ಗಂಡನಿಗೆ ಹೊಡೆದದ್ದಕ್ಕೆ ಬಾರ್‌ಗೆ ಹೋಗಿ ಸಿಬ್ಬಂದಿಯನ್ನು ಥಳಿಸಿದ ಪತ್ನಿ!
ಹೈದರಾಬಾದ್, ಮೇ. 21: ಗಂಡ ಮದ್ಯಪಾನ ಮಾಡುತ್ತಾನೆ ಎಂದು ಪತಿಯನ್ನು ದೂರ ಇಡುವ ಹೆಂಡತಿಯರೇ ಹೆಚ್ಚಿದ್ದಾರೆ. ಮದ್ಯಪಾನ ಮಾಡುವ ಗಂಡಂದಿರನ್ನು ಸಂಶಯದಿಂದ ನೋಡುವ, ಅವರಿಗೆ ಗೌರವ ಕೊಡದಿರುವ, ಪತಿಯನ್ನು ಕುಡಿತದಿಂದ ಬಿಡುಗಡೆ ಮಾಡಿಸಲು ಏನೇನು ಸರ್ಕಸ್ ಮಾಡುವ ಹೆಂಡತಿಯರಿದ್ದಾರೆ.
ಆದರೆ, ಹೈದರಾಬಾದ್‌ನಲ್ಲಿ ಪತ್ನಿಯೊಬ್ಬರು ತನ್ನ ಪತಿಗೆ ವೈನ್ ಶಾಪ್ ಸಿಬ್ಬಂದಿ ಥಳಿಸಿದ್ದಾರೆ ಎಂದು ಬಾರ್‌ಗೆ ಹೋಗಿ ದೊಡ್ಡ ರಾದ್ಧಾಂತ ಮಾಡಿದ್ದಾರೆ. ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅಂಗಡಿಗೆ ಬೆಂಕಿ ಹಾಕುವ ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಅಗುತ್ತಿದೆ.

ಪತಿಗೆ ಥಳಿಸಿದ ವೈನ್ ಶಾಪ್‌ನ ಸಿಬ್ಬಂದಿ ಮೇಲೆ ಪತ್ನಿ ಹಲ್ಲೆ!
ಹೈದರಾಬಾಸ್‌ನ ಮಧುರಾನಗರದ ವೈನ್ ಶಾಪ್‌ನ ಸಿಬ್ಬಂದಿ ತನ್ನ ಪತಿಗೆ ಥಳಿಸಿದ್ದಾರೆ ಎಂದು ತಿಳಿದ ಮಹಿಳೆ ಮತ್ತು ಇತರರು ಅಂಗಡಿಗೆ ತೆರಳಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಕಳೆದ ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ವೈನ್ ಶಾಪ್ ಸಿಬ್ಬಂದಿ ಶನಿವಾರ ದೂರು ದಾಖಲಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ರಮೇಶ್ ಎಂಬುವವರು ಶುಕ್ರವಾರ ರಾತ್ರಿ ಮದ್ಯ ಖರೀದಿಸಲು ವೈನ್ ಶಾಪ್‌ಗೆ ಭೇಟಿ ನೀಡಿದ್ದರು, ಆದರೆ ಮದ್ಯ ನೀಡಲು ತಡವಾದ ಕಾರಣ ಅವರು ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳದ ವೇಳೆ ವೈನ್ ಶಾಪ್ ಸಿಬ್ಬಂದಿ ಆತನನ್ನು ಥಳಿಸಿದ್ದಾರೆ.
ಇದಾದ ಕೆಲ ಗಂಟೆಗಳ ನಂತರ ರಮೇಶ್ ಪತ್ನಿ ಹಾಗೂ ಇತರ ಮೂವರಿಗೆ ವಿಷಯ ತಿಳಿದಿದೆ. ಬಳಿಕ ಮಹಿಳೆ ಮತ್ತು ಇತರರು ಅಂಗಡಿ ಬಳಿ ಬಂದು ಗಲಾಟೆ ಮಾಡಿದ್ದಾರೆ. ಮದ್ಯದ ಬಾಟಲಿಗಳನ್ನು ಒಡೆದು ಅಂಗಡಿಯೊಳಗೆ ನುಗ್ಗಲು ಯತ್ನಿಸಿದ್ದಾರೆ. ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
భర్తపై దాడి.. భార్య ప్రతీకారం..
— Telugu Scribe (@TeluguScribe) May 19, 2024
మద్యం కొనేందుకు వెళ్ళిన వ్యక్తి తల పగల గొట్టిన వైన్ షాపు సిబ్బంది.
భర్తను రక్తంతో చూడడంతో రెచ్చి పోయిన భార్య.
వైన్ షాపులోకి జొరబడి సిబ్బందిపై దాడి.
అడ్డుకునేందుకు వచ్చిన పోలీసులను జుట్టు పట్టుకుని కొట్టిన మహిళ.
మధురా నగర్ పోలీస్ స్టేషన్… pic.twitter.com/oObObPHnDm
ಇಷ್ಟೇ ಅಲ್ಲದೆ ಅಂಗಡಿಗೆ ಬೆಂಕಿ ಹಚ್ಚುವುದಾಗಿ ಮಹಿಳೆ ಬೆದರಿಕೆ ಹಾಕಿದ್ದಾಳೆ ಎನ್ನಲಾಗಿದೆ. ಇದರಿಂದ ಮತ್ತಷ್ಟು ತೊಂದರೆಯಾಗಬಹುದೆಂಬ ಭಯದಿಂದ ಸಿಬ್ಬಂದಿ ರಾತ್ರಿಯೇ ಅಂಗಡಿ ಮುಚ್ಚಿದ್ದಾರೆ. ಸಿಬ್ಬಂದಿಯ ದೂರಿನ ಮೇರೆಗೆ ಮಹಿಳೆ ಮತ್ತು ಇತರ ಮೂವರ ವಿರುದ್ಧ ಐಪಿಸಿ ಸೆಕ್ಷನ್ 448 (ಮನೆ ಅತಿಕ್ರಮಣ), 427 (ಕಿಡಿಗೇಡಿತನ), ಮತ್ತು 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರಮೇಶ್ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು ಪ್ರತಿ ಪ್ರಕರಣವನ್ನೂ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications