Get Updates
Get notified of breaking news, exclusive insights, and must-see stories!

ಐದು ರಾಜ್ಯಗಳ ಅಸೆಂಬ್ಲಿ ಚುನಾವಣೆ ದಿನಾಂಕ ಘೋಷಣೆ

ನವದೆಹಲಿ, ಮಾರ್ಚ್ 04: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಪ್ರಕಟಿಸಿದೆ. 2016ರಲ್ಲಿ ತಮಿಳುನಾಡು, ಕೇರಳ, ಅಸ್ಸಾಂ, ಪುದುಚೇರಿ, ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯಲಿದೆ.

ಚುನಾವಣೆ ಎದುರಿಸಲಿರುವ ಐದು ರಾಜ್ಯಗಳಲ್ಲಿ ಮಾರ್ಚ್ 04ರಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಕೇಂದ್ರ ಮುಖ್ಯ ಚುನಾವಣಾಧಿಕಾರಿ ನಸೀಮ್ ಜೈದಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.

* ಐದು ರಾಜ್ಯಗಳಲ್ಲಿ ಸುಮಾರು 824 ಅಸೆಂಬ್ಲಿ ಕ್ಷೇತ್ರಗಳಿಂದ 17 ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಲಿದ್ದಾರೆ.

* ಎಲ್ಲಾ ಐದು ರಾಜ್ಯಗಳಲ್ಲೂ ಮತಯಂತ್ರದಲ್ಲಿ NOTA (ನೋಟಾ) ಬಟನ್/ಚಿನ್ಹೆ ಇರುತ್ತದೆ.

* ಅಭ್ಯರ್ಥಿಗಳ ಆಯ್ಕೆ ಸುಲಭಗೊಳಿಸಲು ಒಂದೇ ಚಿನ್ಹೆ, ಹೆಸರು ಗೊಂದಲ ನಿವಾರಣೆಗಾಗಿ ಅಭ್ಯರ್ಥಿಗಳ ಭಾವಚಿತ್ರವನ್ನು ಮತಯಂತ್ರದಲ್ಲಿ ಮುದ್ರಿಸಲಾಗುತ್ತದೆ.

West Bengal, Tamil Nadu, Assam, Kerala, Puducherry Poll date announced

ವೇಳಾಪಟ್ಟಿ: ಅಸ್ಸಾಂ: ಎರಡು ಹಂತಗಳಲ್ಲಿ ಚುನಾವಣೆ, 126 ಕ್ಷೇತ್ರಗಳು

* ಮೊದಲ ಹಂತ: ಏಪ್ರಿಲ್ 04 (ಸೋಮವಾರ), 65 ಕ್ಷೇತ್ರಗಳು

* ಎರಡನೇ ಹಂತ: ಏಪ್ರಿಲ್ 11 (ಸೋಮವಾರ), 61 ಕ್ಷೇತ್ರಗಳು


ಪಶ್ಚಿಮ ಬಂಗಾಲ: ಆರು ಹಂತಗಳಲ್ಲಿ ಚುನಾವಣೆ,

* ಮೊದಲ ಹಂತ: ಏಪ್ರಿಲ್ 04 (ಸೋಮವಾರ), 18 ಕ್ಷೇತ್ರಗಳು
* ಏಪ್ರಿಲ್ 11 (ಸೋಮವಾರ), 31 ಕ್ಷೇತ್ರಗಳು

* ಎರಡನೇ ಹಂತ: ಏಪ್ರಿಲ್ 17 (ಭಾನುವಾರ), 56 ಕ್ಷೇತ್ರಗಳು

* ಮೂರನೇ ಹಂತ: ಏಪ್ರಿಲ್ 21 (ಗುರುವಾರ), 6೨ ಕ್ಷೇತ್ರಗಳು

* ನಾಲ್ಕನೇ ಹಂತ: ಏಪ್ರಿಲ್ 25 (ಸೋಮವಾರ), 41 ಕ್ಷೇತ್ರಗಳು

* ಐದನೇ ಹಂತ: ಏಪ್ರಿಲ್ 30 (ಶನಿವಾರ), 53 ಕ್ಷೇತ್ರಗಳು

* ಆರನೇ ಹಂತ: ಮೇ 05 (ಗುರುವಾರ), 25 ಕ್ಷೇತ್ರಗಳು


ಕೇರಳ (140 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16 ಸೋಮವಾರ ಮತದಾನ.


ತಮಿಳುನಾಡು (234 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.


ಪುದುಚೇರಿ (30 ಕ್ಷೇತ್ರಗಳು)
* ಏಪ್ರಿಲ್ 22ರಿಂದ ಚುನಾವಣೆ ಪ್ರಕ್ರಿಯೆ ಆರಂಭ.
* ಮೇ 16, ಸೋಮವಾರದಂದು ಮತದಾನ.



ಒಟ್ಟು ಮತದಾರರು

* ಅಸ್ಸಾಮ್: 1.98 ಕೋಟಿ
* ಕೇರಳ : 2.56 ಕೋಟಿ
* ತಮಿಳುನಾಡು : 5.8 ಕೋಟಿ
* ಪಶ್ಚಿಮ ಬೆಂಗಾಲ: 6.55 ಕೋಟಿ
* ಪುದುಚೇರಿ: 9.27 ಲಕ್ಷ


ಮತ ಕೇಂದ್ರ
* ಅಸ್ಸಾಮ್: 25,000
* ಕೇರಳ : 21,498
* ತಮಿಳುನಾಡು : 65,616
* ಪಶ್ಚಿಮ ಬೆಂಗಾಲ: 71,247
* ಪುದುಚೇರಿ: 913

(ಒನ್ಇಂಡಿಯಾ ಕನ್ನಡ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+