ವಿಡಿಯೋ: ಮ್ಯಾಗಿ ನೂಡಲ್ಸ್‌ನಲ್ಲಿ ಸ್ವೆಟರ್ ತಯಾರಿಸಿದ ಮಹಿಳೆ
ಸಾಮಾನ್ಯವಾಗಿ ಹತ್ತಿಯ ದಾರದಿಂದ ಬಟ್ಟೆಗಳನ್ನು ತಯಾರಿಸುವುದನ್ನು ನಾವು ನೋಡಿದ್ದೇವೆ. ಜೊತೆಗೆ ಇದರಿಂದ ಸ್ವೆಟರ್ ತಯಾರಿಸುವನ್ನು ನಾವು ಕಂಡಿದ್ದೇವೆ. ಆದರೆ ಮ್ಯಾಗಿ ನೂಡಲ್ಸ್‌ನಿಂದ ಸ್ವೆಟರ್ ತಯಾರಿಸುವುದನ್ನು ನೀವು ಎಂದಾದರೂ ನೋಡಿದ್ದೀರಾ? ನೋಡಿರಲು ಸಾಧ್ಯವಿಲ್ಲ ಬಿಡಿ. ಯಾಕೆಂದ್ರೆ ಇಂಥಹದೊಂದು ವಿಡಿಯೋ ಇತ್ತಿಚೆಗಷ್ಟೇ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವೊಂದು ವಿಡಿಯೋಗಳು ಭಾರೀ ವೈರಲ್ ಆಗುತ್ತಿರುತ್ತವೆ. ಕೆಲವೊಂದು ಯಾವಾಗ ಹಿಟ್ ಆಗುತ್ತೋ ಗೊತ್ತಿಲ್ಲ. ಕೆಲವೊಂದಿಷ್ಟು ಜನ ನೋಡುಗರ ಗಮನ ಸೆಳೆಯಲು ವಿಚಿತ್ರವಾದ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಮಾತ್ರವಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹೆಚ್ಚು ಟ್ರೆಂಡ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ ಉಣ್ಣೆಯ ಬದಲು ನೂಡಲ್ಸ್‌ನಿಂದ ಸ್ವೆಟರ್ ನೇಯುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ. ಬಟ್ಟಲಿನಲ್ಲಿ ಇರಿಸಲಾದ ನೂಡಲ್ಸ್ ಸಹಾಯದಿಂದ ತ್ವರಿತವಾಗಿ ಸ್ವೆಟರ್ ಮಾಡುವ ವಿಡಿಯೋ ವೈರಲ್ ಆಗಿದೆ.
ನೀವು ನೂಡಲ್ಸ್ ಅನ್ನು ಹಲವು ಬಾರಿ ತಿಂದಿರಬೇಕು. ಆದರೆ ನೂಡಲ್ಸ್‌ನಿಂದ ಸ್ವೆಟರ್‌ಗಳನ್ನು ತಯಾರಿಸಬಹುದು ಎಂದು ನೀವು ಯೋಚಿಸಿರಲು ಸಾಧ್ಯವಿಲ್ಲ. ಈ ಕಲ್ಪನೆಯು ಯಾರ ಮನಸ್ಸಿಗೂ ಬರುವುದು ಇಲ್ಲ ಬಿಡಿ. ಆದರೆ ಮಹಿಳೆಯೊಬ್ಬರು ಎರಡು ಕಸೂತಿ ಸ್ಟಿಕ್ ಸಹಾಯದಿಂದ ನೂಡಲ್ಸನಿಂದ ಸ್ವೆಟರ್ ಅನ್ನು ತಯಾರಿಸುತ್ತಾರೆ.
— ✧ (@mixiaoz) January 16, 2022
ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯ ಈ ಕೌಶಲ್ಯವನ್ನು ನೋಡಿದ ಜನರು ಕೂಡ ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋ ನೋಡಿದ ಜನ ಮಹಿಳೆಗೆ ಈ ವಿಚಾರ ಹೇಗೆ ಬಂತು ಎಂದು ಪ್ರಶ್ನಿಸುತ್ತಿದ್ದಾರೆ. ನೂಡಲ್ಸ್‌ನಿಂದ ಸ್ವೆಟರ್‌ಗಳನ್ನು ತಯಾರಿಸಬಹುದು ಎಂದು ಯಾರೂ ಭಾವಿಸಿರಲಿಲ್ಲ. ಮಹಿಳೆ ಉಣ್ಣೆಯ ಬದಲಿಗೆ ನೂಡಲ್ಸ್ ಬಳಸಿ ಸ್ವೆಟರ್ ಅನ್ನು ತಯಾರಿಸಿದಾಗ, ಸಾಮಾಜಿಕ ಮಾಧ್ಯಮಗಳು ಅವಳ ಕಲ್ಪನೆಯನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಇದುವರೆಗೆ 6.9 ಮಿಲಿಯನ್‌ಗಿಂತಲೂ ಹೆಚ್ಚು ಈ ವೀಡಿಯೊವನ್ನು ಜನರು ವೀಕ್ಷಿಸಿದ್ದಾರೆ.

Recommended Video
ಇತ್ತೀಚೆಗಷ್ಟೇ ಚಿನ್ನ ಲೇಪಿತ ಮಿಠಾಯಿ ಮಾರಾಟ ಮಾಡುವುದನ್ನ ನೋಡಿದ್ದೆವು. ಚಿನ್ನ ಲೇಪಿತ ಮಿಠಾಯಿಯ ಬೆಲೆ ರೂ. ಪ್ರತಿ ಕೆಜಿಗೆ 16,000 ರು. ಇದನ್ನು ದೆಹಲಿಯ ಮೌಜ್‌ಪುರದಲ್ಲಿರುವ ಶಗುನ್ ಸ್ವೀಟ್ಸ್ ಎಂದು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತದೆ. ಈ ಸಿಹಿತಿಂಡಿಗಳ ತಯಾರಿಕೆಯ ವಿಡಿಯೊವನ್ನು ಆಹಾರ ಬ್ಲಾಗರ್ ಅರ್ಜುನ್ ಚೌಹಾಣ್ ಅವರು ತಮ್ಮ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಸಿಹಿಯನ್ನು ಹೇಗೆ ತಯಾರಿಸಲಾಗುತ್ತದೆ ಮತ್ತು ನಂತರ ಗೋಲ್ಡನ್ ಫಾಯಿಲ್‌ನ ಪದರವನ್ನು ಹೇಗೆ ಲೇಪಿಸಲಾಗುತ್ತದೆ ಎಂದು ವಿಡಿಯೊ ತೋರಿಸುತ್ತದೆ. "16000 ರು ಪ್ರತಿ ಕೆಜಿ ಚಿನ್ನ ಲೇಪಿತ ಮಿಠಾಯಿಯನ್ನು(ಸ್ವೀಟ್) ತಿನ್ನಲು ಇಚ್ಚಿಸುವ ನಿಮ್ಮ ಶ್ರೀಮಂತ ಸ್ನೇಹಿತನನ್ನು ಟ್ಯಾಗ್ ಮಾಡಿ" ಎಂದು ವಿಡಿಯೊದ ಶೀರ್ಷಿಕೆ ಹೇಳುತ್ತದೆ.












Click it and Unblock the Notifications