ಮಾನವೀಯತೆಯ ಉಸಿರು ಹೃದಯ ತಾಗಲೆಂಬ ಹಂಬಲದಲಿ...

Posted By:
Subscribe to Oneindia Kannada

ಇತ್ತ ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಉಗ್ರರ ದಾಳಿಗೆ ಸಿಕ್ಕವರ ಆಕ್ರಂದನ ಕೇಳುತ್ತಿದೆ. ಅತ್ತ ಇರಾಕ್ ನ ಮೊಸುಲ್ ನಲ್ಲಿ ಐಎಸ್ ಉಗ್ರಗಾಮಿಗಳ ಹೆಣ ಕೆಡವಲಾಗುತ್ತಿದೆ. ಒಟ್ಟಿನಲ್ಲಿ ಭೂಮಿ ಮೇಲೆಲ್ಲ ರಕ್ತ ಕೆಂಪು. ಅದರೆ ಇರಾಕ್ ಸ್ಥಿತಿ ಅದರಲ್ಲೂ ಹೆಣ್ಣುಮಕ್ಕಳ ನೋವು ಮನುಷ್ಯ ಮಾತ್ರರಿಂದ ಸಹಿಸುವುದಕ್ಕಿರಲಿ ನೋಡುವುದು ಅಸಾಧ್ಯ

ಅಮೆರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಎಂಬ ಮನುಷ್ಯನಿಗೆ ಹೇಗೆ ಸುದ್ದಿಯಲ್ಲಿರಬೇಕು ಎಂಬುದು ಗೊತ್ತಿರುವಂತಿದೆ. ರಾಷ್ಟ್ರಾಧ್ಯಕ್ಷರ ಚುನಾವಣೆಯ ಅಂತಿಮ ಹಂತ ಅಣತಿ ದೂರದಲ್ಲೇ ಇದೆ. ಅದಕ್ಕೆ ಬೇಕಾದ ತಯಾರಿ ಜೋರೋ ಜೋರು. ಈ ಮಧ್ಯೆ ಅಲ್ಲಿನ ಲೇಖಕ ಪಾಲ್ ಬೆಟ್ಟಿಗೆ ಮ್ಯಾನ್ ಬೂಕರ್ ಗೌರವ ಲಭಿಸಿದೆ.[ಪುಟ್ಟ ಕಂಗಳ ಬಾಲೆ, ತಲೆ ಬಾಗಿದ ಪ್ರಧಾನಿ, ಕಣ್ಣೀರು ಜಾರಿ....]

ಪಂಜಾಬಿನ ಅಮೃತ್ ಸರವನ್ನು ಚೆಂದಗಾಣಿಸುವ ಯೋಜನೆ ಮಾನವೀಯತೆಗೆ ಅರ್ಪಿಸಲಾಗಿದೆ. ರಕ್ತವನ್ನು ಇನ್ನು ನೋಡಲಾರೆ ಎಂದು ಕಣ್ಣು ಶಾಂತ ಸಮುದ್ರ ಮಾಡಿಕೊಂಡು ನಿಂತಂತಿರುವ ಸುಂದರಿ ಅಮೃತ್ ಸರ. ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ನ್ಯೂಜಿಲ್ಯಾಂಡ್ ನ ಪ್ರಧಾನಮಂತ್ರಿಯನ್ನು ಸ್ವಾಗತಿಸಲು ತೆರಳಿದ ಚಿತ್ರ..ಓಹ್ ಇವತ್ತಿಗೆ ಇಷ್ಟು ಸಾಕು.

ಡೊನಾಲ್ಡ್ ಟ್ರಂಪ್

ಡೊನಾಲ್ಡ್ ಟ್ರಂಪ್

ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಿರ್ಣಾಯಕ ಹಂತದತ್ತ ಸಾಗುತ್ತಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮಂಗಳವಾರ ಸ್ಯಾನ್ ಫೋರ್ಡ್ ನ ಒರ್ಲಾಂಡೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಬಲಿಗರತ್ತ ಕೈ ಬೀಸಿದ ಕ್ಷಣ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಹೀಗೆ.

ಹೊರ ಜಗತ್ತು

ಹೊರ ಜಗತ್ತು

ನ್ಯೂಜಿಲ್ಯಾಂಡ್ ನ ಪ್ರಧಾನಮಂತ್ರಿ ಜಾನ್ ಕೀ ಅವರನ್ನು ಸ್ವಾಗತಿಸಲು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೋಣೆಯಿಂದ ಹೊರಬಂದಾಗ ಕಂಡ ಚಿತ್ರ ಇದು.

ಮಾನವೀಯತೆ ಉಸಿರಾಟ

ಮಾನವೀಯತೆ ಉಸಿರಾಟ

ಅಮೃತ್ ಸರವನ್ನು ಸುಂದರವಾಗಿಸುವ ಯೋಜನೆಯನ್ನು ಮಂಗಳವಾರ ಮಾನವೀಯತೆಗೆ ಅರ್ಪಿಸಲಾಗಿದೆ. ಹಲವಾರು ರಕ್ತಪಾತ ಕಂಡ ಪಂಜಾಬಿನ ಮಣ್ಣಿನಲ್ಲಿ ಮಾನವೀಯತೆಯ ಉಸಿರಾಟ ಕೇಳುತ್ತಿದೆ. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್, ಉಪಮುಖ್ಯಮಂತ್ರಿ ಸುಖ್ ಬೀರ್ ಸಿಂಗ್ ಬಾದಲ್ ಮತ್ತಿತರರು ಅಮೃತಸರ್ ನ ಬೀದಿಯಲ್ಲಿ ಒಟ್ಟಾಗಿ ಸಾಗಿದರು.

