ಇರುವುದು ಆಕೆಯ ಗಮನಕ್ಕೆ ಬಂದಿಲ್ಲ.

Take a Poll

ವಿಡಿಯೋ ಕಡೆಗೆ ನೋಡುತ್ತಾ ಪೋಸ್ ಕೊಡುತ್ತಾ ಎರಡು ಹೆಜ್ಜೆ ಹಿಂದೆ ಹೋಗಿದ್ದಾಳೆ ಅಷ್ಟೇ. ಕೆಲವೇ ಸೆಕೆಂಡುಗಳಲ್ಲಿ ನೀರಿನ ಆಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಆರಂಭದಲ್ಲಿ ಆಕೆಯ ಕೈಗಳು ಮಾತ್ರ ಕಾಣಿಸುತ್ತವೆ. ನಂತರ ಆಕೆಯ ದೇಹ ಕಾಣಿಸಿಕೊಳ್ಳುವುದೇ ಇಲ್ಲ. ವೈರಲ್ ವಿಡಿಯೋದಲ್ಲಿ ಆಕೆಯ ಮಗಳು 'ಮಮ್ಮಿ... ಮಮ್ಮಿ...' ಅಂತ ಕೂಗುತ್ತಾಳೆ. ಆದರೆ ಮಗಳ ಕೂಗು ಕಿವಿಗೆ ಬೀಳದಷ್ಟು ದೂರ ತಾಯಿ ನೀರಿನಲ್ಲಿ ಹರಿದುಕೊಂಡು ಹೋಗಿ ಬಿಡುತ್ತಾಳೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಪತ್ತೆಯಾಗದ ಮೃತದೇಹ:-

ಈ ಅಪಘಾತದಲ್ಲಿ ಮಹಿಳೆ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾಳೆ. ಸ್ಥಳೀಯ ಪೊಲೀಸರ ಪ್ರಕಾರ, ಆಕೆಯನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ಆರಂಭಿಸಲಾಗಿದ್ದರೂ, ನದಿಯ ಹರಿವು ವೇಗವಾಗಿದ್ದರಿಂದ ಮಹಿಳೆಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಆಕೆಯ ಶವವನ್ನು ಇನ್ನೂ ಕೂಡ ಪತ್ತೆ ಹಚ್ಚಲಾಗಿಲ್ಲ ಎಂದಿದ್ದಾರೆ.

Woman died while doing reel in ganges river at manikarnika ghat in uttarkashi- video goes viral

ಮತ್ತೊಂದು ಸಾಹಸ ರೀಲ್ ವೈರಲ್

ಇದೇ ವೇಳೆ ಮತ್ತೊಂದು ಸಹಾಸಮಯ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಲಿಸುತ್ತಿದ್ದ ರೈಲಿನೊಂದಿಗೆ ಯುವತಿಯೊಬ್ಬಳು ರನ್ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ವೇಗವಾಗಿ ಚಲಿಸುವ ರೈಲಿನೊಂದಿಗೆ ಯುವತಿ ಓಡಲು ಯತ್ನಿಸಿದ್ದಾಳೆ.

ಅಷ್ಟಕ್ಕೂ ಈ ವಿಡಿಯೋವನ್ನು ಹಂಚಿಕೊಂಡಿದ್ದು ಫಿಟ್‌ನೆಸ್ ಪ್ರಭಾವಿ ಪಿಕು ಸಿಂಗ್. ಈಕೆ ತನ್ನ ಫಿಟ್‌ನೆಸ್ ಅನ್ನು ಪ್ರದರ್ಶಿಸಲು ಈ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ನೋಡುಗರ ಕಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ ಈ ವಿಡಿಯೋಕ್ಕೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿವೆ.

ಈ ವಿಡಿಯೋಕ್ಕೆ ಒಬ್ಬ ಬಳಕೆದಾರರು, "ಇನ್ನೂ ಇದರ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಒಂದು ರೀಲ್ ನಿಮ್ಮ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ" ಎಂದು ಕೇಳಿದರು. ಮತ್ತೊಬ್ಬರು "ಒಂದು ತಪ್ಪು ಹೆಜ್ಜೆ ಇಟ್ಟರೆ ಅದು ದುರಂತವಾಗಿ ಕೊನೆಗೊಳ್ಳಬಹುದು ಎಚ್ಚರ" ಎಂದು ವ್ಯಾಪಕ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ರೀಲ್ಸ್ ಮಾಡುವ ಗೋಜಿಗೆ ಬಿದ್ದು ಪ್ರಾಣವನ್ನು ಕಳೆದುಕೊಳ್ಳವವರು ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದ್ದು ಮಾತ್ರ ಸುಳ್ಳಲ್ಲ. ಇಂತಹ ಘಟನೆಗಳಿಂದಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+