Isro: ಏನಿದು ಸ್ಪೇಸ್ ಡಾಕಿಂಗ್? ಇಸ್ರೋ ಭವಿಷ್ಯದ ಯೋಜನೆಗಳಿಗೆ ಇದು ಮಹತ್ವ ಯಾಕೆ?
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿದೆ. ಸೋಮವಾರ ಇಸ್ರೋದ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಡಾಕಿಂಗ್ ಪ್ರಯೋಗ (SpaDeX) ಯೋಜನೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿದೆ. ಸೋಮವಾರ ರಾತ್ರಿ 10 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 220 ಕೆಜಿಯ ಉಪ್ರಗ್ರಹವನ್ನು ಹೊತ್ತು ಬಾಹ್ಯಾಕಾಶಕ್ಕೆ ಜಿಗಿಯಿತು.
ಬಾಹ್ಯಾಕಾಶದಲ್ಲಿ ಟ್ರಾಫಿಕ್ ಉಂಟಾದ ಕಾರಣ ನಿಗದಿಗಿಂತ 2 ನಿಮಿಷ ತಡವಾಗಿ ಉಡಾವಣೆ ಮಾಡಲಾಯಿತು. ಇಸ್ರೋ ಭವಿಷ್ಯದಲ್ಲಿ ಹಲವು ಮಹತ್ವದ ಯೋಜನೆಗಳನ್ನು ಹಾಕಿಕೊಂಡಿದ್ದು ಅದಕ್ಕಾಗಿ ಈಗ ನಡೆಸುತ್ತಿರುವ ಡಾಕಿಂಗ್ ಕಾರ್ಯಾಚರಣೆ ನಿರ್ಣಾಯಕವಾಗಿದೆ. ಇದರಲ್ಲಿ ಯಶಸ್ವಿಯಾದರೆ ಇಸ್ರೋದ ಮುಂದಿನ ಯೋಜನೆಗಳ ಅನುಷ್ಠಾನ ಮತ್ತಷ್ಟು ಸುಲಭವಾಗಲಿದೆ.

ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಮಾತ್ರ ಈವರೆಗೆ ಬಾಹ್ಯಾಕಾಶ ಡಾಕಿಂಗ್‌ನಲ್ಲಿ ಯಶಸ್ವಿಯಾಗಿದ್ದು ಭಾರತ ನಾಲ್ಕನೇ ದೇಶವಾಗಲಿದೆ. ಈ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮಹತ್ವದ ಸಾಧನೆ ಮಾಡಿದಂತಾಗಿದೆ.
ಏನಿದು ಸ್ಪೇಸ್ ಡಾಕಿಂಗ್?
ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಡಾಕಿಂಗ್ ಒಂದು ನಿರ್ಣಾಯಕ ಚಟುವಟಿಕೆಯಾಗಿದೆ. ಎರಡು ಬಾಹ್ಯಾಕಾಶ ನೌಕೆಗಳನ್ನು ಅಂತರಿಕ್ಷದಲ್ಲಿ ಸಂಪರ್ಕಿಸುವಂತೆ ಮಾಡುವುದು, ಎರಡೂ ಕೂಡಿ ಒಂದು ಘಟಕವಾಗಿ ಕೆಲಸ ಮಾಡುವಂತೆ ಮಾಡುತ್ತಿದೆ. ಡಾಕಿಂಗ್‌ನಿಂದ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವುದು, ಮರುಪೂರೈಕೆ ಕಾರ್ಯಾಚರಣೆ ಮತ್ತು ಬಾಹ್ಯಾಕಾಶ ನಿಲ್ದಾಣಗಳನ್ನು ನಿರ್ಮಿಸುವ ಕೆಲಸವನ್ನು ಸುಗಮವಾಗಿಸುತ್ತದೆ.
ವೇಗವಾಗಿ ಚಲಿಸುವ ಬಾಹ್ಯಾಕಾಶ ನೌಕೆಗಳನ್ನು ಒಂದೇ ಕಕ್ಷೆಗೆ ತಂದು ಹತ್ತಿರಕ್ಕೆ ತರಲಾಗುತ್ತದೆ, ಮತ್ತು ಅವು ಪರಸ್ಪರ ಡಿಕ್ಕಿಯಾಗದಂತೆ ಒಂದಕ್ಕೊಂದು ಜೋಡಿಸಲಾಗುತ್ತದೆ. ಇಸ್ರೋ ಈಗ ಎರಡು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಹಾರಿಸಿದ್ದು ಎರಡನ್ನೂ ಅಂತರಿಕ್ಷದಲ್ಲಿ ಜೋಡಿಸುವ ಕೆಲಸ ಮಾಡುತ್ತಿದೆ, ಇದು ಯಶಸ್ವಿಯಾದರೆ ಇಸ್ರೋದ ಭವಿಷ್ಯದ ಕನಸುಗಳಾದ ಬಾಹ್ಯಾಕಾಶ ನಿಲ್ದಾಣ, ಚಂದ್ರಯಾನ ಯೋಜನೆಗಳಿಗೆ ಆರಂಭಿಕ ಹಂತದಲ್ಲಿ ದೊಡ್ಡ ಯಶಸ್ಸು ಸಿಕ್ಕಂತಾಗುತ್ತದೆ.
