ಗಂಡ ಅದಕ್ಕೆ ಅಸಮರ್ಥ ಎಂದು ಮದುವೆಯಾದ 3ದಿನದಲ್ಲಿ ಡಿವೋರ್ಸ್ ಕೇಳಿದ ಪತ್ನಿ!
ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಮದುವೆಯಾಗಿ ಮೊದಲ ರಾತ್ರಿಯಲ್ಲೇ ವಿಚಿತ್ರವಾದ ಘಟನೆಯೊಂದು ಸಂಭವಿಸಿದ್ದು. ಮದುವೆಯಾದ ಮೂರೇ ದಿನಕ್ಕೆ ಪತಿಯಿಂದ ಡಿವೋರ್ಸ್ ಕೇಳಿದ್ದಾರೆ. ಗಂಡನ ಆ ಲೋಪವೇ ಇದಕ್ಕೆ ಕಾರಣ ಎಂದು ನವವಿವಾಹಿತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹೌದು ಇಲ್ಲಿನ ಗೋರಖ್‌ಪುರದ ನವವಿವಾಹಿತ ಮಹಿಳೆಯೊಬ್ಬರು ಮದುವೆಯಾದ ಕೇವಲ ಮೂರು ದಿನಗಳಲ್ಲೇ ವಿಚ್ಛೇದನ ಕೊಡುವಂತೆ ಕೇಳಿದ್ದಾರೆ. ಮದುವೆಯಾದ ಮೊದಲ ರಾತ್ರಿಯಲ್ಲೇ ಅವರ ಪತಿ ದೈಹಿಕವಾಗಿ ದುರ್ಬಲವಾಗಿದ್ದು, ಲೈಂಗಿಕ ಸಂಬಂಧ ಹೊಂದಲು ಅಸಮರ್ಥನಾಗಿದ್ದೇನೆ ಎಂದು ಹೇಳಿದ್ದಾರೆ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಹೆಣ್ಣಿನ ಕಡೆಯವರು ಆ ವ್ಯಕ್ತಿ (ನವ ವಿವಾಹಿತ) ತಂದೆಯಾಗಲು ಸಾಧ್ಯವಿಲ್ಲ ಎಂದು ಮೆಡಿಕಲ್ ರಿಪೋರ್ಟ್ ಸಹ ಸಲ್ಲಿಸಿದ್ದಾರೆ. ಅಲ್ಲದೇ ತಂದೆಯಾಗಲು ಸಾಧ್ಯವಾಗದೆ ಇರುವುದಕ್ಕೆ ಹಾಗೂ ಲೈಂಗಿಕ ಸಾಮರ್ಥ್ಯ ಇಲ್ಲ ಎನ್ನುವ ಕಾರಣಕ್ಕೆ ಡಿವೋರ್ಸ್ ತೆಗೆದುಕೊಳ್ಳುವುದಕ್ಕೆ ನಿರ್ಧರಿಸಲಾಗಿದೆ.

ಇದರೊಂದಿಗೆ ಮದುವೆ ಸಂದರ್ಭದಲ್ಲಿ ನೀಡಲಾಗಿದ್ದ ಉಡುಗೊರೆಗಳು ಹಾಗೂ ಮದುವೆಗೆ ಖರ್ಚು ಮಾಡಿರುವ ಹಣವನ್ನು ಹಿಂದಿರುಗಿಸುವಂತೆಯೂ ಹೇಳಲಾಗಿದೆ. ಮಹಿಳೆ ಕಳುಹಿಸಿದ ಲೀಗಲ್ ನೋಟಿಸ್‌ನಲ್ಲಿ, ನಾನು ದೈಹಿಕವಾಗಿ ಅಸಮರ್ಥನಾಗಿರುವ ವ್ಯಕ್ತಿಯೊಂದಿಗೆ ನನ್ನ ಜೀವನ ನಡೆಸಲು ಸಾಧ್ಯವಿಲ್ಲ. ಮದುವೆಯಾದ ಮೇಲೆ ಮೊದಲ ರಾತ್ರಿಯೇ ಅವರು ನನಗೆ ವಿಷಯ ಹೇಳಿದಾಗ ನನಗೆ ತೀವ್ರ ಆಘಾತವಾಯಿತು ಎಂದು ಬರೆದುಕೊಂಡಿದ್ದಾರೆ. 25 ವರ್ಷದ ವರ ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ ಕೈಗಾರಿಕಾ ಘಟಕದಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ದಂಪತಿಗಳು ನವೆಂಬರ್ 28 ರಂದು ವಿವಾಹವಾಗಿದ್ದಾರೆ. ಡಿಸೆಂಬರ್ 1 ರಂದು ವಧುವಿನ ತಂದೆ ಅತ್ತೆಯ ಮನೆಗೆ ಸಾಂಪ್ರದಾಯಿಕ ಆಚರಣೆ(ಮೊದಲ ರಾತ್ರಿ)ಗಾಗಿ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ. ಲೈಂಗಿಕ ಸಂತೋಷ ನೀಡುವುದಕ್ಕೆ ನಾನು ಅಸಮರ್ಥ ಅಥವಾ ಅರ್ಹನಾಗಿಲ್ಲ ಎನ್ನುವುದನ್ನು ಗಂಡು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ. ಡಿಸೆಂಬರ್ 3 ರಂದು ಬೆಲಿಯಾಪರ್‌ನಲ್ಲಿರುವ ಸಂಬಂಧಿಕರ ಮನೆಯಲ್ಲಿ ಎರಡೂ ಕುಟುಂಬಗಳು ಸೇರಿ ಈ ವಿಚಾರದ ಬಗ್ಗೆ ಚರ್ಚೆ ಮಾಡಿವೆ. ಮದುವೆಗೂ ಮುಂಚೆ ಗಂಡಿನ ಲೋಪಗಳನ್ನು / ವೈದ್ಯಕೀಯ ಸಮಸ್ಯೆಯನ್ನು ಉದ್ದೇಶ ಪೂರ್ವಕವಾಗಿ ಮರೆ ಮಾಚಲಾಗಿದೆ ಎಂದು ಹುಡುಗಿಯ ಕಡೆಯವರು ಆರೋಪ ಮಾಡಿದ್ದಾರೆ.
ಇದು ಎರಡನೇ ವಿವಾಹ: ಅಲ್ಲದೇ ಇದು ಆ ಹುಡುಗನಿಗೆ ಎರಡನೇ ಮದುವೆಯಾಗಿದೆ. ಮೊದಲನೇ ಬಾರಿ ಮದುವೆಯಾದಾಗ ಹುಡುಗಿ, ಹುಡುಗ ಲೈಂಗಿಕ ಪ್ರಕ್ರಿಯೆ ನಡೆಸುವುದಕ್ಕೆ ಅರ್ಹನಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಒಂದು ತಿಂಗಳ ಅವಧಿಯಲ್ಲೇ ಗಂಡನನ್ನು ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದೆ.












Click it and Unblock the Notifications