Get Updates
Get notified of breaking news, exclusive insights, and must-see stories!

2016-22ರ ನಡುವೆ ಮಕ್ಕಳ ಕಳ್ಳಸಾಗಣೆ: ಅಗ್ರಸ್ಥಾನದಲ್ಲಿ ಯುಪಿ, ಬಿಹಾರ, ಆಂಧ್ರ ಪ್ರದೇಶ

ನವದೆಹಲಿ, ಜುಲೈ. 30: ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರಪ್ರದೇಶ 2016 ಮತ್ತು 2022 ರ ನಡುವೆ ಗರಿಷ್ಠ ಸಂಖ್ಯೆಯ ಮಕ್ಕಳ ಕಳ್ಳಸಾಗಣೆಯನ್ನು ಹೊಂದಿರುವ ಮೊದಲ ಮೂರು ರಾಜ್ಯಗಳಾಗಿವೆ. ಆದರೆ ದೆಹಲಿಯು ಕೋವಿಡ್ ನಂತರದ ಅವಧಿಗೆ 68 ಪ್ರತಿಶತದಷ್ಟು ಏರಿಕೆ ಕಂಡಿದೆ ಎಂದು ಎನ್‌ಜಿಒ ಒಂದರ ಹೊಸ ಅಧ್ಯಯನ ಮಾಹಿತಿ ಹೊರಹಾಕಿದೆ.

ಈ ಅಂಕಿಅಂಶಗಳನ್ನು'ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ: ಸಾಂದರ್ಭಿಕ ಡೇಟಾ ವಿಶ್ಲೇಷಣೆಯ ಒಳನೋಟಗಳು ಮತ್ತು ತಂತ್ರಜ್ಞಾನ-ಚಾಲಿತ ಮಧ್ಯಸ್ಥಿಕೆ ತಂತ್ರಗಳ ಅಗತ್ಯತೆ' ಎಂಬ ಶೀರ್ಷಿಕೆಯ ಸಮಗ್ರ ವರದಿಯಲ್ಲಿ ಅನಾವರಣಗೊಳಿಸಲಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಸ್ಥಾಪಿಸಿದ Games24x7 ಮತ್ತು ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನ (KSCF) ಜಂಟಿಯಾಗಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

Uttar Pradesh, Bihar, Andhra Pradesh among top states in child trafficking

'ವ್ಯಕ್ತಿಗಳ ಕಳ್ಳಸಾಗಣೆ ವಿರುದ್ಧದ ವಿಶ್ವ ದಿನ'ದ ಅಂಗವಾಗಿ ಭಾನುವಾರ ಬಿಡುಗಡೆಯಾದ ವರದಿಯು ದೇಶದಲ್ಲಿ ಮಕ್ಕಳ ಕಳ್ಳಸಾಗಣೆ ಬಿಕ್ಕಟ್ಟಿನ ಆತಂಕಕಾರಿ ಚಿತ್ರಣವನ್ನು ಚಿತ್ರಿಸಿದೆ. 2016 ಮತ್ತು 2022 ರ ನಡುವೆ ಗರಿಷ್ಠ ಸಂಖ್ಯೆಯ ಮಕ್ಕಳ ಕಳ್ಳಸಾಗಣೆ ನಡೆದಿರುವಲ್ಲಿ ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರಪ್ರದೇಶ ಮೊದಲ ಮೂರು ರಾಜ್ಯಗಳಾಗಿವೆ ಎಂದು ವರದಿ ತೋರಿಸಿದೆ.

ಗಮನಾರ್ಹವಾಗಿ, ದೆಹಲಿಯು ಕೋವಿಡ್ ಪೂರ್ವದಿಂದ ನಂತರದ ಅವಧಿಯವರೆಗೆ ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಶೇಕಡಾ 68 ರಷ್ಟು ಏರಿಕೆ ಕಂಡಿದೆ. ಮಕ್ಕಳ ಕಳ್ಳಸಾಗಣೆಯಲ್ಲಿ ಅಗ್ರ ಜಿಲ್ಲೆಯಲ್ಲಿ, ಜೈಪುರ ನಗರವು ದೇಶದ ಹಾಟ್‌ಸ್ಪಾಟ್ ಆಗಿ ಹೊರಹೊಮ್ಮಿದೆ. ಆದರೆ ಪಟ್ಟಿಯಲ್ಲಿನ ಇತರ ನಾಲ್ಕು ಹಾಟ್ ಸ್ಲಾಟ್‌ಗಳು ರಾಷ್ಟ್ರ ರಾಜಧಾನಿಯಲ್ಲಿವೆ ಎಂದು ಕಂಡುಬಂದಿದೆ.

Games24x7 ನ ಡೇಟಾ ಸೈನ್ಸ್ ತಂಡವು 2016 ರಿಂದ 2022 ರವರೆಗೆ 21 ರಾಜ್ಯಗಳಲ್ಲಿ 262 ಜಿಲ್ಲೆಗಳಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ KSCF ಮತ್ತು ಅದರ ಪಾಲುದಾರರು ಸಂಗ್ರಹಿಸಿದ್ದಾರೆ. ಇದು ಮಕ್ಕಳ ಕಳ್ಳಸಾಗಣೆಯಲ್ಲಿನ ಪ್ರಸ್ತುತ ಪ್ರವೃತ್ತಿಗಳು ಮತ್ತು ಮಾದರಿಗಳ ಸಮಗ್ರ ಅವಲೋಕನವನ್ನು ಒದಗಿಸುತ್ತದೆ. ಈ ಅವಧಿಯಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 13,549 ಮಕ್ಕಳನ್ನು ರಕ್ಷಿಸಲಾಗಿದೆ.

