Video Viral: ಲಂಡನ್ ರಸ್ತೆಗಳಲ್ಲಿ ಸುತ್ತಾಡಿದ 'ವಿರುಷ್ಕಾ' ಜೋಡಿ, ಸರಳತೆಗೆ ನೆಟ್ಟಿಗರ ಭಾರೀ ಮೆಚ್ಚುಗೆ..Virat Kohli
ಕ್ರಿಕೆಟ್ ಜಗತ್ತಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಹಾಗೂ ಟಿ20 ಮತ್ತು ಟೆಸ್ಟ್ ಕ್ರಿಕೆಟ್ ಪಂದ್ಯಗಳಿಗೆ ವಿದಾಯ ಹೇಳಿರುವ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಲಂಡನ್‌ನಲ್ಲಿರುವುದು ಗೊತ್ತೇ ಇದೆ. ಅವರೊಂದಿಗೆ ಪತ್ನಿ ಮತ್ತು ನಟಿ ಅನುಷ್ಕಾ ಶರ್ಮಾ ಅವರು ಸಹ ಜೊತೆಗಿದ್ದಾರೆ. ವಿರುಷ್ಕಾ ದಂಪತಿ ಹಾಯಾಗಿ ಲಂಡನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣ ಹೆಚ್ಚು ಪ್ರಭಾವ ಹೊಂದಿರುವ ಇಂದಿನ ದಿನಗಳಲ್ಲಿ ಏನೇ ನಡೆದರು ಅದರಲ್ಲೂ ಸೆಲೆಬ್ರೆಟಿಗಳು, ಕ್ರಿಕೆಟಿಗರು, ಕಲಾವಿದರು, ಖ್ಯಾತನಾಮರು ಏನೇ ಮಾಡಿದರು ಅದು ವೈರಲ್ ಆಗುತ್ತದೆ. ಸುದ್ದಿಯಾಗುತ್ತದೇ. ಅದೇ ರೀತಿ ಖ್ಯಾತ ಕ್ರಿಕೆಟಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಲಂಡನ್‌ನ ಬೀದಿಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಪತಿ, ಪತ್ನಿ ಇಬ್ಬರು ಲಂಡನ್ ಬೀದಿಗಳಲ್ಲಿ ನಡೆದುಕೊಂಡು ಒಡಾಡಿದ್ದಾರೆ. ಹೊಸಬರಂತೆ ಲಂಡನ್ ಬೀದಿಗಳನ್ನು ಅನ್ವೇಷಿಸಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. ಈ ಸೆಲೆಬ್ರಿಟಿಗಳು ಲಂಡನ್ ಸ್ಥಳೀಯ ನಿವಾಸಿಗಳಂತೆ ಕಾಣಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ತಾರಾಪಟ್ಟ ಇದ್ದರೂ ಸಹಿತ ವಿರಾಟ ಮತ್ತು ಅನುಷ್ಕಾರ ಈ ಸರಳ ನಡವಳಿಕೆ ಸಾರ್ವಜನಿಕರಿಗೆ ಮೆಚ್ಚುಗೆಗೆ ಕಾರಣವಾಗಿದೆ.
ಸ್ಥಳೀಯರಂತೆ ಸಾಮಾನ್ಯ ಉಡುಗೆಯಲ್ಲಿ ಆರಾಮಾಗಿ, ಸಾಮಾನ್ಯ ವ್ಯಕ್ತಿಗಳಂತೆ ಓಡಾಡಿದ್ದಾರೆ. ಐಪಿಎಲ್ ಬಳಿಕ ವಿರಾಟ್ ಕೊಹ್ಲಿಗೆ ದೊಡ್ಡ ಬ್ರೇಕ್ ಸಿಕ್ಕಂತಾಗಿದೆ. ಮುಂದೆ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ಸರಣಿಗೆ ತಯಾರಿ ಪ್ರಾರಂಭಿಸುವ ಮೊದಲು ಕುಟುಂಬದೊಂದಿಗೆ ಕೊಹ್ಲಿಗೆ ಸಮಯ ಕಳೆಯಲು ಅವಕಾಶ ಸಿಕ್ಕಂತಾಗಿದೆ.
ಜಾಲಿ ಮೂಡಿನಲ್ಲಿ ವಿರುಷ್ಕಾ
ವಿರುಷ್ಕಾ ಅಭಿಮಾನಿಗಳು ಲಂಡನ್ ಪ್ರವಾಸದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಮೇಲಿಂದ ಮೇಲೆ ವಿರುಷ್ಕಾ ಲಂಡನ್ ನಲ್ಲಿ ಬೀದಿ ಸುತ್ತಿದ ವಿಡಿಯೋ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಈ ದಂಪತಿ ಲಂಡನ್ ಜನರೊಂದಿಗೆ ನಡೆದುಕೊಂಡು ಹೋಗುವುದ, ನಗುವುದು ಮತ್ತು ಮಾತನಾಡುವ ಜಾಲಿ ಮೂಡಿನ ವಿಡಿಯೋ ಅಭಿಮಾನಗಳ ಮನ ಗೆದ್ದಿದೆ.
ದಿ ಓವಲ್‌ನಲ್ಲಿ ನಡೆದ ಅಂತಿಮ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 6 ರನ್‌ಗಳ ರೋಮಾಂಚಕ ವಿಜಯ ಸಾಧಿಸಿತ್ತು. ಇದರ ಪರಿಣಾಮವಾಗಿ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ 2-2 ಸರಣಿ ಸಮಬಲ ಸಾಧಿಸಿತು. ಈ ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದ ವಿರಾಟ್ ಕೊಹ್ಲಿ "ಭಾರತ ತಂಡದ ಅದ್ಭುತ ಗೆಲುವು. ಸಿರಾಜ್ ಮತ್ತು ಪ್ರಸಿದ್ಧ್ ದೃಢಸಂಕಲ್ಪ ನಮಗೆ ಈ ಅದ್ಭುತ ಗೆಲುವು ತಂದುಕೊಟ್ಟಿತು ಎಂದು ಹೇಳಿದ್ದಾರೆ.












Click it and Unblock the Notifications