ಮ್ಯಾನ್ ಬೂಕರ್

ಮ್ಯಾನ್ ಬೂಕರ್

ಅಮೆರಿಕಾದ ಪಾಲ್ ಬೆಟ್ಟಿ (ಎಡ ಭಾಗದಲ್ಲಿರುವವರು) ಅವರ 'ದಿ ಸೆಲ್ ಔಟ್' ಕಾದಂಬರಿಗೆ ಮ್ಯಾನ್ ಬೂಕರ್ ಗೌರವ ಲಭಿಸಿದೆ. ಈ ಗೌರವ ಪಡೆಯುತ್ತಿರುವ ಮೊದಲ ಅಮೆರಿಕನ್ ಇವರು. ಜತೆಗಿರುವವರು ಕಾರ್ನ್ ವಾಲ್ ನ ರಾಣಿ ಕೆಮಿಲಾ. ಫೋಟೋ ತೆಗೆದದ್ದು ಲಂಡನ್ ನ ಗಿಲ್ಡ್ ಹಾಲ್ ನಲ್ಲಿ.

ಆಕ್ರೋಶಾಗ್ನಿ ಕೊತ ಕೊತ

ಆಕ್ರೋಶಾಗ್ನಿ ಕೊತ ಕೊತ

ಇಲ್ಲಿ ಹೊತ್ತಿ ಉರಿಯುತ್ತಿರುವ ಬಸ್ ನ ಚಿತ್ರ ದಕ್ಷಿಣ ಆಫ್ರಿಕಾ, ಜೊಹಾನ್ಸ್ ಬರ್ಗ್ ನ ಬ್ರಾಮ್ ಫಾಂಟೇನ್ ನಲ್ಲಿಯದು. ಪ್ರತಿಭಟನಾನಿರತರು ಪೊಲೀಸರ ವಾಹನಕ್ಕೆ ಬೆಂಕಿ ಇಟ್ಟಿದ್ದಾರೆ. ಉಚಿತವಾಗಿ ಶಿಕ್ಷಣ ದೊರೆಯುವಂತಾಗಬೇಕು ಎಂಬುದು ಅಲ್ಲಿನ ವಿದ್ಯಾರ್ಥಿಗಳ ಆಗ್ರಹ. ಅದು ಆಕ್ರೋಶಕ್ಕೆ ತಿರುಗಿದಾಗ ಹೊತ್ತಿದ ಬೆಂಕಿಯನ್ನೇ ಆರಿಸಲು ಸಿದ್ಧವಾಗಿರುವ ಅಗ್ನಿಶಾಮಕದಳದ ಸಿಬ್ಬಂದಿ.

ಮನೆ ಬಿಟ್ಟು ಹೊರಟ ಮಹಿಳೆಯರು

ಮನೆ ಬಿಟ್ಟು ಹೊರಟ ಮಹಿಳೆಯರು

ಟೊಬ್ ಜಾವಾ, ಮೊಸುಲ್ ಗೆ ಒಂಬತ್ತು ಕಿ.ಮೀ. ದೂರದಲ್ಲಿರುವ ಇರಾಕಿನ ಒಂದು ಹಳ್ಳಿ. ಇರಾಕಿನಲ್ಲಿ ಐಎಸ್ ಉಗ್ರರನ್ನು ಬಗ್ಗು ಬಡಿಯುವ ಕಾರ್ಯಾಚರಣೆ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಅಲ್ಲಿನ ಮಹಿಳೆಯರು, ಮಕ್ಕಳು ಅವರ ಮನೆಗಳನ್ನು ಬಿಟ್ಟು ತೆರಳುತ್ತಿದ್ದಾರೆ.

ಈಗ ಹೇಗಿದಿರಪ್ಪಾ?

ಈಗ ಹೇಗಿದಿರಪ್ಪಾ?

ಪಾಕಿಸ್ತಾನದ ಕ್ವೆಟ್ಟಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಸೋಮವಾರ ಭಯೋತ್ಪಾದಕರ ದಾಳಿಯಲ್ಲಿ ಗಾಯಗಳಾದವರು. ಅವರಿಗೆ ಸಾಂತ್ವನ ಹೇಳುವುದಕ್ಕೆ, ಆರೋಗ್ಯ ವಿಚಾರಿಸುವುದಕ್ಕೆ ಪ್ರಧಾನಿ ನವಾಕ್ ಷರೀಫ್ ಹೋಗಿದ್ದಾರೆ. ಜತೆಗೆ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಇತರರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Various events presented through photos, it is a different attempt of news presentation from wide range of category.
Please Wait while comments are loading...