ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈನಿಂದ ಪ್ರತಿದಿನ ಕೋಟಿ ಜನರಿಗೆ ಲಸಿಕೆ ಕೊಡಬಹುದು; ಐಸಿಎಂಆರ್

|
Google Oneindia Kannada News

ನವದೆಹಲಿ, ಜೂನ್ 01: ಜುಲೈ ಅಥವಾ ಆಗಸ್ಟ್‌ ವೇಳೆಗೆ ಪ್ರತಿದಿನ ಒಂದು ಕೋಟಿ ಜನರಿಗೆ ನೀಡಲು ಕೊರೊನಾ ಲಸಿಕೆಗಳು ದೇಶದಲ್ಲಿ ಲಭ್ಯವಿರಲಿವೆ ಎಂದು ಮಂಗಳವಾರ ಐಸಿಎಂಆರ್ ತಿಳಿಸಿದೆ.

ದೇಶದಲ್ಲಿ ಕೊರೊನಾ ಲಸಿಕೆಗೆ ಕೊರತೆ ಇಲ್ಲ ಎಂದು ಆರೋಗ್ಯ ಸಚಿವಾಲಯ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಐಸಿಎಂಆರ್ ಮುಖ್ಯಸ್ಥ ಬಲರಾಮ್ ಭಾರ್ಗವ ಹೇಳಿದ್ದಾರೆ.

ಕೊರೊನಾ ಲಸಿಕೆ ಮಿಶ್ರಣ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರಕೊರೊನಾ ಲಸಿಕೆ ಮಿಶ್ರಣ ಕುರಿತು ಸ್ಪಷ್ಟನೆ ನೀಡಿದ ಕೇಂದ್ರ ಸರ್ಕಾರ

"ಜುಲೈ ಮಧ್ಯದಲ್ಲಿ ಅಥವಾ ಆಗಸ್ಟ್ ಆರಂಭದಲ್ಲಿ ದಿನನಿತ್ಯ ಒಂದು ಕೋಟಿ ಜನರಿಗೆ ಲಸಿಕೆ ನೀಡುವುದು ಸಾಧ್ಯವಾಗಲಿದೆ. ಈ ಡಿಸೆಂಬರ್ ವೇಳೆಗೆ ಇಡೀ ದೇಶದ ಜನಸಂಖ್ಯೆಗೆ ಲಸಿಕೆ ನೀಡುತ್ತೇವೆ" ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

We Can Inoculate 1 Crore People Daily From July Says ICMR Chief

ಹಂತಹಂತವಾಗಿ ಲಾಕ್‌ಡೌನ್ ಸಡಿಲಿಸಲಾಗುತ್ತದೆ. ಲಸಿಕೆ ನೀಡುವುದನ್ನು ಆದ್ಯತೆಯಾಗಿಸಲಾಗಿದೆ. ಟೆಸ್ಟ್, ಟ್ರ್ಯಾಕ್, ಟ್ರೀಟ್ ಎನ್ನುವ ಮಂತ್ರದ ಜೊತೆ ಕೊರೊನಾ ನಿಯಮ ಪಾಲನೆ ಅತಿ ಮುಖ್ಯವಾಗಿದೆ. ಕೊರೊನಾ ನಿರ್ವಹಣೆಯಲ್ಲಿ ಲಸಿಕಾ ಅಭಿಯಾನ ನಮ್ಮ ಬಹುಮುಖ್ಯ ಕಾರ್ಯಸೂಚಿಯಾಗಿದೆ ಎಂದು ವಿವರಿಸಿದ್ದಾರೆ.

ಇದೇ ಸಂದರ್ಭ, ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ಎರಡು ಡೋಸ್‌ಗಳನ್ನು ನೀಡುವ ಅಂತರದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟನೆ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದೆ.

ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ವಾರಕ್ಕೆ ಶೇ 5ಕ್ಕಿಂತ ಕಡಿಮೆಯಾಗಬೇಕು. ಕೊರೊನಾ ಮಾರ್ಗಸೂಚಿಗಳನ್ನು ಜಾರಿಗೆ ತರಲು ಸಮುದಾಯದ ಪಾಲ್ಗೊಳ್ಳುವಿಕೆ ಇರಬೇಕು ಎಂದು ಹೇಳಿದೆ. 30 ರಾಜ್ಯಗಳಲ್ಲಿ ಕಳೆದ ವಾರದಿಂದ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ. 344 ಜಿಲ್ಲೆಗಳಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ಶೇ 5ಕ್ಕಿಂತ ಕಡಿಮೆ ಇದೆ ಎಂದು ತಿಳಿಸಿದೆ.

ಸದ್ಯಕ್ಕೆ ಜೂನ್‌ ತಿಂಗಳಿಗೆ ಕೊರೊನಾ ಲಸಿಕಾ ಅಭಿಯಾನಕ್ಕೆ ದೇಶದಲ್ಲಿ 120 ಮಿಲಿಯನ್ ಲಸಿಕೆಗಳು ಲಭ್ಯವಿರುವುದಾಗಿ ಭಾನುವಾರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿತ್ತು.

English summary
We can inoculate one crore people daily from july mid as we will have enough covid vaccines says ICMR chief,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X