ಉತ್ತರಾಖಂಡದಲ್ಲಿ ಕಣಿವೆಗುರುಳಿದ ಕಾರು: 8 ಜನ ದುರ್ಮರಣ

ಉತ್ತರಾಖಂಡ್, ಫೆಬ್ರವರಿ 7: ಉತ್ತರಾಖಂಡದ ಕಣಿವೆಯೊಂದರಲ್ಲಿ ಕಾರುಬಿದ್ದ ಪರಿಣಾಮ 8 ಜನ ಮೃತರಾದ ಘಟನೆ ಇಂದು(ಫೆ.7) ಬೆಳಿಗ್ಗೆ ಚಂಪಾವತ್ ಎಂಬಲ್ಲಿಯ ಸವಾಲಾ ಪ್ರದೇಶದಲ್ಲಿ ನಡೆದಿದೆ.

ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಈ ಕಾರು ಉತ್ತರಾಖಂಡದ ಪಿತೋರಗಢದಿಂದ ತನಕ್ಪುರ ಎಂಬಲ್ಲಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಈ ಘಟನೆ ಸಂಭವಿಸಿದ್ದು, ಘಟನೆ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೃತರ ಗುರುತೂ ಪತ್ತೆಯಾಗಿಲ್ಲ.

ಮೃತರು ಪ್ರವಾಸಿಗರಾ ಅಥವಾ ಸ್ಥಳೀಯರಾ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಫೆಬ್ರವರಿ 1 ರಂದು ಇಲ್ಲಿನ ನೈನಿತಾಲ್ ನಾಲೆಗೆ ಕಾರೊಂದು ಉರುಳಿದ ಪರಿಣಾಮ ನಾಲ್ವರು ಪ್ರವಾಸಿಗಳು ಮೃತರಾಗಿದ್ದರು.

Uttarakhand: 8 killed after car falls in gorge

ಇಂದು ಬೆಳಿಗ್ಗೆ ಮಧ್ಯಪ್ರದೇಶದ ಅಲಿರಾಜ್ಪುರ ಎಂಬಲ್ಲಿ ಮರಳು ಹೊತ್ತ ಲಾರಿಯೊಂದು ಮಗುಚಿದ ಪರಿಣಾಮ 8 ಜನ ಮೃತರಾಗಿದ್ದನ್ನು ಇಲ್ಲಿ ನೆನಪಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+