ಐಎಸ್ಒ ಪ್ರಮಾಣೀಕೃತ ಕಾಲೇಜು ಹಬ್ಬ ಶುರು
ಬೆಂಗಳೂರು, ಫೆ.6 : ವೆಲ್ಲೂರಿನ ವೆಲ್ಲೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾಲೇಜು ಹಬ್ಬಕ್ಕೆ ಐಎಸ್ಒ ಪ್ರಮಾಣ ಪತ್ರ ಸಿಕ್ಕಿದೆ. ವಾರ್ಷಿಕ ಅಂತಾರಾಷ್ಟ್ರೀಯ ಕ್ರೀಡಾ ಹಾಗೂ ಸಾಂಸ್ಕೃತಿಕ ಹಬ್ಬ ಫೆ.6 ರಿಂದ ಫೆ 9 ರ ತನಕ ನಡೆಯಲಿದೆ. ಕಳೆದ ವರ್ಷ ರಿವೆರಿಯಾ 13 ಹಬ್ಬದಲ್ಲಿ ವಿಶ್ವದೆಲ್ಲೆಡೆಯಿಂದ 700 ಕಾಲೇಜಿನ ಸುಮಾರು 6000 ವಿದ್ಯಾರ್ಥಿಗಳು ಭಾಗವಹಿಸಿ ದಾಖಲೆ ಬರೆದಿದ್ದರು. ಒಟ್ಟಾರೆ ಕ್ಯಾಂಪಸಿನಲ್ಲಿ ಸುಮಾರು 20,000 ಸ್ಥಳೀಯ ವಿದ್ಯಾರ್ಥಿಗಳ ಜತೆಗೂಡಿ ಸುಂದರ ಕಾಲೇಜು ಹಬ್ಬ ಆಚರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಏಕಕಾಲಕ್ಕೆ ಅತಿ ಹೆಚ್ಚು ಜನರು ಮುಷ್ಟಿ ಯುದ್ಧ(arm wrestling)ದಲ್ಲಿ ತೊಡಗುವ ಮೂಲಕ ಗಿನ್ನೆಸ್ ಬುಕ್ ಅಫ್ ವಿಶ್ವ ರೆಕಾರ್ಡ್ಸ್ ನಲ್ಲಿ ಹೆಸರು ಬರೆದಿರುವ ಈ ಹಬ್ಬ, 3005ಕ್ಕೂ ಅಧಿಕ ಸದಸ್ಯರು ಸೇರಿ ಭಾರತೀಯ ಮಹಿಳೆಗೆ ಗೌರವ ಸೂಚಕವಾಗಿ ಬೃಹತ್ ತಾಳೆ ಆಕೃತಿ ರಚನೆ ಮಾಡಲಾಗುತ್ತಿದೆ. ಐಎಸ್ಒ 9001 :2008 ಪ್ರಮಾಣ ಪತ್ರ ಪಡೆದ ಮೊದಲ ಕಾಲೇಜು ಹಬ್ಬ ಎಂಬ ಗೌರವಕ್ಕೆ Riviera ಪತ್ರವಾಗಿದ್ದು, ಈ ವರ್ಷ ಹೆಚ್ಚಿನ ಸಂಭ್ರಮದಿಂದ ವಿಶ್ವದ ಗಮನ ಸೆಳೆಯಲು ಮುಂದಾಗಿದೆ.

ಸಂಗೀತ ಪ್ರೇಮಿಗಳಿಗಾಗಿ ರಾಗ Reggae, ರೆಸೊನನ್ಸ್, ಅಕಾಸ್ಟಿಕ್ ವೈಬ್ಸ್ ಕಾರ್ಯಕ್ರಮಗಳಿವೆ. ನಾಟಕ, ರಂಗ ಚಟುವಟಿಕೆ, ಸಿನಿಮಾ ಪ್ರೇಮಿಗಳಿಗಾಗಿ ಡ್ರೀಂ ವರ್ಲ್ಡ್ ಫಿಲಂ ಫೆಸ್ಟಿವಲ್ ಆಯೋಜನೆಗೊಂಡಿದೆ. ಬೀದಿ ನಾಟಕಗಳನ್ನು ವಿಶೇಷವಾಗಿ ರೂಪಿಸಲಾಗಿದೆ. ನೃತ್ಯ ಪ್ರದರ್ಸನ, ಫ್ಯಾಷನ್ ಪ್ರಿಯರಿಗಾಗಿ ಫ್ಯಾಷನ್ ಶೋ ಕೂಡಾ ಇದೆ.
ವಿಐಟಿಡಿಟಿ 2014 ಮೂರನೇ ವಾರ್ಷಿಕ ಬ್ರಿಟಿಷ್ ಸಂಸತತು ಚರ್ಚಾಕೂಟ ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಿದೆ. ಫಿಲಿಫೈನ್ಸ್, ಮಲೇಷಿಯಾ, ಸಿಂಗಪುರ, ಯುನೈಟೆಡ್ ಕಿಂಗ್ ಡಮ್, ಬಾಂಗ್ಲಾದೇಶ ಹಾಗೂ ಭಾರತದ ಪ್ರತಿಭಾವಂತರು ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ.
ಕ್ರೀಡಾಕೂಟದಲ್ಲಿ ಈಜು, ಟೇಬಲ್ ಟೆನ್ನಿಸ್, ಬಾಸ್ಕೆಟ್ ಬಾಲ್, ಕ್ರಿಕೆಟ್, ಸ್ನೂಕರ್, ಸ್ಕ್ವಾಶ್, ಬಾಡ್ಮಿಂಟನ್ ಮುಂತಾದ ಕ್ರೀಡಾ ಸ್ಪರ್ಧೆಗಳಿವೆ.ಬೆಂಗಳೂರು ಹಾಗೂ ಚೆನ್ನೈ ನಡುವಿನಲ್ಲಿರುವ ವೆಲ್ಲೂರು ಗೋಲ್ಡನ್ ಟೆಂಪಲ್ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿದೆ. ವೆಲ್ಲೂರು ವಿಶ್ವವಿದ್ಯಾಲಯದ ಕಾಲೇಜು ಹಬ್ಬ ರಿವೇರಾ 14 ಬಗ್ಗೆ ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: http://www.vitriviera.com/












Click it and Unblock the Notifications