2035ರ ವೇಳೆಗೆ ಭಾರತ ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ಈಗ ನಡೆಸುತ್ತಿರುವ ಪ್ರಯೋಗ ಅದಕ್ಕೆ ನಿರ್ಣಾಯಕವಾಗಲಿದೆ. ಭಾರತ ನಿರ್ಮಾನ ಮಾಡಲು ಯೋಜಿಸಿರುವ ಬಾಹ್ಯಾಕಾಶ ನಿಲ್ದಾಣ ಐದು ಮಾಡ್ಯೂಲ್‌ಗಳನ್ನು ಒಳಗೊಂಡಿರುತ್ತದೆ, ಇವುಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸಲಾಗುತ್ತದೆ. 2028ರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣವನ್ನು ಪ್ರಾರಂಭಿಸುವ ಯೋಜನೆ ಹೊಂದಿದೆ.
ಚಂದ್ರಯಾನ-4 ಮಿಷನ್ ಯೋಜನೆ ಕೂಡ ಇಸ್ರೋ ಮುಂದಿದ್ದು, ಅದರ ಯಶಸ್ಸಿಗೆ ಡಾಕಿಂಗ್ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತದೆ. ಈ ಯೋಜನೆ ಮೂಲಕ ಚಂದ್ರನ ಮೇಲಿರುವ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ತರುವ ಗುರಿಯನ್ನು ಹೊಂದಿದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಹಲವು ಉಡಾವಣಾ ವಾಹನಗಳು ಉಪಗ್ರಹಗಳನ್ನು ಚಂದ್ರನ ಮೇಲೆ ತೆಗೆದುಕೊಂಡು ಹೋಗಲಿದ್ದು ಅಲ್ಲಿಯೇ ಅವುಗಳನ್ನು ಜೋಡಿಸಿ ಕಾರ್ಯಾಚರಣೆ ಆರಂಭಿಸುವುದಾಗಿದೆ.
-
Karnataka Budget 2026: ಮಾ.6 ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ, ಸಮಯ, ನೇರ ಪ್ರಸಾರ ಲಿಂಕ್, ವಿವರ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Bengaluru-Hyderabad ಬುಲೆಟ್ ಟ್ರೈನ್: ಕೇವಲ 2 ಗಂಟೆ ಪ್ರಯಾಣ, 626 ಕಿಮೀ ಉದ್ದದ ಹಾದಿಯಲ್ಲಿ 12 ನಿಲ್ದಾಣಗಳು -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
Karnataka Weather: ರಾಜ್ಯದಲ್ಲಿ ಏರುತ್ತಿದೆ ಬಿಸಿಲಿನ ಝಳ; ಬೆಂಗಳೂರಿನ ತಾಪಮಾನ 34 ಡಿಗ್ರಿಗೆ ಏರಿಕೆ -
ಜೈಲಲ್ಲಿರುವ ಪವಿತ್ರಾ ಗೌಡಗೆ ಮನೆ ಊಟ ವ್ಯವಸ್ಥೆಗೆ ಬ್ರೇಕ್ ಹಾಕಿದ ಹೈಕೋರ್ಟ್ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
Dog Satish: ಇನ್ಸ್ಟಾಗ್ರಾಂ ಯಾರ ಅಪ್ಪಂದೂ ಅಲ್ಲ, ವಿಡಿಯೋ ಡಿಲೀಟ್ ಮಾಡಲ್ಲ, ನನಗೆ ಮೀಟರ್ ಇದೆ: ಡಾಗ್ ಸತೀಶ್ -
Toxic: ಅವಸರಕ್ಕಿಂತ ತಾಳ್ಮೆ ಮುಖ್ಯ: ಟಾಕ್ಸಿಕ್ ಬಿಡುಗಡೆ ಮುಂದೂಡಿದ ಬೆನ್ನಲ್ಲೇ ಯಶ್ ಬೆಂಬಲಕ್ಕೆ ನಿಂತ ಅಭಿಮಾನಿಗಳು -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ












Click it and Unblock the Notifications