ರಾಜಸ್ಥಾನದಲ್ಲಿ ಇಂದು ಉಪಚುನಾವಣೆ: ಫೆ 1 ರಂದು ಫಲಿತಾಂಶ
ಜೈಪುರ, ಜನವರಿ 29: ರಾಜಸ್ಥಾನದ ಎರಡು ಲೋಕಸಭಾ ಕ್ಷೇತ್ರಗಳಿಗೆ ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆಯಲಿದ್ದು, ಮತದಾನ ಆರಂಭವಾಗಿದೆ.
ಸಂಸದ ಸನ್ವರ್ ಲಾಲ್ ಜತ್ ಅವರ ಮರಣದ ನಂತರ ತೆರವಾಗಿದ್ದ ಅಜ್ಮೇರ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಸನ್ವರ್ ಅವರ ಮಗ ರಾಮ್ ಸ್ವರೂಪ್ ಲಂಬಾ ಸ್ಪರ್ಧಿಸಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ರಘು ಶರ್ಮಾ ಸ್ಪರ್ಧಿಸುತ್ತಿದ್ದಾರೆ.

ಅಲ್ವರ್ ಕ್ಷೇತ್ರದ 1987 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದ್ದು, ಅಜ್ಮೇರ್ ನ 1925 ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿದೆ. ಅಲ್ವರ್ ನಲ್ಲಿ 11 ಅಭ್ಯರ್ಥಿಗಳು, ಅಜ್ಮೇರ್ ನಲ್ಲಿ 23 ಅಭ್ಯರ್ಥಿಗಳು ಮತ್ತು ಮಂಡಲಗಢದಲ್ಲಿ 8 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ಫೆಬ್ರವರಿ 1, ಗುರುವಾರದಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications