Vande Bharat Express: ಶೀಘ್ರದಲ್ಲೇ ಬರಲಿವೆ ವಂದೇ ಭಾರತ್ ಸ್ಲೀಪರ್ ಕೋಚ್, ವಂದೇ ಭಾರತ್‌ ಮೆಟ್ರೋ ರೈಲುಗಳು- ವರದಿ, ವಿವರ

ನವದೆಹಲಿ, ಸೆಪ್ಟೆಂಬರ್‌ 16: ಸೆಮಿ ಹೈ ಸ್ಪೀಡ್‌ ರೈಲುಗಳಾದ ವಂದೇ ಭಾರತ್‌ ರೈಲುಗಳು ಭಾರತದಲ್ಲಿ ಜನಪ್ರಿಯವಾಗಿದೆ. ಈಗ ಭಾರತೀಯ ರೈಲ್ವೆಯು ಶೀಘ್ರದಲ್ಲೇ ವಂದೇ ಭಾರತ್‌ ಸ್ಲಿಪರ್‌ ಕೋಚ್‌ ಹಾಗೂ ವಂದೇ ಭಾರತ್‌ ಮೆಟ್ರೋ ರೈಲುಗಳನ್ನು ಹೊರತರಲು ಮುಂದಾಗಿದೆ. ಈ ರೈಲುಗಳು ನಿರ್ಮಾಣ ಹಂತದಲ್ಲಿದ್ದು, ಮುಂದಿನ ವರ್ಷ ಸಂಚಾರ ನಡೆಸಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಜನರಲ್ ಮ್ಯಾನೇಜರ್ ಬಿಜಿ ಮಲ್ಯ ಅವರು, 'ಕಂಪನಿಯು ಮಾರ್ಚ್ 2024 ರಲ್ಲಿ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಹೊರತರಲಿದೆ ಎಂದು ಶನಿವಾರ ಹೇಳಿದ್ದಾರೆ.

Vande Bharat sleeper coach, metro to be rolled out next year: info, details are here

'ಮೊದಲ ರೈಲು ನಿರ್ಮಾಣ ಹಂತದಲ್ಲಿದೆ. ಇದನ್ನು ಮಾರ್ಚ್ 2024 ರಲ್ಲಿ ಹೊರತರಲಾಗುವುದು' ಎಂದು ಮಲ್ಯ ತಿಳಿಸಿದ್ದಾರೆ.

ವಂದೇ ಭಾರತ್‌ನ ಸ್ಲೀಪರ್ ರೈಲು ಆವೃತ್ತಿಯು ವಂದೇ ಭಾರತ್‌ ಸರಣಿಗೆ ಸೇರ್ಪಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಪ್ರಯಾಣಿಕರಿಗೆ ರಾತ್ರಿಯಿಡೀ ದೂರದ ಪ್ರಯಾಣ ಮಾಡಲು ಸೌಕರ್ಯವನ್ನು ಒದಗಿಸುತ್ತದೆ.

Vande Bharat sleeper coach, metro to be rolled out next year: info, details are here

ವಂದೇ ಮೆಟ್ರೋ ಎಂಬ ಹೊಸ ರೀತಿಯ ವಂದೇ ಭಾರತ್ ರೈಲನ್ನು ಸಹ ಕಂಪನಿಯು ಅಭಿವೃದ್ಧಿಪಡಿಸುತ್ತಿದೆ. ಇದು 12 ಬೋಗಿಗಳ ರೈಲು ಆಗಿದ್ದು, ಕಡಿಮೆ ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. 12 ಕೋಚ್‌ಗಳನ್ನು ಹೊಂದಿರುವ ವಂದೇ ಮೆಟ್ರೋವನ್ನು ಜನವರಿ ವೇಳೆಗೆ ಹೊರತರಲಾಗುವುದು ಎಂದು ಮಲ್ಯ ಹೇಳಿದರು.

ಮೊದಲ ಹವಾನಿಯಂತ್ರಿತವಲ್ಲದ (ಎಸಿ) ವಂದೇ ಭಾರತ್ ರೈಲು ಅಕ್ಟೋಬರ್‌ನಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಆಗಸ್ಟ್‌ನಲ್ಲಿ ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದರು. ಈ ಕ್ರಮವು ವೇಗ ಅಥವಾ ಸೌಕರ್ಯದಲ್ಲಿ ರಾಜಿ ಮಾಡಿಕೊಳ್ಳದೆ ಅಗ್ಗದ ಪ್ರಯಾಣವನ್ನು ನೀಡುವ ಗುರಿಯನ್ನು ಹೊಂದಿದೆ.

