ಅವಾರ್ಡ್ ವಾಪಸಿ ಮಾಡಿದರೂ ನಾವೇ ಗೆಲ್ಲೋದು: ಅಮಿತ್ ಶಾ

ಜೈಪುರ, ಸೆಪ್ಟೆಂಬರ್ 11: ರಾಜಸ್ಥಾನದಲ್ಲಿ ಮುಂಬರುವ ಚುನಾವಣೆಯಲ್ಲಿ ಪಕ್ಷ ಜಯಭೇರಿ ಬಾರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಚುನಾವಣೆ ಬಂದಾಗಲೆಲ್ಲ ಅಖ್ಲಾಕ್‌ ಹತ್ಯೆ, ಅವಾರ್ಡ್ ವಾಪಸಿಯ ವಿವಾದಗಳನ್ನು ಎಬ್ಬಿಸುತ್ತಾರೆ. ಆದರೆ, ಆಗಲೂ ನಾವು ಗೆದ್ದಿದ್ದೆವು, ಮುಂದೆಯೂ ಗೆಲ್ಲುತ್ತೇವೆ ಎಂದು ಜೈಪುರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು.

2015ರ ಸೆಪ್ಟೆಂಬರ್‌ನಲ್ಲಿ ದಾದ್ರಿ ಗ್ರಾಮದಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಸಂಶಯದಲ್ಲಿ ಮೊಹಮ್ಮದ್ ಅಖ್ಲಾಕ್‌ ಎಂಬಾತನ ಮೇಲೆ ಗೋರಕ್ಷಕರ ಗುಂಪು ದಾಳಿ ನಡೆಸಿ ಹತ್ಯೆ ಮಾಡಿತ್ತು. ಇದು ದೇಶದಾದ್ಯಂತ ತೀವ್ರ ಚರ್ಚೆಗೆ ಒಳಗಾಗಿತ್ತು.

we will win despite award wapsi, dadri mob killing: amit shah

ಇದರ ಬಳಿಕ ರಾಜಸ್ಥಾನದಲ್ಲಿ ಸರಣಿ ದಾಳಿ ಪ್ರಕರಣಗಳು ವರದಿಯಾಗಿದ್ದವು. ಈ ಘಟನೆಗಳ ಬಳಿಕ ವಸುಂಧರಾ ರಾಜೇ ಸರ್ಕಾರ ವಿರೋಧಪಕ್ಷಗಳ ಟೀಕೆಗೆ ಗುರಿಯಾಗಿತ್ತು.

ಈ ಆರೋಪಗಳ ನಡುವೆಯೂ ಬಿಜೆಪಿ ಉತ್ತರ ಪ್ರದೇಶದಲ್ಲಿ ಗೆಲುವು ಸಾಧಿಸಿತ್ತು ಎಂಬುದನ್ನು ಉಲ್ಲೇಖಿಸಿದ ಅಮಿತ್ ಶಾ, ನಾವು ಆಗಲೂ ಗೆದ್ದಿದ್ದೆವು, ಮುಂದೆಯೂ ಗೆಲ್ಲುತ್ತೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+