Get Updates
Get notified of breaking news, exclusive insights, and must-see stories!

ಭಾನುವಾರ ಭಾರತ-ಪಾಕ್ ಕ್ರಿಕೆಟ್ ಹಣಾಹಣಿಗೆ ಮೀಸಲು, ನೀವೇನಂತೀರಾ?

ಜೂನ್ ನಾಲ್ಕನೇ ತಾರೀಕಿನ ಭಾನುವಾರ ಇಂಗ್ಲೆಂಡ್ ನಲ್ಲಿ ಭಾರತ-ಪಾಕಿಸ್ತಾನ ಮಧ್ಯೆ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಇದೆ. ಹೈ ವೋಲ್ಟೇಜ್ ಪಂದ್ಯಕ್ಕೆ ಭಾರೀ ಕುತೂಹಲದಿಂದ ಎದುರು ನೋಡುವ ಅಭಿಮಾನಿಗಳು ವಿಶ್ವದಾದ್ಯಂತ ಇದ್ದಾರೆ. ಶಿಸ್ತಾಗಿ ಟಿವಿ ಮುಂದೆ ಕೂತು ಇಡೀ ಪಂದ್ಯ ವೀಕ್ಷಣೆಗೆ ಏನೆಲ್ಲ ತಯಾರಿ ಮಾಡಿಕೊಂಡಿರುವ ಜನರು ಇದ್ದೇ ಇರುತ್ತಾರೆ.

ವಾರಣಾಸಿಯಲಿ ನಾಳಿನ ಪಂದ್ಯಕ್ಕಾಗಿ ಭಾರತಕ್ಕೆ ಶುಭ ಕೋರಲಾಗಿದೆ. ಇನ್ನು ವಿಶ್ವ ಪರಿಸರ ದಿನಾಚರಣೆಯ ಮುನ್ನವೇ ರಾಜಸ್ತಾನದ ಬಿಕಾನೇರ್ ನ ಕಾಲೇಜೊಂದರಲ್ಲಿ ಸಾರ್ಥಕ ಅನಿಸುವಂಥ ಕೆಲಸ ಮಾಡಲಾಗಿದೆ. ಇದು ಸಾಂಕೇತಿಕ ಅಂತ ಅನಿಸಿದರೂ ಒಳ್ಳೆ ಕೆಲಸ ಅನ್ನುವುದರಲ್ಲಿ ಅನುಮಾನವೇ ಇಲ್ಲ.[ಭಾರತ-ಪಾಕ್ ಮುಖಾಮುಖಿ: ಇತಿಹಾಸ ಹೇಳುವ 5 ಮಹತ್ವದ ಅಂಶ]

ಮರಗಳಿಗೆ ಮರದ ಗೂಡು ಕಟ್ಟುವ ಈ ಕೆಲಸಕ್ಕೆ ಭೇಷ್ ಅನ್ನಲೇಬೇಕು. ಇನ್ನು ಪಾಕಿಸ್ತಾನದ ದಾಳಿಯಲ್ಲಿ ಕಾಶ್ಮೀರದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ. ಸಿಬಿಎಸ್ ಇ ಹತ್ತನೇ ತರಗತಿ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ವಿದ್ಯಾರ್ಥಿಗಳ ಸಂಭ್ರಮ ಮೇರೆ ಮೀರಿದೆ. ಇನ್ನು ವಾಲ್ ಮಾರ್ಟ್ ಷೇರುದಾರರ ಸಭೆಯಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದ ಫೋಟೋ....ಎಲ್ಲದರ ಸುದ್ದಿ-ಚಿತ್ರ ನಿಮ್ಮೆದುರಿಗಿದೆ.

