ವಿಧಿಯೇ ಇಲ್ಲ, ಮಹಾಮಾರಿ ಕೊರೊನಾದೊಂದಿಗೆ ನಾವು ಬದುಕಲೇಬೇಕಂತೆ..!

ಬೆಂಗಳೂರು, ಮಾರ್ಚ್ 27: ಚೀನಾದಲ್ಲಿ ಹುಟ್ಟಿ ಇದೀಗ ಇಡೀ ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ ಮಾರಕ ಕೊರೊನಾ ವೈರಸ್ (ಕೋವಿಡ್ 19).

ಚೀನಾ, ಅಮೆರಿಕ ಸೇರಿದಂತೆ ಯುರೋಪ್‌ನಲ್ಲಿ ಮುಂದುವರೆದ ಅನೇಕ ರಾಷ್ಟ್ರಗಳು ಕೊರೊನಾ ವೈರಸ್‌ಗೆ ಮದ್ದು ಅರಿಯಲು ಹೆಣಗಾಡುತ್ತಿವೆ. ಇತ್ತ, ಕೊರೊನಾ ಮಾತ್ರ ತನ್ನ ವರ್ಲ್ಡ್ ಟ್ರಿಪ್‌ನ್ನು ಎಂಜಾಯ್ ಮಾಡುತ್ತಿದೆ. ಇದುವರೆಗೆ 25 ಸಾವಿರಕ್ಕೂ ಹೆಚ್ಚು ಜನರನ್ನು ಅಪೋಶನ ತೆಗೆದುಕೊಂಡಿದೆ. ಹೀಗಾಗಿ ಕೊರೊನಾ ಅಟ್ಟಹಾಸಕ್ಕೆ ಅಂಕುಶ ಇಲ್ಲವಾ? ಎಂದು ಪ್ರತಿಯೊಬ್ಬರು ಕೇಳುತ್ತಿದ್ದಾರೆ.

ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ರಾಯಬಾರಿಯೊಬ್ಬರು ನೀಡಿರುವ ಉತ್ತರ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಇಂಡಿಯಾ ಟುಡೇಗೆ ಸಂದರ್ಶನ ನೀಡಿರುವ ಕೊರೊನಾ ವೈರಸ್‌ ಮೇಲಿನ ವಿಶ್ವ ಆರೋಗ್ಯ ಸಂಸ್ಥೆಯ ಉನ್ನತಾಧಿಕಾರಿ ಡೇವಿಡ್ ನಬರೋ ಅವರು, 'ನಮಗೆ ವಿಧಿಯೇ ಇಲ್ಲದಾಗಿದೆ. ನೋವೆಲ್ ಕೊರೊನಾ ವೈರಸ್‌ನೊಂದಿಗೆ ನಾವು ಬದುಕುವುದನ್ನು ಕಲಿಯಲೇಬೇಕಿದೆ' ಎಂದು ಕೈ ಚೆಲ್ಲಿದ್ದಾರೆ. ಸಂದರ್ಶನದ ಪ್ರಮುಖಾಂಶಗಳಿಗೆ ಮುಂದೆ ಓದಿ...

ಕರೊನಾದೊಂದಿಗೆ ಬದುಕಲು ಜಗತ್ತು ಕಲಿಯಬೇಕಾಗುತ್ತದೆ

ಕರೊನಾದೊಂದಿಗೆ ಬದುಕಲು ಜಗತ್ತು ಕಲಿಯಬೇಕಾಗುತ್ತದೆ

'ಕರೊನಾದೊಂದಿಗೆ ಬದುಕಲು ಜಗತ್ತು ಕಲಿಯಬೇಕಾಗುತ್ತದೆ ಎಂದು ನಾನು ನಂಬುತ್ತೇನೆ. ಇದರರ್ಥ ನಾವು ಇತರ ಸಾಂಕ್ರಾಮಿಕ ಕಾಯಿಲೆಗಳೊಂದಿಗೆ ಇರುವಂತೆ ಎಲ್ಲೆಡೆ ನಿರಂತರ ರಕ್ಷಣೆಯಲ್ಲಿರಬೇಕು. ನಂತರ, ಈ ದೈತ್ಯ ಕೊರೊನಾವನ್ನು ನೀವು ತಪ್ಪಿಸಬಹುದು. ಇಡೀ ಜಗತ್ತು, ಎಚ್ಚರಿಕೆಯಿಂದ ಕೊರೊನಾವನ್ನು ನೋಡುತ್ತಿದೆ. ಈ ಹಂತದಲ್ಲಿ, ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಬಗ್ಗೆ ಮಾತನಾಡಬಹುದೆಂದು ನಾನು ಭಾವಿಸುವುದಿಲ್ಲ. ಇದು ಎಲ್ಲರಿಗೂ ಹೊಸ ವಾಸ್ತವವಾಗಲಿದೆ "ಎಂದು ಡೇವಿಡ್ ನಬರೋ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂಪೂರ್ಣ ಲಾಕ್‌ಡೌನ್ ಬೇಕು

