ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶ ಚುನಾವಣಾ ಸಮೀಕ್ಷೆ: ರಂಗೇರುತ್ತಿರುವ ಬಿಜೆಪಿ ಕನಸು!

By Balaraj
|
Google Oneindia Kannada News

ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳಾದ ಬಿಎಸ್ಪಿ, ಎಸ್ಪಿ ಪಕ್ಷಗಳಿಗೆ ನಿರ್ಣಾಯಕವಾಗಿರುವ ಉತ್ತರಪ್ರದೇಶ ಚುನಾವಣೆ 2017ರ ಆದಿಯಲ್ಲಿ ನಡೆಯಲಿದೆ.

ನೆಹರೂ- ಗಾಂಧಿ ಕುಟುಂಬಕ್ಕೆ ರಾಜಕೀಯ ಕರ್ಮಭೂಮಿಯಾಗಿರುವ ಉತ್ತರಪ್ರದೇಶ ಚುನಾವಣೆಗೆ ಕಾಂಗ್ರೆಸ್ ಪಕ್ಷ ಎಲ್ಲರಿಗಿಂತ ಮುನ್ನ ಆಖಾಡಕ್ಕಿಳಿದಿದ್ದಾಗಿದೆ. ರಾಜಕೀಯ ತಂತ್ರಗಾರಿಕಾ ನಿಪುಣ ಪ್ರಶಾಂತ್ ಕಿಶೋರ್ ಈಗಾಗಲೇ ತಮ್ಮ ತಂಡದ ಜೊತೆಗೆ ಕಾಂಗ್ರೆಸ್ಸಿಗಾಗಿ ಕೆಲಸ ಮಾಡುತ್ತಿದ್ದಾರೆ.

ಮೂರು ತಿಂಗಳಿನ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಉತ್ತರಪ್ರದೇಶದಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತಿದೆ. ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿದರೆ ಬಿಎಸ್ಪಿ ಪರವಾಗಿದ್ದ ಮತದಾರನ ಒಲವು ಬಿಜೆಪಿಯತ್ತ ತಿರುಗುತ್ತಿದೆ.
(ಉ.ಪ್ರ ಅಸೆಂಬ್ಲಿ ಚುನಾವಣಾ ಸಮೀಕ್ಷೆ, ಸರ್ವಂ ಅತಂತ್ರಮಯಂ)

ಇಂಡಿಯಾ ಟುಡೇ ಮತ್ತು ಏಕ್ಸಿಸ್ ಜಂಟಿಯಾಗಿ ನಡೆಸಿದ ಸರ್ವೇಯ ಪ್ರಕಾರ, ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅನುಕೂಲಕರವಾದ ವಾತಾವರಣವಿದೆ. ಆದರೂ, ಸ್ವಂತ ಬಲದಿಂದ ಅಧಿಕಾರಕ್ಕೇರುವ ಸಾಧ್ಯತೆ ಕಮ್ಮಿ.

ಕಳೆದ ಮೂರು ತಿಂಗಳಲ್ಲಿ ಪ್ರಕಟಗೊಂಡ ಸಮೀಕ್ಷೆಯನ್ವಯ ಬಿಜೆಪಿ ತನ್ನ ಸ್ಥಿತಿಯನ್ನು ಸುಧಾರಿಸುಕೊಳ್ಳುತ್ತಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಸದ್ಯದ ಮಟ್ಟಿಗೆ ಯಾವುದೇ ಅನುಕೂಲಕರ ವಾತಾವರಣವಿಲ್ಲ.

ಸಮೀಕ್ಷೆಯ ಪ್ರಕಾರ ಮತದಾರರಿಗೆ ಅತ್ಯುತ್ತಮ ಸಿಎಂ ಆಯ್ಕೆ ಯಾರು, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದು? ಮುಂದೆ ಓದಿ..

ಉತ್ತರಪ್ರದೇಶ ಮುಂದಿನ ಸಿಎಂ

ಉತ್ತರಪ್ರದೇಶ ಮುಂದಿನ ಸಿಎಂ

ಮಾಯಾವತಿ (ಬಿಎಸ್ಪಿ) - ಶೇ. 31
ಅಖಿಲೇಶ್ ಯಾದವ್ (ಎಸ್ಪಿ) - ಶೇ. 27
ರಾಜನಾಥ್ ಸಿಂಗ್ (ಬಿಜೆಪಿ) - ಶೇ. 18
ಯೋಗಿ ಆದಿತ್ಯನಾಥ್ (ಬಿಜೆಪಿ) - ಶೇ. 14
ಪ್ರಿಯಾಂಕಾ ವಾಧ್ರಾ - ಶೇ. 2
ಶೀಲಾ ದೀಕ್ಷಿತ್ (ಕಾಂಗ್ರೆಸ್) - ಶೇ. 1
ಮುಲಾಯಂ ಸಿಂಗ್ (ಎಸ್ಪಿ) - ಶೇ. 1

ಕಾನೂನು ಮತ್ತು ಸುವ್ಯವಸ್ಥೆ

ಕಾನೂನು ಮತ್ತು ಸುವ್ಯವಸ್ಥೆ

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಯಾರು ಉತ್ತಮ ಎನ್ನುವ ಪ್ರಶ್ನೆಗೆ ಮಾಯಾವತಿ ಪರ ಶೇ. 64, ಅಖಿಲೇಶ್ ಯಾದವ್ ಪರ ಶೇ.17 ಮತ್ತು ರಾಜನಾಥ್ ಸಿಂಗ್ ಪರ ಶೇ. 18 ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದವರು ಪ್ರತಿಕ್ರಿಯಿಸಿದ್ದಾರೆ.

ಮತಗಳಿಕೆ ಶೇಕಡಾವಾರು ಪ್ರಮಾಣ

ಮತಗಳಿಕೆ ಶೇಕಡಾವಾರು ಪ್ರಮಾಣ

ಸಮೀಕ್ಷೆಯ ಪ್ರಕಾರ ವಿವಿಧ ಪಕ್ಷಗಳು ಗಳಿಸಬಹುದಾದ ಶೇಕಡಾವಾರು ಮತಗಳಿಕೆ ಪ್ರಮಾಣ ಹೀಗಿದೆ:


ಬಿಜೆಪಿ - ಶೇ. 31
ಬಿಎಸ್ಪಿ - ಶೇ. 28
ಎಸ್ಪಿ - ಶೇ. 25
ಕಾಂಗ್ರೆಸ್ - ಶೇ. 6
ಇತರರು - ಶೇ. 10

ಯಾರಿಗೆ ಎಷ್ಟು ಸ್ಥಾನ?

ಯಾರಿಗೆ ಎಷ್ಟು ಸ್ಥಾನ?

ಒಟ್ಟು ಸ್ಥಾನಗಳು - 403
ಬಿಜೆಪಿ: 170-183
ಬಿಎಸ್ಪಿ: 115-124
ಎಸ್ಪಿ: 94-103
ಕಾಂಗ್ರೆಸ್ : 8-12
ಇತರರು: 2-6

ಕಾಂಗ್ರೆಸ್ ಮುಕ್ತ್ ಭಾರತ್

ಕಾಂಗ್ರೆಸ್ ಮುಕ್ತ್ ಭಾರತ್

ಕಾಂಗ್ರೆಸ್ ಮುಕ್ತ್ ಭಾರತ್ ಎನ್ನುವ ಬಿಜೆಪಿಯ ಘೋಷ ವಾಕ್ಯಕ್ಕೆ ಸಮೀಕ್ಷೆಯಲ್ಲಿ ಶೇ. 54ರಷ್ಟು ಜನ ಸಹಮತ ವ್ಯಕ್ತಪಡಿಸಲಿಲ್ಲ. ಶೇ. 17ರಷ್ಟು ಜನ ಮಾತ್ರ ಬಿಜೆಪಿಯ ಘೋಷ ವಾಕ್ಯಕ್ಕೆ ಸಹಮತ ವ್ಯಕ್ತ ಪಡಿಸಿದ್ದಾರೆ.

English summary
India Today-Axis Opinion Poll for Uttar Pradesh assembly: BJP dream run to continue, but a hung Assembly likely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X