ಎಲೆಕೋಸಿನ ಜತೆಗೆ ಇದ್ದ ಹಾವಿನ ಮರಿಯನ್ನು ಬೇಯಿಸಿ ತಿಂದ ತಾಯಿ-ಮಗಳು

Posted By:
Subscribe to Oneindia Kannada

ಇಂದೋರ್, ಜುಲೈ 29: ಮೂವತ್ತೈದು ವರ್ಷದ ಮಹಿಳೆ ಮತ್ತು ಆಕೆಯ ಮಗಳು ಎಲೆಕೋಸಿನಲ್ಲಿದ್ದ ಹಾವಿನ ಮರಿಯನ್ನು ಬೇಯಿಸಿಕೊಂಡು ತಿಂದು, ಆಸ್ಪತ್ರೆ ಸೇರಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಇಬ್ಬರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹರಿಯಾಣದ ಶಾಲೆಯ ಮಧ್ಯಾಹ್ನದ ಊಟದಲ್ಲಿ ಮರಿಹಾವು

ಅಫ್ಜಾನ್ ಇಮಾಮ್ ಹಾಗೂ ಅವರ ಮಗಳು ಆಮ್ನಾ ಸ್ಥಿತಿ ಸ್ಥಿರವಾಗಿದೆ. ಇನ್ನೇನಾದರೂ ವಿಷಕಾರಿ ಅಂಶಗಳು ಅವರ ದೇಹದಲ್ಲಿ ಉಳಿದುಕೊಂಡಿವೆಯೇ ಎಂಬ ಬಗ್ಗೆ ಎಂವೈ ಸರಕಾರಿ ಆಸ್ಪತ್ರೆ ವೈದ್ಯರು ವಿವಿಧ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.

Woman, Daughter Hospitalised After They Ate Snake With Cabbage

ಕಳೆದ ರಾತ್ರಿ ಮಹಿಳೆ ಮತ್ತು ಬಾಲಕಿ ಆಸ್ಪತ್ರೆಗೆ ಸೇರಿದ ವೇಳೆ ವಾಂತಿ ಮಾಡಿಕೊಳ್ಳುತ್ತಿದ್ದರು. ಅಫ್ಜಾನ್ ಮತ್ತು ಆಮ್ನಾ ಎಲೆಕೋಸಿನಲ್ಲಿದ್ದ ಹಾವಿನ ಮರಿಯನ್ನು ಗಮನಿಸದೆ ಬೇಯಿಸಿಕೊಂಡು ತಿಂದಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಎಲೆಕೋಸಿನಲ್ಲಿ ಹಾವಿನ ಮರಿ ಅಡಗಿಕೊಂಡಿತ್ತು. ಅದನ್ನು ಗಮನಿಸದೆ ಕತ್ತರಿಸಿ, ಬೇಯಿಸಿಕೊಂಡು ತಿಂದಿದ್ದಾರೆ. ಬಾಕಿ ಉಳಿದಿದ್ದ ತರಕಾರಿಯಲ್ಲಿ ಹಾವಿನ ಮರಿಯ ಭಾಗವನ್ನು ಕಂಡಾಗ ಅವರಿಗೆ ಗೊತ್ತಾಗಿದೆ.

ಹಾವಿನ ವಿಷ ರಕ್ತದ ಜತೆಗೆ ಬೆರೆತುಹೋದರೆ ತುಂಬ ಅಪಾಯಕಾರಿ. ಇಬ್ಬರೂ ರೋಗಿಗಳ ಆರೋಗ್ಯ ಸ್ಥಿತಿಯ ಮೇಲೆ ಇನ್ನೂ ಕೆಲ ದಿನಗಳ ಕಾಲ ನಿಗಾ ಇಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A woman and her teenage daughter were hospitalised in Indore after they accidentally cooked and ate a baby snake along with a vegetable last night.
Please Wait while comments are loading...