ಸಂಪೂರ್ಣ ಲಾಕ್‌ಡೌನ್ ಬೇಕು

ಕೊರೊನಾ ಸೋಂಕು ಹರಡಲು ಸಂಪೂರ್ಣ ಲಾಕ್‌ಡೌನ್ ಸಹಾಯವಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, "ಈ ಸಾಂಕ್ರಾಮಿಕ ರೋಗವು ಬಹಳ ವೇಗವಾಗಿ ವಿಸ್ತರಿಸುತ್ತಿದೆ. ಇದು ಗಾತ್ರದಲ್ಲಿ ದ್ವಿಗುಣಗೊಳ್ಳುತ್ತದೆ ಎಂದು ತೋರುತ್ತದೆ. ಆದ್ದರಿಂದ ಅದರ ತೀವ್ರತೆಯನ್ನು ಕಡಿಮೆ ಮಾಡಲು ಎಲ್ಲಾ ರಾಷ್ಟ್ರಗಳ ಅತ್ಯಂತ ಶ್ರಮದ ಕೆಲಸ ಬೇಕಿದೆ. ಸೋಂಕು ಹರಡುವುದನ್ನು ತಡೆಯುವುದು ಅತ್ಯಂತ ಮುಖ್ಯವಾದ ಹಂತವಾಗಿದೆ. ಹೀಗಾಗಿ ಲಾಕ್‌ಡೌನ್ ಎಂಬುದು ಕೊರೊನಾ ತಡೆಗಟ್ಟಲು ಅತ್ಯಂತ ಪರಿಣಾಮಕಾರಿಯಾದ ಅಸ್ತ್ರವಾಗಿದೆ'' ಎಂದಿದ್ದಾರೆ.

ಭಾರತದ ಬಗ್ಗೆ ಆತಂಕವಿದೆ

ಭಾರತದ ಬಗ್ಗೆ ಆತಂಕವಿದೆ

''ಜನಸಂಖ್ಯೆಯ ಗಾತ್ರವನ್ನು ಗಮನಿಸಿದರೆ ಭಾರತದಲ್ಲಿ ಕರೋನವೈರಸ್ ಏಕಾಏಕಿ ಉಲ್ಬಣಗೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಈ ವಿಚಾರದಲ್ಲಿ ಭಾರತದ ಬಗ್ಗೆ ನನಗೆ ಆತಂಕವಿದೆ. ಜನಸಂಖ್ಯೆಯ ಗಾತ್ರ ಮತ್ತು ಭಾರತ ಕಡಿಮೆ ಅಭಿವೃದ್ಧಿ ಹೊಂದಿದ ಸಾರ್ವಜನಿಕ ಆರೋಗ್ಯ ಸೇವೆಯನ್ನು ಹೊಂದಿರುವುದನ್ನು ನೋಡಿದರೆ ಸೋಂಕು ಹೆಚ್ಚು ಹರಡಬಹುದಾಗಿದೆ. ಪ್ರತಿಯೊಬ್ಬ ನಾಗರಿಕನ ಪ್ರಯತ್ನಗಳು ಈಗ ಇಲ್ಲಿ ನಿರ್ಣಾಯಕವಾಗಿದೆ'' ಎಂದು ಡೇವಿಡ್ ಹೇಳಿದ್ದಾರೆ.

ಐದು ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಐದು ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಜಗತ್ತಿನಲ್ಲಿ ಐದು ಲಕ್ಷಕ್ಕೂ ಅಧಿಕ ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. 25 ಸಾವಿರಕ್ಕೂ ಹೆಚ್ಚು ಜನ ಮರಣ ಹೊಂದಿದ್ದಾರೆ. ಇತ್ತ ಸೋಂಕಿತರ ಪ್ರಕರಣಗಳಲ್ಲಿ ಚೀನಾವನ್ನೇ ಮೀರಿಸಿದೇ ಅಮೆರಿಕ. ಭಾರತದಲ್ಲೂ ಕೂಡ 19 ಜನ ಮಾರಕ ಸೋಂಕಿಗೆ ಬಲಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+