ಭಾರತ ವರ್ಸಸ್ ಪಾಕಿಸ್ತಾನ

ಭಾರತ ವರ್ಸಸ್ ಪಾಕಿಸ್ತಾನ

ಬೇರೆ ದೇಶಗಳ ಮಧ್ಯದ ಕ್ರಿಕೆಟ್ ಪಂದ್ಯಗಳನ್ನು ನೋಡುವುದಕ್ಕೂ ಭಾರತ-ಪಾಕಿಸ್ತಾನದ ಮಧ್ಯೆ ಪಂದ್ಯ ನಡೆಯುವುದಕ್ಕೂ ಭಾರೀ ವ್ಯತ್ಯಾಸವಿದೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ-ಪಾಕ್ ಮಧ್ಯೆ ಹಣಾಹಣಿ ಇದೆ. ಉಸಿರು ಬಿಗಿ ಹಿಡಿಯುವಂಥ ರೋಚಕ ಹಣಾಹಣಿಯನ್ನು ಖಂಡಿತಾ ನಿರೀಕ್ಷಿಸಬಹುದು. ಈ ಪಂದ್ಯಕ್ಕೆ ಭಾರತಕ್ಕೆ ಶುಭ ಕೋರಿರುವ ವಾರಣಾಸಿಯ ಜನರು.

ಪಕ್ಷಿಗಳಿಗಾಗಿ ಮನೆ

ಪಕ್ಷಿಗಳಿಗಾಗಿ ಮನೆ

ವಿಶ್ವ ಪರಿಸರ ದಿನಾಚರಣೆಯ ಮುಂಚೆಯೇ ಅಂದರೆ ಶನಿವಾರ ರಾಜಸ್ತಾನದ ಬಿಕಾನೇರ್ ನ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾದಕರು ಹಕ್ಕಿಗಳಿಗಾಗಿ ಮರದ ಗೂಡುಗಳನ್ನು ಕಟ್ಟಿದರು.

ಪಾಕ್ ಗುಂಡಿನ ದಾಳಿ

ಪಾಕ್ ಗುಂಡಿನ ದಾಳಿ

ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಪಾಕಿಸ್ತಾನದ ಗುಂಡಿನ ದಾಳಿಯಲ್ಲಿ ಗಾಯಗೊಂಡ ಮಹಿಳೆ ಶೆಹನಾಜ್ ಬೇಗಂ.

ಯಶಸ್ಸಿನ ಸಂಭ್ರಮಾಚರಣೆ

ಯಶಸ್ಸಿನ ಸಂಭ್ರಮಾಚರಣೆ

ಸಿಬಿಎಸ್ ಇ ಹತ್ತನೇ ತರಗತಿಯ ಫಲಿತಾಂಶ ಘೋಷಣೆ ಆದ ನಂತರ ಅಲಹಾಬದ್ ನಲ್ಲಿ ಪರಸ್ಪರ ಬಣ್ಣ ಹಚ್ಚಿಕೊಂಡು ಯಶಸ್ಸನ್ನು ಸಂಭ್ರಮಿಸಿದ ವಿದ್ಯಾರ್ಥಿಗಳು.

ಪದವಿ ಪ್ರದಾನದ ವೇಳೆ ಸಚಿವರ ಫೋಟೋ ಪೋಸ್

ಪದವಿ ಪ್ರದಾನದ ವೇಳೆ ಸಚಿವರ ಫೋಟೋ ಪೋಸ್

ಭೋಪಾಲ್ ನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಷನ್ ಅಂಡ್ ರೀಸರ್ಚ್ ನ ಪದವಿ ಪ್ರದಾನ ಸಮಾರಂಭದ ವೇಳೆ ವಿದ್ಯಾರ್ಥಿಗಳೊಂದಿಗೆ ಫೋಟೋಗೆ ಪೋಸ್ ನೀಡಿದ ಕೇಂದ್ರ ಮಾನ ಸಂಪನ್ಮೂಲ ಹಾಗೂ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್.

ಸಂಗೀತ ಕಾರ್ಯಕ್ರಮ

ಸಂಗೀತ ಕಾರ್ಯಕ್ರಮ

ವಾಲ್ ಮಾರ್ಟ್ ಷೇರುದಾರರ ಸಭೆಯಲ್ಲಿ ಗ್ವೇನ್ ಸ್ಟೆಫಾನಿ ಕಾರ್ಯಕ್ರಮ ನೀಡಿದರು.

ಕ್ಯಾಮೆರಾ ಕಣ್ಣು ಮಿಟುಕಿಸಿದಾಗ ಸೆರೆಯಾದ ಚೆಲುವೆ

ಕ್ಯಾಮೆರಾ ಕಣ್ಣು ಮಿಟುಕಿಸಿದಾಗ ಸೆರೆಯಾದ ಚೆಲುವೆ

ಮುಂಬೈನ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ನಟಿ ಯಾಮಿ ಗೌತಮ್ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಹೀಗೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+