ಯುವಪೀಳಿಗೆಯ ನಾಡಿಮಿಡಿತ ಅರಿತಿರುವ ಸೊನಾಟಾ
ಯಾರು ತಮ್ಮ ಕನಸಿನ ಬೆನ್ನಟ್ಟಿ ಹೊರಡುತ್ತಾರೋ ಹಾಗೂ ದಿಟ್ಟ ಆಯ್ಕೆಯನ್ನು ಮಾಡುವ ಧೈರ್ಯವನ್ನು ತೋರಿಸುತ್ತಾರೋ ಅಂಥವರಿಗೆ ಅಂದುಕೊಂಡಂತೆ ಭವಿಷ್ಯ ಇರುತ್ತದೆ.
ಸುಶಾಂತ್ ಸಿಂಗ್ ಪಾಲ್ಗೊಂಡಿರುವ ಪ್ರಗತಿಪರವಾದ ಅಭಿಯಾನ "ಖುದ್ ಪರ್ ಯಕೀನ್" (ನಿಮ್ಮ ಮೇಲೆ ಭರವಸೆ ಇಡಿ) ಸೊನಾಟ ನಡೆಸುತ್ತಿದೆ. ಈಗಿನ ಪೀಳಿಗೆಯು ಪ್ರಗತಿಪರ ಹಾಗೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿರುವುದನ್ನು ಪ್ರಸ್ತುತಪಡಿಸುವುದು ಬ್ರ್ಯಾಂಡ್ ನ ಉದ್ದೇಶವಾಗಿದೆ.
ಅಂದಹಾಗೆ, ಈ ಚಿತ್ರದ ಸೆಟ್ ಅನ್ನು ಕ್ಯಾಂಪಸ್ ರಿಕ್ರೂಟ್ ಮೆಂಟ್ ದಿನದ ಹಿನ್ನೆಲೆಯಲ್ಲಿ ರೂಪಿಸಲಾಗಿತ್ತು. ಸುಶಾಂತ್ ಮತ್ತು ಸ್ನೇಹಿತರಿರುವ ದೃಶ್ಯದಿಂದ ಚಿತ್ರ ಆರಂಭವಾಗುತ್ತದೆ. ಇಬ್ಬರೂ ಸಂದರ್ಶನದ ಆಲೋಚನೆಯಲ್ಲಿದ್ದರೂ ಪರಸ್ಪರರನ್ನು ಶುಭ ಹಾರೈಸಿಕೊಳ್ಳುತ್ತಾರೆ.

ಸುಶಾಂತ್ ಹೆಲ್ಪ್ ಡೆಸ್ಕ್ ಬಳಿ ಸಾಗುತ್ತಾರೆ. ಚಿತ್ರದ ತಿರುವು ಕಾಣಿಸಿಕೊಳ್ಳುತ್ತದೆ. ಎರಡು ದಿನದ ಹಿಂದಷ್ಟೇ ಆರಂಭಿಸಿದ ಸ್ಟಾರ್ಟ್ ಅಪ್ ಗಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವ ಬಗ್ಗೆ ಸುಶಾಂತ್ ಗಮನ ಸೆಳೆಯುತ್ತಾರೆ. ಆ ನಂತರ ತನ್ನ ಕನಸಿನ ಬೆನ್ನಟ್ಟಿ ಯುವ ಉದ್ಯಮಿಯೊಬ್ಬ ತೆಗೆದುಕೊಂಡ ದಿಟ್ಟ ನಿರ್ಧಾರದ ಬಗ್ಗೆ ಸ್ಫೂರ್ತಿಯುತವಾದ ಮಾತುಗಳಿವೆ.
ಹೊಸ ಕಲೆಕ್ಷನ್ NXT II ಅನ್ನು ಅಭಿಯಾನದ ಭಾಗವಾಗಿ ಪ್ರದರ್ಶಿಸಲಾಗಿದೆ. ಈ ಕಲೆಕ್ಷನ್ ನಲ್ಲಿ ಗಡಿಯಾರಗಳು ತುಂಬ ವಿಶಿಷ್ಟವಾದ ವಿನ್ಯಾಸದಿಂದ ಕೂಡಿದ್ದು, ವಿಭಿನ್ನವಾದ ಡಯಲ್ ಹಾಗೂ ಸ್ಟೈಲ್ ಆಗಿರುವ ಮುದ್ರಣಗಳಿವೆ. ಇದಕ್ಕೆ ಪೂರಕವಾಗಿ ಲೋಹ ಹಾಗೂ ಚರ್ಮದ ಸ್ಟ್ರಾಪ್ಸ್ ಕೂಡ ಇವೆ.
ಯಾವುದೇ ಸಂದರ್ಭಕ್ಕೂ ಹೊಂದಬಹುದಾದ ವಾಚ್ ಗಳು ಇದಾಗಿವೆ. NXT II ವಾಚ್ ಗಳು ಕ್ಯಾಷುವಲ್ ದಿರಿಸಿನ ಜತೆಗೆ, ವಿವಿಧ ಸಂದರ್ಭಗಳಿಗೆ ಚೆನ್ನಾಗಿ ಒಪ್ಪುತ್ತವೆ. ಮತ್ತು ಕೈಗೆಟುಕುವ ದರವಾದ 1199ರಿಂದ 1599 ರುಪಾಯಿಯಲ್ಲಿ ಖರೀದಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ













Click it and Unblock the Notifications