ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಗೆಲುವು ಯಾರಿಗೆ, ಸಮೀಕ್ಷೆ ಅಂಕಿ ಅಂಶ ಬಹಿರಂಗ
ಭೋಪಾಲ್, ಅಕ್ಟೋಬರ್ 13: ಈ ಬಾರಿಯ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಈ ನಿಟ್ಟಿನಲ್ಲಿ ಲೋಕ್‌ಪೋಲ್ ಚುನಾವಣಾ ಸಮೀಕ್ಷೆಯನ್ನು ಮಾಡಿದ್ದು ಅದರ ಅಂಕಿ ಅಂಶಗಳ ಈಗ ಬಹಿರಂಗ ಮಾಡಿದೆ.
ಮಧ್ಯಪ್ರದೇಶದಲ್ಲಿ ಈಗ ಆಡಳಿತರೂಢ ಪಕ್ಷವಾಗಿ ಬಿಜೆಪಿ ಇದೆ, ಇದರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್. ಕರ್ನಾಟಕ ಮಾದರಿ ಮಧ್ಯಪ್ರದೇಶದಲ್ಲಿ ಆಢಳಿತ ವಿರೋಧಿ ಅಲೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಸರಳ ಬಹುಮತ ಬರಲಿದೆ ಎಂದು ಲೋಕ್‌ಪೋಲ್ ಚುನಾವಣಾ ಸಮೀಕ್ಷೆ ತಿಳಿಸಿದೆ.

ಲೋಕ್‌ಪೋಲ್ ಸಮೀಕ್ಷೆ ಪ್ರಕಾರ, ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 120ರಿಂದ 132 ಸ್ಥಾನಗಳು ಬರುತ್ತವೆ ಎಂದು ತಿಳಿಸಲಾಗಿದೆ. ಇದೇ ಶೇಕಡವಾರು ಮತಗಳ ಪ್ರಮಾಣ 44ರಿಂದ 46 ರಷ್ಟು ಎಂದು ಸಮೀಕ್ಷೆ ತಿಳಿಸಿದೆ. ಇದೇ ಬಿಜೆಪಿಯು 98ರಿಂದ 110 ಕ್ಷೇತ್ರಗಳಲ್ಲಿ ಗೆಲವು ಸಾಧಿಸಲಿದೆ ಎಂದು ತಿಳಿಸಲಾಗಿದೆ. ಇದೇ ಮತ ಪ್ರಮಾಣ ಬಿಜೆಪಿಗೆ ಶೇಕಡ 43 ರಿಂದ 45 ರಷ್ಟು ಮತಗಳು ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಇದಲ್ಲದೆ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇತರರು 0 ಯಿಂದ 4 ಸ್ಥಾನಗಳಲ್ಲಿ ಗೆಲ್ಲಬಹುದು. ಇದೇ ಶೇಕಡವಾರು ಮತ ಪ್ರಮಾಣವು 6ರಿಂದ 8 ರಷ್ಟು ಬರುತ್ತದೆ. ಇನ್ನು ಮಾಯಾವತಿಯವರ ಬಹುಜನ ಸಮಾಜ ಪಕ್ಷವು 0ಯಿಂದ 2 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಇದರ ಶೇಕಡವಾರು ಮತ ಪ್ರಮಾಣವು 2ರಿಂದ 4ರಷ್ಟು ಎಂದು ಸಮೀಕ್ಷೆ ತಿಳಿಸಿದೆ.
ಲೋಕ್‌ಪೋಲ್ ಈ ಚುನಾವಣಾ ಸಮೀಕ್ಷೆಗೆ ಬರೋಬ್ಬರಿ 1,70,000 ಜನರ ಅಭಿಪ್ರಾಯಗಳನ್ನು ಪಡೆದಿರುವುದಾಗಿ ತಿಳಿಸಿದೆ. ಸೆಪ್ಟೆಂಬರ್ 1ರಿಂದ 8 ರವರೆಗೆ ನಡೆಸಿದ ಈ ಸಮೀಕ್ಷೆಯಲ್ಲಿ 230 ಕ್ಷೇತ್ರಗಳಿಂದ 1,70,000 ಜನರ ಸಮೀಕ್ಷಾ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಸಮೀಕ್ಷಾ ಮಾದರಿಗಳನ್ನು ರಾಜ್ಯದ ವಿಭಿನ್ನ 50 ಬೂತ್‌ಗಳಲ್ಲಿ ಪಡೆಯಲಾಗಿದೆ ಪಡೆದು ಈ ಅಂಕಿಅಂಶ ಬಿಡುಗಡೆ ಮಾಡಿರುವುದಾಗಿ ಸಂಸ್ಥೆ ತಿಳಿಸಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಇತ್ತೀಚೆಗೆ ದಿನಾಂಕಗಳನ್ನು ನಿಗದಿ ಮಾಡಿದೆ. ಒಟ್ಟು 230 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಮಧ್ಯಪ್ರದೇಶ ರಾಜ್ಯಕ್ಕೆ ನವೆಂಬರ್ 17ಕ್ಕೆ ಮತದಾನ ನಡೆಯಲಿದೆ. ಡಿಸೆಂಬರ್ 3 ರಂದು ಈ ಎಲ್ಲ ರಾಜ್ಯಗಳ ಚುನಾವಣಾ ಫಲಿತಾಂಶಗಳು ಹೊರಬೀಳಲಿವೆ. ಲೋಕಸಭಾ ಚುನಾವಣೆಗೆ ಸೆಮಿ ಫೈನಲ್ಸ್ ಎಂದೇ ಬಿಂಬಿತವಾಗಿರುವ 5 ರಾಜ್ಯಗಳ ಚುನಾವಣೆಗೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ. ಈ ಬಾರಿ ಕಾಂಗ್ರೆಸ್ ಹೊಸ ಉತ್ಸಾಹದೊಂದಿಗೆ ಎಲ್ಲ ಐದು ರಾಜ್ಯಗಳನ್ನು ಅಧಿಕಾರ ಪಡೆಯುವ ಉಮೇದಿನಲ್ಲಿದೆ.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ 57 ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ಬುದ್ನಿಯಿಂದ ಮತ್ತೊಮ್ಮೆ ಸ್ಪರ್ಧಿಸಲಿದ್ದಾರೆ. ಆಡಳಿತ ವಿರೋಧಿ ಅಲೆ ಇರುವುದರಿಂದ ಪಕ್ಷ ಅವರಿಗೆ ಟಿಕೆಟ್ ಕೊಡಲೊ ಬೇಡವೂ ಎಂಬಂತೆ ಕೊನೆಗೂ 4ನೇ ಪಟ್ಟಿಯಲ್ಲಿ ಟಿಕೆಟ್ ನೀಡಿದೆ.
57 ಅಭ್ಯರ್ಥಿಗಳ ಪಟ್ಟಿಯಲ್ಲಿ ನರೋತ್ತಮ್ ಮಿಶ್ರಾ, ಗೋವಿಂದ್ ಸಿಂಗ್ ರಜಪೂತ್, ಗೋಪಾಲ್ ಭಾರ್ಗವ, ರಾಜೇಂದ್ರ ಶುಕ್ಲಾ ಮತ್ತು ಓಂಪ್ರಕಾಶ್ ಸಖಲೇಚಾ ಸೇರಿದಂತೆ ಕೆಲವು ಪ್ರಮುಖ ಹೆಸರುಗಳಿವೆ. ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣಾ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದ ದಿನವೇ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.












Click it and Unblock the Notifications