Get Updates
Get notified of breaking news, exclusive insights, and must-see stories!

ಶಿರಡಿ ಸಾಯಿಬಾಬಾಗೆ 2 ಕೆ.ಜಿ. ತೂಕದ ಚಿನ್ನದ ಪಾದುಕೆ ನೀಡಿದ ಭಕ್ತೆ

ಸೂರತ್ ನ ಭಕ್ತೆಯೊಬ್ಬರಿಂದ ಶಿರಡಿ ಸಾಯಿಬಾಬಾ ಅವರಿಗೆ 2 ಕೆ.ಜಿ. ತೂಕದ ಚಿನ್ನದ ಪಾದುಕೆ ಕಾಣಿಕೆ. ಸೋಮವಾರ (ಜುಲೈ 10) ಗುರು ಪೂರ್ಣಿಮೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಣಿಕೆ ಸಮರ್ಪಣೆ.

ಶಿರಡಿ, ಜುಲೈ 9: ಸೂರತ್ ನಗರದ ಸಂಧ್ಯಾ ಗುಪ್ತಾ ಎಂಬ ಮಹಿಳೆಯೊಬ್ಬರು ಶನಿವಾರ (ಜುಲೈ 8) ಇಲ್ಲಿನ ಶಿರಡಿ ಸಾಯಿಬಾಬಾ ಅವರಿಗೆ 2 ಕೆ.ಜಿ. ಚಿನ್ನದ ಪಾದಗಳುಳ್ಳ ಫಲಕವೊಂದನ್ನು ಸಮರ್ಪಿಸಿದ್ದಾರೆ.

ಭಾನುವಾರ (ಜುಲೈ 9) ಎಲ್ಲೆಡೆ ಗುರು ಪೌರ್ಣಿಮೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪಾದುಕೆಗಳನ್ನು ಆ ಭಕ್ತೆ ಸಮರ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.

Woman devotee donates 2 kg gold padukas to Shirdi Sai baba

ಈ ಪಾದುಕೆಗಳನ್ನು ಶಿರಡಿಯ ದ್ವಾರಕಾಮಯಿ ದೇಗುಲದಲ್ಲಿರುವ ಸಾಯಿಬಾಬಾ ಅವರ ಮೂರ್ತಿಯ ಮುಂದೆ ಈ ಪಾದುಕೆಯ ಫಲಕವನ್ನು ಇಡಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ಹೇಳಿದೆ.

ಗುರು ಪೌರ್ಣಿಮೆ ಹಿನ್ನೆಲೆಯಲ್ಲಿ ಮೂರು ದಿನಗಳ ಪೂಜಾ ಕಾರ್ಯಕ್ರಮವು ಶಿರಡಿಯಲ್ಲಿ ಶನಿವಾರ (ಜುಲೈ 9) ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ, ದೇಶದ ನಾನಾ ಭಾಗಗಳಿಂದ ಭಕ್ತಾದಿಗಳು ಸಾಕಷ್ಟು ಸಂಖ್ಯೆಯಲ್ಲಿ ಶಿರಡಿಗೆ ಆಗಮಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+