Waqf Bill: ವಕ್ಫ್ ತಿದ್ದುಪಡಿ ಕಾಯ್ದೆ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸರ್ಕಾರ
ವಕ್ಫ್ ತಿದ್ದುಪಡಿ ಕಾಯ್ದೆ ಕುರಿತಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ. ಈ ಕಾಯ್ದೆಯು ದೃಢವಾದ ಸಾಂವಿಧಾನಿಕ ಆಧಾರದ ಮೇಲೆ ನಿಂತಿದ್ದು, ಅದರ ಶಾಸಕಾಂಗ ವಿನ್ಯಾಸವು ಯಾವುದೇ ವ್ಯಕ್ತಿಗೆ ನ್ಯಾಯಾಲಯಗಳಿಗೆ ಹೋಗದಂತೆ ನಿರ್ಬಂಧಿಸುವುದಿಲ್ಲ ಮತ್ತು ಆಸ್ತಿ ಹಕ್ಕುಗಳು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ದಾನದ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು ನ್ಯಾಯಯುತ ಮತ್ತು ಕಾನೂನುಬದ್ಧತೆಯ ಮಿತಿಯೊಳಗೆ ತೆಗೆದುಕೊಳ್ಳಲಾಗುತ್ತದೆ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
ವಕ್ಪ್ ತಿದ್ದುಪಡಿ ಕಾಯ್ದೆಗಳನ್ನು ಪ್ರಶ್ನಿಸುವ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಗುರುವಾರ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಕಾಯ್ದೆಯು, "ನ್ಯಾಯಾಂಗ ಹೊಣೆಗಾರಿಕೆ, ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ತರುತ್ತದೆ. ಇದು ಸಂವಿಧಾನದ ಮೌಲ್ಯಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಹೊಂದಿಕೆಯಾಗುತ್ತದೆ" ಎಂದು ಹೇಳಿದೆ.

ಈ ಕಾಯ್ದೆಯು ಸಂವಿಧಾನದ ಭಾಗ 3ರ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಸಂವಿಧಾನದಿಂದ ಅಧಿಕೃತವಾದ ವಕ್ಫ್ ನಿರ್ವಹಣೆಯ ಜಾತ್ಯತೀತ, ಆಡಳಿತಾತ್ಮಕ ಅಂಶಗಳನ್ನು ಕಾನೂನುಬದ್ಧವಾಗಿ ನಿಯಂತ್ರಿಸುತ್ತದೆ ಎಂದು ಸರ್ಕಾರ ತಿಳಿಸಿದೆ.
2025 ರ ತಿದ್ದುಪಡಿಗಳು ಜಾರಿಗೆ ಬರುವ ಮೊದಲು ನೋಂದಾಯಿಸದ ಹಳೆಯ ವಕ್ಫ್ ಆಸ್ತಿಗಳ ಪರಿಸ್ಥಿತಿ ಏನು ಎನ್ನುವ ಪ್ರಶ್ನೆಗಳಿಗೆ ಉತ್ತರ ನೀಡಿರುವ ಕೇಂದ್ರ, 1923 ರಿಂದ ನೋಂದಣಿ ಕಡ್ಡಾಯವಾಗಿದ್ದರೂ, ಅಂತಹ ನೋಂದಣಿಗೆ ಯಾವುದೇ ದಾಖಲೆ ಪುರಾವೆ ಅಗತ್ಯವಿಲ್ಲ ಎಂದು ಕೇಂದ್ರ ಹೇಳಿದೆ. ಉದ್ದೇಶಪೂರ್ವಕವಾಗಿ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ದಾಖಲೆಗಳಿಲ್ಲ ವಕ್ಫ್ ಆಸ್ತಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ ಆದರೆ ಇದು ಸುಳ್ಳು, ನ್ಯಾಯಾಲಯವನ್ನು ದಾರಿ ತಪ್ಪಿಸಲು ಸುಳ್ಳು ಆರೋಪ ಮಾಡಲಾಗಿದೆ ಎಂದು ತಿಳಿಸಿದೆ.
ಸೆಕ್ಷನ್ 3[1][r] ರ ನಿಬಂಧನೆಯ ಅಡಿಯಲ್ಲಿ ವಕ್ಫ್ ಆಸ್ತಿಗಳನ್ನು ರಕ್ಷಿಸಲ್ಪಡುವುದಕ್ಕಾಗಿ, ತಿದ್ದುಪಡಿಯಲ್ಲಿ ಅಥವಾ ಅದಕ್ಕೂ ಮೊದಲು ಯಾವುದೇ ಟ್ರಸ್ಟ್, ಡೀಡ್ ಅಥವಾ ಯಾವುದೇ ದಾಖಲೆ ಪುರಾವೆ ಒದಗಿಸಬೇಕು ಒತ್ತಾಯಿಸಿಲ್ಲ. ನಿಬಂಧನೆಯ ಅಡಿಯಲ್ಲಿ ರಕ್ಷಿಸಲ್ಪಡಲು ಏಕೈಕ ಕಡ್ಡಾಯ ಅವಶ್ಯಕತೆಯೆಂದರೆ, ಕಳೆದ 100 ವರ್ಷಗಳಿಂದ ವಕ್ಫ್‌ಗಳನ್ನು ನಿಯಂತ್ರಿಸುವ ಕಾನೂನಿನ ಪ್ರಕಾರ ನೋಂದಣಿ ಯಾವಾಗಲೂ ಕಡ್ಡಾಯವಾಗಿರುವುದರಿಂದ ಅಂತಹ 'ಬಳಕೆದಾರರಿಂದ ವಕ್ಫ್' ಅನ್ನು 2025ರ ಏಪ್ರಿಲ್ 8ರಂದು ನೋಂದಾಯಿಸಬೇಕು ಎಂದು ಹೇಳಿದೆ.
ಕೇಂದ್ರ ವಕ್ಫ್ ಮಂಡಳಿ ಮತ್ತು ರಾಜ್ಯ ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಲು ಒದಗಿಸುವ ಕಾಯ್ದೆಯ ಕುರಿತು, ಕೇಂದ್ರವು ವಕ್ಫ್‌ನ ಧಾರ್ಮಿಕ ಮತ್ತು ಜಾತ್ಯತೀತ ಅಂಶಗಳ ನಡುವೆ ವ್ಯತ್ಯಾಸವನ್ನು ತೋರಿಸಲು ಪ್ರಯತ್ನಿಸಿದೆ, ವಕ್ಫ್ ಕಾಯ್ದೆ ವಕ್ಫ್‌ನ ಜಾತ್ಯತೀತ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದೆ.
ಈ ಕಾಯ್ದೆಯು ವಕ್ಫ್‌ನ ಧಾರ್ಮಿಕ ಅಂಶಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ವಕ್ಫ್‌ನ ನಿಜವಾದ ವ್ಯವಸ್ಥಾಪಕರಾಗಿರುವ ಮುತವಲ್ಲಿ ಧಾರ್ಮಿಕ ವ್ಯಕ್ತಿಯಾಗಿಯೇ ಉಳಿದಿದ್ದಾರೆ ಎಂದು ಕೇಂದ್ರವು ಸ್ಪಷ್ಟನೆ ನೀಡಿದೆ.












Click it and Unblock the Notifications