Uttar Pradesh, Bihar, Andhra Pradesh among top states in child trafficking

ರಕ್ಷಿಸಲ್ಪಟ್ಟ ಮಕ್ಕಳಲ್ಲಿ ಶೇಕಡಾ 80 ರಷ್ಟು ಮಕ್ಕಳು 13 ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ, ಶೇಕಡಾ 13 ರಷ್ಟು ಒಂಬತ್ತು ರಿಂದ 12 ವರ್ಷ ವಯಸ್ಸಿನವರು ಮತ್ತು ಶೇಕಡಾ 2 ಕ್ಕಿಂತ ಹೆಚ್ಚು ಒಂಬತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಮಕ್ಕಳ ಕಳ್ಳಸಾಗಣೆಯು ವಿವಿಧ ವಯೋಮಾನದ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದು ಒಂದು ವ್ಯಾಪಕವಾದ ಸಮಸ್ಯೆಯಾಗಿದೆ ಎಂದು ವರದಿ ಸೂಚಿಸುತ್ತದೆ.

ಬಾಲಕಾರ್ಮಿಕ ಪದ್ಧತಿ ಮಿತಿಮೀರಿರುವ ಕೈಗಾರಿಕೆಗಳ ಮೇಲೂ ವರದಿ ಬೆಳಕು ಚೆಲ್ಲಿದೆ. ಹೋಟೆಲ್‌ಗಳು ಮತ್ತು ಡಾಬಾಗಳು ಗರಿಷ್ಠ ಸಂಖ್ಯೆಯ ಬಾಲಕಾರ್ಮಿಕರನ್ನು (ಶೇ. 15.6), ನಂತರದ ಸ್ಥಾನದಲ್ಲಿ ಆಟೋಮೊಬೈಲ್ ಅಥವಾ ಸಾರಿಗೆ ಉದ್ಯಮ (ಶೇ. 13), ಮತ್ತು ಗಾರ್ಮೆಂಟ್ಸ್ (ಶೇ. 11.18)ಗಳಲ್ಲಿ ಇದ್ದಾರೆ. ಐದು ಮತ್ತು ಎಂಟು ವರ್ಷ ವಯಸ್ಸಿನ ಮಕ್ಕಳು ಸೌಂದರ್ಯವರ್ಧಕ ಉದ್ಯಮದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದಿದೆ ಎಂದು ವರದಿ ಹೇಳಿದೆ.

ವರದಿಯು ವಿವಿಧ ರಾಜ್ಯಗಳಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಗಮನಾರ್ಹ ಏರಿಕೆಯನ್ನು ಪ್ರದರ್ಶಿಸಿದೆ. ಉತ್ತರ ಪ್ರದೇಶದಲ್ಲಿ ಭಾರಿ ಹೆಚ್ಚಳ ಕಂಡು ಬಂದಿದೆ. ಪೂರ್ವ ಕೋವಿಡ್ ಹಂತದಲ್ಲಿ (2016-2019) ವರದಿಯಾದ ಘಟನೆಗಳ ಸಂಖ್ಯೆ 267 ಆಗಿತ್ತು. ಆದರೆ ಕೋವಿಡ್ ನಂತರದ ಹಂತದಲ್ಲಿ (2021-2022) ಇದು ತೀವ್ರವಾಗಿ 1,214 ಕ್ಕೆ ಏರಿದೆ. ಅಂತೆಯೇ, ಕರ್ನಾಟಕವು 18 ಪಟ್ಟು ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ವರದಿಯಾದ ಘಟನೆಗಳು 6 ರಿಂದ 110 ಕ್ಕೆ ಏರಿದೆ.

ಈ ಆತಂಕಕಾರಿ ಅಂಕಿಅಂಶಗಳ ಹೊರತಾಗಿಯೂ, ವರದಿಯು ಕಳೆದ ದಶಕದಲ್ಲಿ ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಗಳ ಸಕಾರಾತ್ಮಕ ಪರಿಣಾಮವನ್ನು ಎತ್ತಿ ತೋರಿಸಿದೆ. ಆಗಾಗ್ಗೆ ಜಾಗೃತಿ ಅಭಿಯಾನಗಳು ಪ್ರಕರಣ ವರದಿ ಮಾಡುವಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ ಮತ್ತು ಮಕ್ಕಳ ಕಳ್ಳಸಾಗಣೆಗೆ ಕಡಿವಾಣ ಹಾಕಿವೆ. ಆದರೆ, ಮಕ್ಕಳ ಕಳ್ಳಸಾಗಣೆಯನ್ನು ಪರಿಣಾಮಕಾರಿಯಾಗಿ ಎದುರಿಸಲು ಸಮಗ್ರ ಕಳ್ಳಸಾಗಣೆ ವಿರೋಧಿ ಕಾನೂನಿನ ಅಗತ್ಯವನ್ನು ವರದಿ ಒತ್ತಿಹೇಳಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+