Vande Bharat sleeper coach, metro to be rolled out next year: info, details are here

ಏತನ್ಮಧ್ಯೆ, ಮಧ್ಯಪ್ರದೇಶದ ನೀಮಚ್ಗೆ ಶೀಘ್ರದಲ್ಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ನೀಡಲಾಗುವುದು ಎಂದು ಎಂದು ಕೇಂದ್ರ ಸಚಿವ ಅಶ್ವೀನಿ ವೈಷ್ಣವ್ ಈ ಹಿಂದೆ ಘೋಷಿಸಿದ್ದರು.

'ಮೇಕ್ ಇನ್ ಇಂಡಿಯಾ' ಅಭಿಯಾನದ ಭಾಗವಾಗಿ, ವಂದೇ ಭಾರತ್ ಎಕ್ಸ್‌ಪ್ರೆಸ್ ಸರಣಿಯು 2019 ರಲ್ಲಿ ಪ್ರಾರಂಭಗಿತು. ಇವುಗಳು ಭಾರತದ ಮೊದಲ ಸ್ಥಳೀಯ ಸೆಮಿ ಹೈಸ್ಪೀಡ್ ರೈಲುಗಳಾಗಿವೆ. ಮೊದಲ ರೈಲಿಗೆ ಫೆಬ್ರವರಿ 15, 2019 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಿದರು. ಈ ರೈಲು ನವದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುತ್ತಿದೆ. ಈ ರೈಲುಗಳನ್ನು ತಮಿಳುನಾಡಿನ ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತದೆ.

Vande Bharat sleeper coach, metro to be rolled out next year: info, details are here

ವಂದೇ ಭಾರತ್‌ ರೈಲುಗಳು ಗರಿಷ್ಠ 160 ಕಿಮೀ ವೇಗದವರೆಗೆ ಓಡುತ್ತವೆ. ಶತಾಬ್ದಿ ರೈಲಿನಂತಹ ಪ್ರಯಾಣವನ್ನು ಇಲ್ಲಿ ಹೊಂದಬಹುದು. ಆದರೆ, ಈ ರೈಲುಗಳಲ್ಲಿ ಉತ್ತಮ ಸೌಲಭ್ಯಗಳಿವೆ.

ವರದಿಗಳ ಪ್ರಕಾರ, ಶೀಘ್ರದಲ್ಲೇ ಒಂಬತ್ತು ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಹಲವಾರು ಮಾರ್ಗಗಳಲ್ಲಿ ಪ್ರಾರಂಭಿಸಲು ರೈಲ್ವೆ ಇಲಾಖೆ ಸಿದ್ಧವಾಗಿದೆ. ಈ ಒಂಬತ್ತು ಮಾರ್ಗಗಳಲ್ಲಿ ಐದು ಮಾರ್ಗಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ.

ಐದು ಹೊಸ ತಾತ್ಕಾಲಿಕ ವಂದೇ ಭಾರತ್ ಮಾರ್ಗಗಳು

ಇಂದೋರ್ - ಜೈಪುರ ವಂದೇ ಭಾರತ್ ಎಕ್ಸ್‌ಪ್ರೆಸ್

ಜೈಪುರ - ಉದಯಪುರ ವಂದೇ ಭಾರತ್ ಎಕ್ಸ್‌ಪ್ರೆಸ್

ಪುರಿ - ರೂರ್ಕೆಲಾ ವಂದೇ ಭಾರತ್ ಎಕ್ಸ್‌ಪ್ರೆಸ್

ಪಾಟ್ನಾ - ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್

ಜೈಪುರ - ಚಂಡೀಗಢ ವಂದೇ ಭಾರತ್ ಎಕ್ಸ್‌ಪ್ರೆಸ್

ಪ್ರಸ್ತುತ, ಭಾರತದಾದ್ಯಂತ 25 ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳು 50 ಮಾರ್ಗಗಳನ್ನು ಒಳಗೊಂಡಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+