Video: ಸರ್ವಧರ್ಮ ಪೂಜೆಯೊಂದಿಗೆ ರಫೇಲ್ ವಾಯುಪಡೆಗೆ ಸೇರ್ಪಡೆ

ನವದೆಹಲಿ, ಸೆ. 10: ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿಂದು ಫ್ರಾನ್ಸ್ ದೇಶದಿಂದ ಬಂದಿರುವ ಐದು ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯಪಡೆಗೆ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಸಮ್ಮುಖದಲ್ಲಿ ಸರ್ವಧರ್ಮ ಪೂಜೆ, ಪ್ರಾರ್ಥನೆಯೊಂದಿಗೆ ವಾಯುಪಡೆಯ 17ನೇ ಸ್ಕ್ವಾಡ್ರನ್ ಗೋಲ್ಡನ್ ಆರೋಸ್ ತಂಡಕ್ಕೆ ಸೇರಿಸಿಕೊಳ್ಳಲಾಯಿತು.

ಈ ಕಾರ್ಯಕ್ರಮದ ಬಳಿಕ ಸಚಿವ ರಾಜನಾಥ್ ಸಿಂಗ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲೆ ಸಭೆಯನ್ನು ನಡೆಸಿದ್ದಾರೆ. ಉಭಯ ದೇಶಗಳ ನಡುವಿನ ರಕ್ಷಣಾ ಇಲಾಖೆಗೆ ದ್ವಿಪಕ್ಷೀಯ ಸಂಬಂಧದ ಬಗ್ಗೆ ಚರ್ಚೆ ನಡೆಯಲಿದ್ದರೂ, ಹಿಂದೂ ಮಹಾಸಾಗರ, ಫೆಸಿಪಿಕ್ ಸಾಗರದಲ್ಲಿ ಶಾಂತಿ ಪರಿಸ್ಥಿತಿ ನೆಲೆಸಲು ಬೇಕಾದ ಸಹಕಾರದ ಬಗ್ಗೆ ಚರ್ಚೆ ನಡೆಯಲಿದೆ.

Watch: Rafale aircrafts formal inducted into Indian Air Force in Ambala

ಭಾರತ ಮತ್ತು ಫ್ರಾನ್ಸ್ ನಡುವೆ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ವಿವಾದದ ನಡುವೆಯೂ ಸಂಪನ್ನವಾಗಿದ್ದು, ಯುದ್ಧ ವಿಮಾನ ಪೂರೈಕೆ ಆರಂಭವಾಗಿದೆ. ಸುಮಾರು 59,000 ಕೋಟಿ ರೂ. ಒಪ್ಪಂದದಂತೀ ಫ್ರಾನ್ಸ್‌ ನಿಂದ ಭಾರತಕ್ಕೆ 36 ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲಾಗುತ್ತದೆ. ಈ ಪೈಕಿ ಡಾಸೋ ಏವಿಯೇಷನ್ ಕಂಪನಿ 10 ವಿಮಾನ ಹಸ್ತಾಂತರ ಮಾಡಿದೆ.

5 ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿದ್ದು, ಸೆ.10ರಂದು ಅಧಿಕೃತವಾಗಿ ವಾಯುಪಡೆ ಸೇರಲಿವೆ. ಇನ್ನೂ 5 ವಿಮಾನ ಫ್ರಾನ್ಸ್‌ನಲ್ಲಿಯೇ ಇದ್ದು, ಭಾರತೀಯ ವಾಯಪಡೆ ಪೈಲೆಟ್‌ಗಳ ತರಬೇತಿಗಾಗಿ ಬಳಕೆ ಮಾಡಲಾಗುತ್ತಿದೆ.

ಡಾಸೋ ಏವಿಯೇಷನ್ ಕಂಪನಿ ಈಗಾಗಲೇ 10 ರಫೇಲ್ ಯುದ್ಧ ವಿಮಾನ ಹಸ್ತಾಂತರ ಮಾಡಿದೆ. ನವೆಂಬರ್‌ನಲ್ಲಿ 4 ರಿಂದ 5 ವಿಮಾನ ಭಾರತಕ್ಕೆ ಬರಲಿದೆ ಎಂದು ಅಂದಾಜಿಸಲಾಗಿದೆ. 2021ರೊಳಗೆ ಎಲ್ಲಾ 36 ವಿಮಾನ ಭಾರತದ ವಾಯುಪಡೆ ಸೇರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+