2024ರ ಸಾರ್ವತ್ರಿಕ ಚುನಾವಣೆಯಲ್ಲಿ ಸಂವಿಧಾನವನ್ನು ಉಳಿಸಲು ಮತ ಚಲಾಯಿಸಿ: ಅಖಿಲೇಶ್ ಯಾದವ್
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಮತ್ತು ರಾಜ್ಯದ ಆಡಳಿತವು ಗೆಲ್ಲುತ್ತಿದ್ದ ವಿರೋಧ ಪಕ್ಷದ ಅಭ್ಯರ್ಥಿಗಳು ಸೋಲುವಂತೆ ಮಾಡಿದೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಲಕ್ನೋ, ಮಾರ್ಚ್ 13: 2024 ರ ಸಾರ್ವತ್ರಿಕ ಚುನಾವಣೆಯಲ್ಲಿ "ಸಂವಿಧಾನವನ್ನು ಉಳಿಸಲು" ಮತ ಚಲಾಯಿಸುವಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಸೋಮವಾರ ಜನರಲ್ಲಿ ಮನವಿ ಮಾಡಿದ್ದಾರೆ. ಬಿಜೆಪಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಂಚನೆ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳು ಸೋಲುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ.
"ಈ ಬಾರಿ, ಸಂವಿಧಾನವನ್ನು ಉಳಿಸಲು ನೀವೆಲ್ಲರೂ ಮತ ಚಲಾಯಿಸಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಬಿಜೆಪಿ ಮತ್ತು ರಾಜ್ಯದ ಆಡಳಿತವು ಗೆಲ್ಲುತ್ತಿದ್ದ ವಿರೋಧ ಪಕ್ಷದ ಅಭ್ಯರ್ಥಿಗಳು ಸೋಲುವಂತೆ ಮಾಡಿದೆ" ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಧಾಂಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ನ್ಯಾಮುಲ್ ಹಸನ್ 203 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ ಆಡಳಿತದಿಂದ ಪರಾಭವಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಡೆಸುತ್ತಿರುವ ರಾಜ್ಯ ಆಡಳಿತದ ಅತಿಕ್ರಮಣದ ವಿರುದ್ಧ ಬುಲ್ಡೋಜರ್ ನೀತಿಯ ಕುರಿತು ಮಾತನಾಡಿರುವ ಅಖಿಲೇಶ್ ಯಾದವ್, ವಾರಣಾಸಿಯೊಂದರಲ್ಲೇ ಬಿಜೆಪಿಯವರಿಗೆ ಸೇರಿದ 20 ಸಾವಿರಕ್ಕೂ ಹೆಚ್ಚು ಅಕ್ರಮ ಕಟ್ಟಡಗಳಿವೆ, ಆದರೆ ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬುಲ್ಡೋಜರ್ ನ್ಯಾಯ ಎಂಬ ಹೊಸ ನಿತಿಯನ್ನು ಅನೌಪಚಾರಿಕವಾಗಿ ಜಾರಿಗೆ ತಂದಿದೆ.
"ಬರೇಲಿಯಲ್ಲಿ ಸಮಾಜವಾದಿ ಪಕ್ಷದ ನಾಯಕ ಶಾಜಿಲ್ ಇಸ್ಲಾಂ ಅವರ ಪೆಟ್ರೋಲ್ ಪಂಪ್ ಅನ್ನು ಕೆಡವಲಾಗಿದೆ. ಆದರೆ ಅದೇ ನಗರದಲ್ಲಿ ಬಿಜೆಪಿ ವ್ಯಕ್ತಿಗಳಿಗೆ ಸೇರಿದ ಅಕ್ರಮ ನರ್ಸಿಂಗ್ ಹೋಮ್‌ಗಳು ಮತ್ತು ಪೆಟ್ರೋಲ್ ಪಂಪ್‌ಗಳಿವೆ ಅದನ್ನು ಮಾತ್ರ ಹಾಗೆಯೇ ಉಳಿಸಲಾಗಿದೆ. ಬಿಜೆಪಿ ನಾಯಕರ ಒಡೆಯನದ ಅಕ್ರಮ ಕಟ್ಟಡಗಳನ್ನು ಸರ್ಕಾರ ಯಾವಾಗ ನೆಲಸಮಗೊಳಿಸಲು ಮುಂದಾಗುತ್ತದೆ ಎಂಬುದನ್ನು ನೋಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಅದಾನಿ ಗ್ರೂಪ್‌ನ ಆಪಾದಿತ ಹಣಕಾಸಿನ ಅಕ್ರಮಗಳ ಬಗ್ಗೆ ಮಾತನಾಡಿರುವ ಅಖಿಲೇಶ್ ಯಾದವ್ ಅವರು "ಎಲ್ಐಸಿ ಮತ್ತು ಎಸ್‌ಬಿಐ ನಷ್ಟವನ್ನು ಅನುಭವಿಸಿದೆ. ಆದರೆ ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮೇಲೆ ದಾಳಿ ಮಾಡಲು ಇಡಿ ಮತ್ತು ಸಿಬಿಐ ಅನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications